ಬೆಂಗಳೂರಲ್ಲಿ ಸೋಂಕು ಹೆಚ್ಚಾಗಲು ಇದೇ ಕಾರಣವಾಯ್ತಾ?

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ನಗರದ ಕೊವಿಡ್​ ಸೆಂಟರ್​ಗಳಿಂದ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಟೆಸ್ಟ್ ಮಾಡದೆ ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ರೋಗಿಗಳ ಬಿಡುಗಡೆ ವೇಳೆ ಸರ್ಕಾರದ ಯಾವ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಕೊರೊನಾದಿಂದ ಗುಣಮುಖನಾದ ವ್ಯಕ್ತಿಯನ್ನು ಬೆಂಗಳೂರಿನ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಎರಡನೇ ಬಾರಿ ಟೆಸ್ಟ್ ಮಾಡದೆ ಬಿಡುಗಡೆ ಮಾಡುತ್ತಿದ್ದು, ರೋಗದಿಂದ ಗುಣಮುಖರಾದವರು 14 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ಸೂಚನೆ ನೀಡಿ […]

ಬೆಂಗಳೂರಲ್ಲಿ ಸೋಂಕು ಹೆಚ್ಚಾಗಲು ಇದೇ ಕಾರಣವಾಯ್ತಾ?
Edited By:

Updated on: Jul 27, 2020 | 2:57 PM

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.

ನಗರದ ಕೊವಿಡ್​ ಸೆಂಟರ್​ಗಳಿಂದ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಟೆಸ್ಟ್ ಮಾಡದೆ ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ರೋಗಿಗಳ ಬಿಡುಗಡೆ ವೇಳೆ ಸರ್ಕಾರದ ಯಾವ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.

ಕೊರೊನಾದಿಂದ ಗುಣಮುಖನಾದ ವ್ಯಕ್ತಿಯನ್ನು ಬೆಂಗಳೂರಿನ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಎರಡನೇ ಬಾರಿ ಟೆಸ್ಟ್ ಮಾಡದೆ ಬಿಡುಗಡೆ ಮಾಡುತ್ತಿದ್ದು, ರೋಗದಿಂದ ಗುಣಮುಖರಾದವರು 14 ದಿನ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ಸೂಚನೆ ನೀಡಿ ಕಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ರೋಗದಿಂದ ಗುಣಮುಖರಾದವರಿಗೆ ಎರಡನೇ ಬಾರಿ ಟೆಸ್ಟ್ ಮಾಡಿ, ವರದಿ ನೆಗೆಟಿವ್ ಬಂದ ನಂತರವೇ ಬಿಡುಗಡೆ ಮಾಡಬೇಕು. ಆದರೆ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಎರಡನೇ ಬಾರಿ ಟೆಸ್ಟ್ ಮಾಡದೆ ರೋಗಿಗಳನ್ನ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ.

Published On - 3:50 pm, Sun, 26 July 20