ಕೊಹ್ಲಿ Lifeಗೆ ತಿರುವು ಕೊಟ್ಟಿದ್ದೇ ಸಚಿನ್ ನೀಡಿದ ಆ Tips?!
2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಹೇಗಿತ್ತು ಅಂದ್ರೆ, ಕೊಹ್ಲಿಗೆ ಕ್ರಿಕೆಟ್ ಬದುಕೇ ಅಂತ್ಯವಾಗಿ ಹೋಗುತ್ತೆ ಅನ್ನೋ ಆತಂಕ ಶುರುವಾಗಿತ್ತು. ಯಾಕಂದ್ರೆ ಕ್ರಿಕೆಟ್ ಪಂಡಿತರು ಕೊಹ್ಲಿಗೆ ವಿದೇಶಿ ನೆಲದಲ್ಲಾಡೋ ಸಾಮರ್ಥ್ಯವಿಲ್ಲ ಅಂತಾ ಅಣುಕಿಸೋದಕ್ಕೆ ಶುರುಮಾಡಿದ್ರು. ವಿರಾಟ್ ಕೊಹ್ಲಿ ಅಂದು ಇಂಗ್ಲೆಂಡ್ ಬೌಲರ್ಗಳ ಮುಂದೆ ಮಕಾಡೆ ಮಲಗಿದ್ರು. ಕೊಹ್ಲಿ outside of stumpನತ್ತ ಎಸೆಯೋ ಬಾಲ್ಗಳನ್ನ ಕೆಣಕಿ ಔಟಾಗ್ತಾರೆ ಅನ್ನೋದು ಬೌಲರ್ಗಳಿಗೆ ಗೊತ್ತಾಗಿ ಹೋಗಿತ್ತು. ಇದನ್ನೇ encash ಮಾಡಿಕೊಂಡ ಬೌಲರ್ ಜೇಮ್ಸ್ ಌಂಡರ್ಸನ್ ಕೊಹ್ಲಿಯನ್ನ ಪ್ರತಿ […]
2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಹೇಗಿತ್ತು ಅಂದ್ರೆ, ಕೊಹ್ಲಿಗೆ ಕ್ರಿಕೆಟ್ ಬದುಕೇ ಅಂತ್ಯವಾಗಿ ಹೋಗುತ್ತೆ ಅನ್ನೋ ಆತಂಕ ಶುರುವಾಗಿತ್ತು. ಯಾಕಂದ್ರೆ ಕ್ರಿಕೆಟ್ ಪಂಡಿತರು ಕೊಹ್ಲಿಗೆ ವಿದೇಶಿ ನೆಲದಲ್ಲಾಡೋ ಸಾಮರ್ಥ್ಯವಿಲ್ಲ ಅಂತಾ ಅಣುಕಿಸೋದಕ್ಕೆ ಶುರುಮಾಡಿದ್ರು.
ವಿರಾಟ್ ಕೊಹ್ಲಿ ಅಂದು ಇಂಗ್ಲೆಂಡ್ ಬೌಲರ್ಗಳ ಮುಂದೆ ಮಕಾಡೆ ಮಲಗಿದ್ರು. ಕೊಹ್ಲಿ outside of stumpನತ್ತ ಎಸೆಯೋ ಬಾಲ್ಗಳನ್ನ ಕೆಣಕಿ ಔಟಾಗ್ತಾರೆ ಅನ್ನೋದು ಬೌಲರ್ಗಳಿಗೆ ಗೊತ್ತಾಗಿ ಹೋಗಿತ್ತು. ಇದನ್ನೇ encash ಮಾಡಿಕೊಂಡ ಬೌಲರ್ ಜೇಮ್ಸ್ ಌಂಡರ್ಸನ್ ಕೊಹ್ಲಿಯನ್ನ ಪ್ರತಿ ಟೆಸ್ಟ್ ಪಂದ್ಯದಲ್ಲೂ ಔಟ್ ಮಾಡಿ ರಣಕೇಕೆ ಹಾಕಿದ್ದ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 134 ರನ್ ಮಾತ್ರ. ಅಲ್ಲಿಗೆ ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕು ಅಂತ್ಯವಾಗಿ ಹೋಯ್ತು ಅಂತಾನೇ ಎಲ್ರೂ ಲೆಕ್ಕಾಚಾರ ಹಾಕಿದ್ರು. ಅದ್ರಲ್ಲೂ ಕ್ರಿಕೆಟ್ ವಿಶ್ಲೇಷಕರು ಕೊಹ್ಲಿಗೆ ವನವಾಸ ಶುರುವಾಯ್ತು ಅಂತಾ ಅಭಿಪ್ರಾಯಪಟ್ಟಿದ್ರು.
ಆದ್ರೆ, ಈ ಕರಾಳ ಪ್ರವಾಸದ ಬಳಿಕ, ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ಬದುಕಿಗೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಆಸ್ಟ್ರೇಲಿಯಾದಲ್ಲಿ. ಅವತ್ತು ಕಾಂಗರೂಗಳ ನೆಲದಲ್ಲಿ ರನ್ ಮಳೆ ಹರಿಸಿದ್ದ ವಿರಾಟ್ ಕೊಹ್ಲಿ ತಮ್ಮ ಮೇಲಿದ್ದ ಅಪವಾದವನ್ನು ತೊಳೆದುಕೊಂಡು ಟೀಕೆ ಮಾಡಿದವರ ಬಾಯಿ ಮುಚ್ಚಿಸಿದ್ರು.
ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಏನು ಗೊತ್ತಾ? ಹೀಗೆ ಕಳಪೆ ಪ್ರದರ್ಶನದಿಂದ ಕಳೆದು ಹೋಗ್ಬೇಕಾಗಿದ್ದ ವಿರಾಟ್ನ ಅದ್ಭುತ ಪ್ರದರ್ಶನಕ್ಕೆ ಕಾರಣ ಯಾರು ಗೊತ್ತಾ? ಅವರೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಇಂಗ್ಲೆಂಡ್ ಪ್ರವಾಸದ ಬಳಿಕ ಮಂಕಾಗಿದ್ದ ಕೊಹ್ಲಿಗೆ, ಕಮ್ಬ್ಯಾಕ್ ಮಾಡೋದಕ್ಕೆ ನೆರವಾಗಿದ್ದೇ ಸಚಿನ್ ಸಲಹೆ. ಹಾಗಾದ್ರೆ ಅವತ್ತು ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಏನು ಗೊತ್ತಾ?
ನಾನು ಇಂಗ್ಲೆಂಡ್‌ನಿಂದ ಹಿಂತಿರುಗಿದ ಬಳಿಕ ಸಚಿನ್ ಪಾಜಿಯೊಂದಿಗೆ ಮಾತನಾಡಿದೆ. ಹಾಗೆ ಅವರ ಜೊತೆ ಮುಂಬೈನಲ್ಲಿ ಕೆಲವು ಸೆಷನ್‌ಗಳನ್ನು ನಡೆಸಿದೆ. ಸಚಿನ್ ನನಗೆ ವೇಗದ ಬೌಲರ್ಗಳನ್ನ ಹೇಗೆ ಎದುರಿಸಬೇಕು. ಆತ್ಮಸ್ಥೈರ್ಯ ಕುಗ್ಗಿದ ಸಮಯದಲ್ಲಿ ಬಾಡಿ ಲ್ಯಾಂಗ್ವೇಜ್ ಹೇಗಿರಬೇಕು ಅನ್ನೋದನ್ನ ತಿಳಿಸಿಕೊಟ್ರು. ಅಂದು ಸಚಿನ್ ನೀಡಿದ ಟಿಪ್ಸ್ ನನಗೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ನೆರವಿಗೆ ಬಂತು ಎಂದು ಕೊಹ್ಲಿ ಹೇಳಿದ್ದಾರೆ
ಹೀಗೆ ವಿರಾಟ್ ತಾವು ಮಂಕಾಗಿದ್ದ ಸಮಯದಲ್ಲಿ ಸಚಿನ್ ನೀಡಿದ್ದ ಟಿಪ್ಸ್ ಹೇಗೆ ಕ್ರಿಕೆಟ್ ಬದುಕಿಗೆ ತಿರುವು ನೀಡಿತು ಅನ್ನೋದನ್ನ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಹಂಚಿಕೊಂಡಿದ್ದಾರೆ.
Published On - 3:25 pm, Sun, 26 July 20