ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್ನಲ್ಲಿ ಈ ಬಾರಿ ಭಕ್ತರಿಗಿಲ್ಲ ನೇರ ದರ್ಶನ ಭಾಗ್ಯ, ಆದರೆ..
ಬೆಂಗಳೂರು:ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಆಡಳಿತವರ್ಗವು ಧಾರ್ಮಿಕ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದೆ. ಇದೀಗ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇಸ್ಕಾನ್ ದೇಗುಲದ ಆಡಳಿತ ಮಂಡಳಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ಹೀಗಾಗಿ, ಈ ಸಲ ಭಕ್ತರಿಗೆ ನೇರ ದರ್ಶನಕ್ಕೆ ಪ್ರವೇಶ ನಿರಾಕರಿಸಿದೆ. ಆದರೆ, ಭಕ್ತರ ಅನುಕೂಲಕ್ಕಾಗಿ ದೇಗುಲದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಭಕ್ತರು ಯೂಟ್ಯೂಬ್ ಮುಖಾಂತರ ವೀಕ್ಷಿಸಬಹುದು ಎಂಬ ಮಾಹಿತಿ ನೀಡಿದೆ. ದೇವಸ್ಥಾನದಲ್ಲಿ […]
ಬೆಂಗಳೂರು:ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಆಡಳಿತವರ್ಗವು ಧಾರ್ಮಿಕ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದೆ.
ಇದೀಗ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇಸ್ಕಾನ್ ದೇಗುಲದ ಆಡಳಿತ ಮಂಡಳಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ಹೀಗಾಗಿ, ಈ ಸಲ ಭಕ್ತರಿಗೆ ನೇರ ದರ್ಶನಕ್ಕೆ ಪ್ರವೇಶ ನಿರಾಕರಿಸಿದೆ.
ಆದರೆ, ಭಕ್ತರ ಅನುಕೂಲಕ್ಕಾಗಿ ದೇಗುಲದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಭಕ್ತರು ಯೂಟ್ಯೂಬ್ ಮುಖಾಂತರ ವೀಕ್ಷಿಸಬಹುದು ಎಂಬ ಮಾಹಿತಿ ನೀಡಿದೆ. ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಪೂಜೆ-ಪುನಸ್ಕಾರ ಹಾಗೂ ಅಭಿಷೇಕವನ್ನು ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.
Published On - 4:49 pm, Sun, 26 July 20