ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ರೈಲು ಯೋಜನೆ ವಿಸ್ತರಣೆಗೊಳ್ಳುತ್ತಲೇ ಇದೆ. ಈಗ ಮೆಟ್ರೋ ನಿರ್ಮಾಣ ಕಾರ್ಯಕ್ಕೆ 872 ಮರ ಕಡಿಯುವ ಅವಶ್ಯಕತೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಹೈಕೋರ್ಟ್ಗೆ ತಿಳಿಸಿದೆ.
ಮರ ಕಡಿಯುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 872 ಮರಗಳ ಪೈಕಿ ಯಾವುದಾದರೂ ಮರವನ್ನು ಉಳಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಿ ಎಂದು ತಜ್ಞರ ಸಮಿತಿಗೆ ಸೂಚಿಸಿದೆ.
ನಮ್ಮ ಮೆಟ್ರೋ ರೈಲು ಮಾರ್ಗ ನಿರ್ಮಾಣಗೊಳ್ಳಲಿರುವ ಸ್ಥಳಕ್ಕೆ ಭೇಟಿ ಮಾಡಿ. 872 ಮರಗಳ ಪೈಕಿ ಎಷ್ಟು ಮರ ಸಂರಕ್ಷಣೆ ಮಾಡಲು ಸಾಧ್ಯ ಎನ್ನುವ ಬಗ್ಗೆ ವರದಿ ನೀಡಿ ಎಂದು ತಜ್ಞರ ಸಮಿತಿಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಅಲ್ಲದೆ, ಫೆ. 15ರೊಳಗೆ ವರದಿ ನೀಡಲು ಹೈಕೋರ್ಟ್ ಸೂಚಿಸಿದೆ.
ಯಲಚೇನಹಳ್ಳಿ-ಅಂಜನಾಪುರ ನಡುವಿನ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಸಿಎಂ BSY ಚಾಲನೆ