ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಹಿಂಸಾಚಾರ: ಎದ್ದುಕಾಣುತ್ತಿದೆ ರಾಜಕೀಯ ಸೇಡು?

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆದಿರುವ ಗಲಭೆಗೆ ಫೇಸ್‌ಬುಕ್ ಪೋಸ್ಟ್‌ ಕೇವಲ ನೆಪ ಮಾತ್ರವಾ? ಏಕೆಂದ್ರೆ ಗಲಾಟೆಯ ಹಿಂದೆ ಹಲವು ಕಾರಣಗಳಿರುವ ಶಂಕೆ ವ್ಯಕ್ತವಾಗಿದೆ. ಗಲಭೆಗೆ ಸೋಲು-ಗೇಲುವಿನ ಸೇಡಿನ ಅಂಶವಿರುವುದು ಎದ್ದುಕಾಣುತ್ತಿದೆ. ನಿನ್ನೆ ನಡೆದ ಗಲಭೆಯಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಜನ ಭಾಗಿಯಾಗಿದ್ದರು ಎನ್ನಲಾಗಿದೆ. ಹಿಂದೆ ಸಗಾಯಿಪುರ ವಾರ್ಡ್‌ಗೆ ಬಿಬಿಎಂಪಿ ಉಪಚುನಾವಣೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ನಿಂದ ಪಳನಿಯಮ್ಮಗೆ ಟಿಕೆಟ್ ನೀಡಿದ್ದರು. ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಹಾಲಿ ಪ್ರಕರಣದ A1 […]

ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಹಿಂಸಾಚಾರ: ಎದ್ದುಕಾಣುತ್ತಿದೆ ರಾಜಕೀಯ ಸೇಡು?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 12, 2020 | 12:12 PM

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆದಿರುವ ಗಲಭೆಗೆ ಫೇಸ್‌ಬುಕ್ ಪೋಸ್ಟ್‌ ಕೇವಲ ನೆಪ ಮಾತ್ರವಾ? ಏಕೆಂದ್ರೆ ಗಲಾಟೆಯ ಹಿಂದೆ ಹಲವು ಕಾರಣಗಳಿರುವ ಶಂಕೆ ವ್ಯಕ್ತವಾಗಿದೆ. ಗಲಭೆಗೆ ಸೋಲು-ಗೇಲುವಿನ ಸೇಡಿನ ಅಂಶವಿರುವುದು ಎದ್ದುಕಾಣುತ್ತಿದೆ.

ನಿನ್ನೆ ನಡೆದ ಗಲಭೆಯಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು ಜನ ಭಾಗಿಯಾಗಿದ್ದರು ಎನ್ನಲಾಗಿದೆ. ಹಿಂದೆ ಸಗಾಯಿಪುರ ವಾರ್ಡ್‌ಗೆ ಬಿಬಿಎಂಪಿ ಉಪಚುನಾವಣೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ನಿಂದ ಪಳನಿಯಮ್ಮಗೆ ಟಿಕೆಟ್ ನೀಡಿದ್ದರು. ಎಸ್‌ಡಿಪಿಐನಿಂದ ಸ್ಪರ್ಧಿಸಿದ್ದ ಹಾಲಿ ಪ್ರಕರಣದ A1 ಆರೋಪಿ ಮುಜಾಮಿಲ್ ಪಾಷ ಬೈಎಲೆಕ್ಷನ್‌ನಲ್ಲಿ ಸೋತಿದ್ದ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹಾಯದಿಂದ ಕಾಂಗ್ರೆಸ್ ಅಭ್ಯರ್ಥಿ ಪಳನಿಯಮ್ಮ ಗೆಲುವು ಸಾಧಿಸಿದ್ದರು. ಹೀಗಾಗಿ ಅಂದಿನಿಂದ ಶಾಸಕರ ಮೇಲೆ ಸೇಡಿಗೆ ಕಾಯುತ್ತಿದ್ದವರು ಫೇಸ್​ಬುಕ್ ಪೋಸ್ಟ್‌ ನೆಪ ಮಾಡಿಕೊಂಡು ಗಲಭೆ ಮಾಡಿರುವ ಅನುಮಾನ ಉಂಟಾಗಿದೆ. ಶಾಸಕರ ಸಂಬಂಧಿಯ ಪೋಸ್ಟ್‌ ಎಲ್ಲರಿಗೂ ವಾಟ್ಸಾಪ್ ಮೂಲಕ ಸ್ಟೇಟಸ್ ರವಾನೆ ಮಾಡಿ, ಗಲಾಟೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us