ಕೆಲಸ ಹುಡುಕುತ್ತಿರುವವರಿಗೆ ಗುಡ್​ ನ್ಯೂಸ್​​ ನೀಡಿದ ಐಟಿ ದಿಗ್ಗಜ HCL!

ಡಿಜಿಟಲ್​ ಸೇವೆಗಳ ಬಳಕೆ ಹೆಚ್ಚುತ್ತಿದೆ. ಹೀಗಾಗಿ, ಐಟಿ ಕಂಪೆನಿಗಳಿಗೆ ಕೆಲಸ ಹೆಚ್ಚಿದೆ. ಅಲ್ಲದೆ, ಎಚ್​​ಸಿಎಲ್​ ಲಾಭ ಕೂಡ ಹೆಚ್ಚುತ್ತಿದೆ. ಹೀಗಾಗಿ, ಸಂಸ್ಥೆ 20 ಸಾವಿರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಕೆಲಸ ಹುಡುಕುತ್ತಿರುವವರಿಗೆ ಗುಡ್​ ನ್ಯೂಸ್​​ ನೀಡಿದ ಐಟಿ ದಿಗ್ಗಜ HCL!
ಪ್ರಾತಿನಿಧಿಕ ಚಿತ್ರ

Updated on: Jan 15, 2021 | 10:35 PM

ನವದೆಹಲಿ: ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಬಹುತೇಕ ಕ್ಷೇತ್ರಗಳ ಗಳಿಕೆ ಇಳಿಕೆ ಹಾದಿ ಹಿಡಿದರೆ, ಐಟಿ ಕ್ಷೇತ್ರ ಮಾತ್ರ ಏಳ್ಗೆ ಕಂಡಿವೆ. ಸಾಕಷ್ಟು ಐಟಿ ಕಂಪೆನಿಗಳು ಕೊರೊನಾ ಮಧ್ಯೆಯೂ ಲಾಭ ಮಾಡಿಕೊಂಡಿವೆ. ಈ ಬೆನ್ನಲ್ಲೇ ಐಟಿ ಕಂಪೆನಿಗಳು ದೊಡ್ಡ ಮಟ್ಟದಲ್ಲಿ ನೌಕರರನ್ನು ತೆಗೆದುಕೊಳ್ಳಲು ಮುಂದಾಗಿವೆ. ಐಟಿ ದಿಗ್ಗಜ ಎಚ್​​ಸಿಎಲ್​ ಟೆಕ್ನಾಲಜಿ ಆರು ತಿಂಗಳಲ್ಲಿ 20 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿದೆ.

ಡಿಜಿಟಲ್​ ಸೇವೆಗಳ ಬಳಕೆ ಹೆಚ್ಚುತ್ತಿದೆ. ಹೀಗಾಗಿ, ಐಟಿ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ಎಚ್​​ಸಿಎಲ್​ ಲಾಭ ಕೂಡ ಹೆಚ್ಚುತ್ತಿದೆ. ಹೀಗಾಗಿ, ಎಚ್​​ಸಿಎಲ್​ ಈ ನಿರ್ಧಾರಕ್ಕೆ ಬಂದಿದೆ. ಎಚ್​​ಸಿಎಲ್​ನಲ್ಲಿ ಸದ್ಯ 1.59 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಮೂರನೇ ತ್ರೈ ಮಾಸಿಕದಲ್ಲಿ ನಾವು 6,500 ಉದ್ಯೋಗಿಗಳನ್ನು ಸಂಸ್ಥೆಗೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಕೆಲಸಕ್ಕೆ ಬೇಡಿಕೆ ಹೆಚ್ಚುತ್ತಿದ್ದು ಹೀಗಾಗಿ, ಹೊಸಬರು ಹಾಗೂ ಅನುಭವಿಗಳನ್ನು ಸಂಸ್ಥೆಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ 4-6 ತಿಂಗಳಲ್ಲಿ 20 ಸಾವಿರ ನೌಕರರನ್ನು ತೆಗೆದುಕೊಳ್ಳುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಎಚ್​ಸಿಎಲ್​ ಟೆಕ್ನಾಲಜಿ ಅಧ್ಯಕ್ಷ ಹಾಗೂ ಮುಖ್ಯಸ್ಥ ವಿಜಯ್​ಕುಮಾರ್ ಹೇಳಿದ್ದಾರೆ.

ಕಳೆದ ಕೆಲ ತಿಂಗಳಿಂದ ಎಚ್​ಸಿಎಲ್​ ಶ್ರೀಲಂಕಾ ಹಾಗೂ ವಿಯೆಟ್ನಾಂನಲ್ಲಿ ಹೂಡಿಕೆ ಮಾಡುತ್ತಿದೆ. ಕಳೆದ ಜೂನ್​ ತಿಂಗಳಲ್ಲಿ ಎಚ್​ಸಿಎಲ್​ ಶ್ರೀಲಂಕಾದಲ್ಲಿ ತನ್ನ ಶಾಖೆ ಆರಂಭಿಸಿದ್ದು, ಸ್ಥಳೀಯ 1500 ಮಂದಿಗೆ ಉದ್ಯೋಗ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

IT ಉದ್ಯಮ ಬೆಳಗಲು ಏನೆಲ್ಲಾ ಆಗಬೇಕು; ಟಿವಿ9 ಸಂವಾದದಲ್ಲಿ ಮೋಹನ್​ದಾಸ್​ ಪೈ

Published On - 10:32 pm, Fri, 15 January 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us