ಹಾಸನ: ಹೌದು ಇಷ್ಟು ದಿನ ಅವರದಿತ್ತು, ಈಗ ನಿಂದು ಜಾಸ್ತಿ ಆಗಿದೆ ಎಂದು ಹಾಸನ ಶಾಸಕ ಪ್ರೀತಂಗೌಡ ವಿರುದ್ಧ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗರಂ ಆದರು. ಹಾಸನದ ಕೆಡಿಪಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದು ಇಷ್ಟು ದಿನ ಹೆಚ್.ಡಿ.ರೇವಣ್ಣ ಎಲ್ಲ ಅನುದಾನ ತಮ್ಮ ಕ್ಷೇತ್ರಕ್ಕೆ ಕೊಂಡೊಯ್ತಿದ್ದರು. ಈಗ ನೀನು ರೇವಣ್ಣಗಿಂತ ಜಾಸ್ತಿ ಮಾಡುತ್ತಿದ್ದೀಯಾ ಎಂದು ಶಾಸಕ ಪ್ರೀತಂಗೌಡಗೆ ತಿರುಗೇಟು ಕೊಟ್ಟರು.
ಇಬ್ಬರ ನಡುವಿನ ವಾಗ್ವಾದ ಮತ್ತೊಮ್ಮೆ ಭುಗಿಲೆದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಇಬ್ಬರನ್ನು ಸಮಾಧಾನಪಡಿಸೋಕೆ ಹರಸಾಹಸ ಪಡಬೇಕಾಯ್ತು. ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕದ್ವಯರು ವಾಗ್ವಾದ ನಡೆಸಿದರು.
ನೀನು ತಂದ ಅನುದಾನ ಎಲ್ರಿಗೂ ಹಂಚಿಕೆ ಆಗ್ಲಿ -ಅತಿವೃಷ್ಟಿ ಹಣಕ್ಕಾಗಿ ಟೇಬಲ್ ಕುಟ್ಟಿ ಶಾಸಕ ಆಕ್ರೋಶ