ಮಕ್ಕಳು ಅತ್ತಾಗ ಚಾಕೋಲೇಟ್​​ ಕೊಡ್ತಾರಲ್ಲ ಹಾಗೇ ನಮ್ದು: ಹೊರಟ್ಟಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ದಳಪತಿಗಳು ಮತ್ತೆ ಶಾಂತಿ ಮಂತ್ರ ಜಪಿಸಿದ್ದು, ಜೆಡಿಎಸ್ ಎಂಎಲ್​ಸಿಗಳು ದಳಾಧಿಪತಿ ಹೆಚ್​ ಡಿ ಕುಮಾರಸ್ವಾಮಿ ಮೇಲಿನ ಅಸಮಾಧಾನ ಮತ್ತು ಮುನಿಸನ್ನು ಮರೆಯಲು ನಿರ್ಧರಿಸಿದ್ದಾರೆ. ಹೆಚ್​ಡಿಕೆ ನಮ್ಮನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿತ್ತು. ಈಗ ಹೆಚ್​.ಡಿ. ಕುಮಾರಸ್ವಾಮಿ ನಮ್ಮ ಜೊತೆ ಮಾತಾಡಿದ್ದಾರೆ. ಅದೊಂದು ಕೆಟ್ಟ ಗಳಿಗೆ ಅದನ್ನ ಮರೆತು ಬಿಡಿ ಎಂದಿದ್ದಾರೆ. ಹೀಗಾಗಿ ಅವರ ಮೇಲಿನ ನಮ್ಮ ಅಸಮಾಧಾನ ತಣ್ಣಗೆ ಆಗಿದೆ ಎಂದು ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಮಕ್ಕಳು ಅತ್ತಾಗ ಚಾಕೋಲೇಟ್​​ […]

ಮಕ್ಕಳು ಅತ್ತಾಗ ಚಾಕೋಲೇಟ್​​ ಕೊಡ್ತಾರಲ್ಲ ಹಾಗೇ ನಮ್ದು: ಹೊರಟ್ಟಿ
ಸಾಧು ಶ್ರೀನಾಥ್​

Updated on: Nov 19, 2019 | 4:27 PM

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ದಳಪತಿಗಳು ಮತ್ತೆ ಶಾಂತಿ ಮಂತ್ರ ಜಪಿಸಿದ್ದು, ಜೆಡಿಎಸ್ ಎಂಎಲ್​ಸಿಗಳು ದಳಾಧಿಪತಿ ಹೆಚ್​ ಡಿ ಕುಮಾರಸ್ವಾಮಿ ಮೇಲಿನ ಅಸಮಾಧಾನ ಮತ್ತು ಮುನಿಸನ್ನು ಮರೆಯಲು ನಿರ್ಧರಿಸಿದ್ದಾರೆ.

ಹೆಚ್​ಡಿಕೆ ನಮ್ಮನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿತ್ತು. ಈಗ ಹೆಚ್​.ಡಿ. ಕುಮಾರಸ್ವಾಮಿ ನಮ್ಮ ಜೊತೆ ಮಾತಾಡಿದ್ದಾರೆ. ಅದೊಂದು ಕೆಟ್ಟ ಗಳಿಗೆ ಅದನ್ನ ಮರೆತು ಬಿಡಿ ಎಂದಿದ್ದಾರೆ. ಹೀಗಾಗಿ ಅವರ ಮೇಲಿನ ನಮ್ಮ ಅಸಮಾಧಾನ ತಣ್ಣಗೆ ಆಗಿದೆ ಎಂದು ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಮಕ್ಕಳು ಅತ್ತಾಗ ಚಾಕೋಲೇಟ್​​ ಕೊಡ್ತಾರಲ್ಲ ಹಾಗೇ ನಮ್ದು:
ಮಕ್ಕಳು ಅತ್ತಾಗ ಚಾಕೋಲೇಟ್​​ ಕೊಡ್ತಾರಲ್ಲ ಹಾಗೇ ನಮ್ದು. ಇವಾಗ ನಮಗೆ ಕುಮಾರಸ್ವಾಮಿ ಚಾಕೋಲೇಟ್​ ಕೊಟ್ಟಿದ್ದಾರೆ. ಚಾಕೋಲೇಟ್​ ಪಡೆದು ನಾವು ಸುಮ್ಮನೆ ಆಗಿದ್ದೇವೆ ಎಂದೂ ಹೊರಟ್ಟಿ ಹೇಳಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us