ಬೆಂಗಳೂರು: ಮಹಾಮಾರಿ ಕೊರೊನಾ ಲಾಕ್ಡೌನ್ನಿಂದ ಏ.17ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಗದಿಯಾಗಿದ್ದ ಮಗಳ ಮದುವೆಯನ್ನು ಜೆಡಿಎಸ್ ವಿಧಾನಪರಿಷತ್ ಸದಸ್ಯ ಮುಂದೂಡಿದ್ದರು. ಈ ಮೂಲಕ ಜನಪ್ರತಿನಿಧಿಯಾಗಿರುವ ಶರವಣ ಅವರು, ಪುತ್ರಿಯ ಮದುವೆಯನ್ನು ಮುಂದೂಡಿ ಬೇರೆಯವರಿಗೆ ಮಾದರಿಯಾಗಿದ್ದರು.
ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿರುವ ಕಾರಣ ಪುತ್ರಿಯ ಮದುವೆಯನ್ನು ಇಂದು ಬೆಳಗಿನ ಶುಭ ಮುಹೂರ್ತದಲ್ಲಿ ನೆರವೇರಿಸಿದ್ದಾರೆ. ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶರವಣ ಪುತ್ರಿ ಶ್ರೇಯಾ ಮತ್ತು ಶೇಶಿರುದ್ಧ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ವಧುವರರಿಗೆ ಆಶೀರ್ವದಿಸಿದ್ದಾರೆ.
Published On - 1:57 pm, Wed, 10 June 20