ಶೃಂಗೇರಿಯಲ್ಲಿ ಮಿಡತೆಗಳ ದಾಳಿ: ತೆಕ್ಕೂರಿನ ಅಡಕೆ ಮರಗಳು ಸ್ವಾಹಾ!

ಚಿಕ್ಕಮಗಳೂರು: ಮಿಡತೆ.. ಇತ್ತೀಚೆಗೆ ಬೆಳಗಾರರಲ್ಲಿ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿದೆ. ಕಳೆದ ವಾರ ಕೋಲಾರದಲ್ಲಿ ಮಿಡತೆ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಆದ್ರೆ ಈಗ ಕಾಫಿನಾಡು ಚಿಕ್ಕಮಗಳೂರಿಗೂ ಮಿಡತೆಗಳು ಕಾಲಿಟ್ಟಿವೆ. ಶೃಂಗೇರಿ ತಾಲೂಕಿನ ತೆಕ್ಕೂರಿನಲ್ಲಿರುವ ಅಡಕೆ ತೋಟದಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಅಡಕೆ ಎಲೆಗಳನ್ನು ಸಂಪೂರ್ಣ ತಿಂದು ತೇಗಿವೆ. ಮಿಡತೆಗಳ ದಾಳಿಗೆ ಮಲೆನಾಡಿನಲ್ಲಿ ಆತಂಕ ಹೆಚ್ಚಾಗಿದೆ. 2 ದಶಕಗಳಿಂದ ಹಳದಿ ಎಲೆ ರೋಗಕ್ಕೆ ಅಡಕೆ ತುತ್ತಾಗಿತ್ತು. 2 ವರ್ಷಗಳ ಅತಿವೃಷ್ಟಿಯಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಈ ಮಧ್ಯೆ ಈಗ ಮಿಡತೆ […]

ಶೃಂಗೇರಿಯಲ್ಲಿ ಮಿಡತೆಗಳ ದಾಳಿ:  ತೆಕ್ಕೂರಿನ ಅಡಕೆ ಮರಗಳು ಸ್ವಾಹಾ!
Follow us
ಆಯೇಷಾ ಬಾನು
|

Updated on:Jun 10, 2020 | 2:30 PM

ಚಿಕ್ಕಮಗಳೂರು: ಮಿಡತೆ.. ಇತ್ತೀಚೆಗೆ ಬೆಳಗಾರರಲ್ಲಿ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿದೆ. ಕಳೆದ ವಾರ ಕೋಲಾರದಲ್ಲಿ ಮಿಡತೆ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಆದ್ರೆ ಈಗ ಕಾಫಿನಾಡು ಚಿಕ್ಕಮಗಳೂರಿಗೂ ಮಿಡತೆಗಳು ಕಾಲಿಟ್ಟಿವೆ.

ಶೃಂಗೇರಿ ತಾಲೂಕಿನ ತೆಕ್ಕೂರಿನಲ್ಲಿರುವ ಅಡಕೆ ತೋಟದಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಅಡಕೆ ಎಲೆಗಳನ್ನು ಸಂಪೂರ್ಣ ತಿಂದು ತೇಗಿವೆ. ಮಿಡತೆಗಳ ದಾಳಿಗೆ ಮಲೆನಾಡಿನಲ್ಲಿ ಆತಂಕ ಹೆಚ್ಚಾಗಿದೆ. 2 ದಶಕಗಳಿಂದ ಹಳದಿ ಎಲೆ ರೋಗಕ್ಕೆ ಅಡಕೆ ತುತ್ತಾಗಿತ್ತು. 2 ವರ್ಷಗಳ ಅತಿವೃಷ್ಟಿಯಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಈ ಮಧ್ಯೆ ಈಗ ಮಿಡತೆ ಕಾಟಕ್ಕೆ ಚಿಕ್ಕಮಗಳೂರಿನ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ.

Published On - 11:36 am, Wed, 10 June 20