AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರಿಗಾದ್ರೆ ವರ್ಚುವಲ್ ಎಲ್ಇಡಿ ಸಭೆಗಳು! ನಮಗೆ ಮಾತ್ರ ಬೇರೇ ಕಾನೂನು.. ಇದ್ಯಾವ ನ್ಯಾಯ? ಡಿಕೆಶಿ ಗರಂ

ಬೆಂಗಳೂರು: ಮದುವೆಯಲ್ಲಿ ಕೇವಲ 50 ಜನರು ಭಾಗಿಯಾಗಬೇಕು ಅಂತಾರೆ, ಅಂತ್ಯಸಂಸ್ಕಾರಕ್ಕೆ 20 ಜನ ಭಾಗಿಯಾಗಬೇಕು ಅಂತಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯವರು ಸಭೆ ಮಾಡಿದ್ದಾರೆ. 20 ಸಾವಿರ ಎಲ್‌ಇಡಿ ಹಾಕಿ ಸಭೆ ಮಾಡಿದ್ದಾರೆ. ಅವರಿಗಾದ್ರೆ ವರ್ಚುವಲ್ ಎಲ್ಇಡಿ ಸಭೆಗಳು! ನಮಗೆ ಮಾತ್ರ ಬೇರೇ ಕಾನೂನು.. ಇದ್ಯಾವ ನ್ಯಾಯ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಐಡಿಯಾವನ್ನು ಅವರು ಕಾಪಿರೈಟ್ ಮಾಡಿದ್ದಾರೆ. ಕಾರ್ಯಕರ್ತರ ಆಧಾರಿತ ಪಕ್ಷ ಮಾಡುತ್ತೇನೆಂದು ಮೊದಲ ದಿನವೇ ನಾನು ಈ ಮಾತನ್ನು […]

ಅವರಿಗಾದ್ರೆ ವರ್ಚುವಲ್ ಎಲ್ಇಡಿ ಸಭೆಗಳು! ನಮಗೆ ಮಾತ್ರ ಬೇರೇ ಕಾನೂನು.. ಇದ್ಯಾವ ನ್ಯಾಯ? ಡಿಕೆಶಿ ಗರಂ
ಡಿಕೆ ಶಿವಕುಮಾರ್
ಸಾಧು ಶ್ರೀನಾಥ್​
| Edited By: |

Updated on:Jun 10, 2020 | 2:43 PM

Share

ಬೆಂಗಳೂರು: ಮದುವೆಯಲ್ಲಿ ಕೇವಲ 50 ಜನರು ಭಾಗಿಯಾಗಬೇಕು ಅಂತಾರೆ, ಅಂತ್ಯಸಂಸ್ಕಾರಕ್ಕೆ 20 ಜನ ಭಾಗಿಯಾಗಬೇಕು ಅಂತಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯವರು ಸಭೆ ಮಾಡಿದ್ದಾರೆ. 20 ಸಾವಿರ ಎಲ್‌ಇಡಿ ಹಾಕಿ ಸಭೆ ಮಾಡಿದ್ದಾರೆ. ಅವರಿಗಾದ್ರೆ ವರ್ಚುವಲ್ ಎಲ್ಇಡಿ ಸಭೆಗಳು! ನಮಗೆ ಮಾತ್ರ ಬೇರೇ ಕಾನೂನು.. ಇದ್ಯಾವ ನ್ಯಾಯ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಪಕ್ಷದ ಐಡಿಯಾವನ್ನು ಅವರು ಕಾಪಿರೈಟ್ ಮಾಡಿದ್ದಾರೆ. ಕಾರ್ಯಕರ್ತರ ಆಧಾರಿತ ಪಕ್ಷ ಮಾಡುತ್ತೇನೆಂದು ಮೊದಲ ದಿನವೇ ನಾನು ಈ ಮಾತನ್ನು ಹೇಳಿದ್ದೆ. ನಮ್ಮ ಚಿಂತನೆ ಮೊಟಕು ಮಾಡುವ ಕೆಲಸ ನಡೀತಿದೆ. ಸಿಎಂಗೆ ಪತ್ರ ಕೊಟ್ಟ ಮೇಲೆ ನನಗೆ ನಾಚಿಕೆ ಆಗ್ತಾ ಇದೆ. ಸೆಲ್ಫ್ ಕ್ಲೈಮ್ ಭಾರತ ಅಂತಾ ಬಿಜೆಪಿಯವರು ಕಾರ್ಯಕ್ರಮ ಮಾಡ್ತಿದ್ದಾರೆ. ಅದೇ ದಿನ ನಾವು ಕಾರ್ಯಕ್ರಮ ಮಾಡುವ ದಿನವಾಗಿದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕ್ರಮ ಮಾಡ್ತೇನೆ: ಹಿರಿಯರ ಸಮ್ಮುಖದಲ್ಲಿ ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕ್ರಮ ಮಾಡುತ್ತೇನೆ. ಕೇವಲ 150 ಜನರಿಗೆ ಅವಕಾಶ ನೀಡಲು ನಾನು ಕೇಳಿದ್ದೆ. ಸಿಎಂ ಯಡಿಯೂರಪ್ಪ ನುಡಿದಂತೆ ನಡೆದುಕೊಳ್ಳುತ್ತಾರೆ, ಸಣ್ಣ ರಾಜಕಾರಣ ಮಾಡಲ್ಲ ಎಂದು ತಿಳಿದುಕೊಂಡಿದ್ದೆ. ಕೆಲವರು ಹೋದಾಗ ಏನಾಯಿತು ಎಂದು ನನಗೆ ಗೊತ್ತು. ನಮ್ಮ ಅಣ್ಣಂದಿರು ಎಂದು ಶ್ರೀರಾಮುಲುಗೆ ಡಿಕೆಶಿ ಟಾಂಗ್ ನೀಡಿದರು.

ಕಾರ್ಯಕ್ರಮ ರದ್ದು ಮಾಡಲ್ಲ: ನೀವು ಅನುಮತಿ ಕೊಟ್ಟಾಗ ಕಾರ್ಯಕ್ರಮ ಮಾಡುತ್ತೇವೆ. ನಾನು ನನ್ನ ಬಿಜೆಪಿ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ. ನಾವು ಕಾರ್ಯಕ್ರಮವನ್ನು ರದ್ದು ಮಾಡುವ ಪ್ರಶ್ನೆ ಇಲ್ಲ. ಸಿಎಂ ಯಡಿಯೂರಪ್ಪಗೆ ಮತ್ತೆ ಪತ್ರವನ್ನು ಬರೆಯುತ್ತೇನೆ. ಈ ಡಿಕೆಶಿ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. MLC ಚುನಾವಣೆ ಬಳಿಕ ಪೊಲಿಟಿಕಲ್ ಟೂರ್ ಮಾಡ್ತೇನೆ. ಕೊರೊನಾ ವಿಚಾರದಲ್ಲಿ ಸರ್ಕಾರ ಪರಿಹಾರ ನೀಡಿದ್ಯಾ? ಈ ಪರಿಹಾರ ಜನರಿಗೆ ತಲುಪಿದೆಯಾ ಎಂದು ಪರಿಶೀಲನೆ ಮಾಡುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ಸುಮಾರು 7 ಸಾವಿರ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದೆವು. ಮೌಖಿಕ ಅನುಮತಿ ಮೇರೆಗೆ ಅನೇಕ ಕಡೆ ಟಿವಿಗಳ್ನು ಹಾಕಿ ಸಿದ್ಧ ಮಾಡಿಕೊಂಡಿದ್ದೆವು. ಆದ್ರೆ ಈಗ ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Published On - 2:15 pm, Wed, 10 June 20