ಜಿಯೋ ಗೇಮಿಂಗ್ ಮಾಸ್ಟರ್ಸ್ ಚಾಂಪಿಯನ್​ಶಿಪ್: ಗೆದ್ದವರಿಗೆ ₹ 12.50 ಲಕ್ಷ ಬಹುಮಾನ!

70 ದಿನಗಳ ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್ ಪೂರ್ಣಗೊಂಡ ನಂತರ ಜಿಯೋ ಗೇಮ್ಸ್‌ನಲ್ಲಿ ಈ ಚಾಂಪಿಯನ್​ಶಿಪ್​ ಆರಂಭವಾಗುತ್ತಿದೆ. ಈ ಚಾಂಪಿಯನ್​ ಶಿಪ್​ನಲ್ಲಿ ಗೆದ್ದರೆ 12,50,000 ರೂಪಾಯಿ ಬಹುಮಾನ ಕೂಡ ಸಿಗಲಿದೆ.

ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Dec 30, 2020 | 3:26 PM

ಮುಂಬೈ: ಜಿಯೋ ಮತ್ತು ಮೀಡಿಯಾ ಟೆಕ್ ಜಂಟಿಯಾಗಿ ಗೇಮಿಂಗ್ ಮಾಸ್ಟರ್ಸ್ ಹೆಸರಿನ ಚಾಂಪಿಯನ್​ಶಿಪ್​ ಆರಂಭಿಸುತ್ತಿದೆ. ಆನ್‌ಲೈನ್ ಗೇಮಿಂಗ್ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

70 ದಿನಗಳ ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್ ಪೂರ್ಣಗೊಂಡ ನಂತರ ಜಿಯೋ ಗೇಮ್ಸ್‌ನಲ್ಲಿ ಈ ಚಾಂಪಿಯನ್​ಶಿಪ್​ ಆರಂಭವಾಗುತ್ತಿದೆ. ಈ ಚಾಂಪಿಯನ್​ ಶಿಪ್​ನಲ್ಲಿ ಗೆದ್ದರೆ 12,50,000 ರೂಪಾಯಿ ಬಹುಮಾನ ಕೂಡ ಸಿಗಲಿದೆ.

ವರ್ಚುವಲ್ ಗೇಮಿಂಗ್ ರಂಗದಲ್ಲಿ ಗೇಮರ್‌ನ ಕೌಶಲ್ಯ, ತಂಡದ ಕೆಲಸ ಮತ್ತು ವಿಶೇಷತೆಯನ್ನು ಪರೀಕ್ಷಿಸಲು ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಇಡೀ ಪಂದ್ಯಾವಳಿಯನ್ನು ಜಿಯೋಟಿವಿ ಎಚ್​ಡಿ ಇಸ್ಪೋರ್ಟ್ಸ್ ಚಾನೆಲ್ ಮತ್ತು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.

ಗೇಮಿಂಗ್ ಮಾಸ್ಟರ್ಸ್ ಗರೆನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹಿಟ್ ಬ್ಯಾಟಲ್ ರಾಯಲ್ ಟೈಟಲ್, ಫ್ರೀ ಫೈರ್ ಗೇಮ್​ ಸ್ಪರ್ಧೆಯಲ್ಲಿರಲಿದೆ. ಜಿಯೋ ಗೇಮ್ಸ್ ಪ್ಲಾಟ್‌ಫಾರ್ಮ್ ಮೂಲಕ ಜಿಯೋ ಮತ್ತು ಜಿಯೋ ಅಲ್ಲದ ಬಳಕೆದಾರರಿಗೆ ಈ ಗೇಮ್​ ಲಭ್ಯವಾಗುವಂತೆ ಮಾಡಲಾಗುತ್ತಿದೆ.

29 ಡಿಸೆಂಬರ್ 2020 ರಿಂದ 09 ಜನವರಿ 2021ರವರೆಗೆ ನೋಂದಣಿಗೆ ಅವಕಾಶ ಇರಲಿದೆ. 13 ಜನವರಿ 2021 ರಿಂದ 07 ಮಾರ್ಚ್ 2021ರವರೆಗೆ ಪಂದ್ಯಾವಳಿ ನಡೆಯಲಿದೆ. ನೋಂದಣಿ ಅಥವಾ ಭಾಗವಹಿಸುವಿಕೆಗೆ ಯಾವುದೇ ಶುಲ್ಕವಿಲ್ಲ.

ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ

ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ

ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್

Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ