ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಿಕೆಟ್ ದೇವರ ದಾಖಲೆ ಮುರಿಯುವ ಸಾಮರ್ಥ್ಯ ಜೋ ರೂಟ್ಗಿದೆ, ಅಂಕಿ ಅಂಶ ಅದನ್ನೇ ಹೇಳುತ್ತಿದೆ..!
ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಜೋ ರೂಟ್ ಇದುವರೆಗೆ 99 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 181 ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿರುವ ರೂಟ್ 49.1 ರ ಸರಾಸರಿಯಲ್ಲಿ 8249 ರನ್ ಬಾರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕುವ ಸಾಮರ್ಥ್ಯ ಮತ್ತು ಪ್ರತಿಭೆ ಇಂಗ್ಲೆಂಡ್ ನಾಯಕ ಜೋ ರೂಟ್ಗೆ ಇದೆ ಎಂದು ಇಂಗ್ಲೆಂಡ್ ಇಂಡದ ಮಾಜಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್ ಅಭಿಪ್ರಾಯಪಟ್ಟಿದ್ದಾರೆ.
ಬಾಯ್ಕಾಟ್ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಬಾರಿ ಚರ್ಚೆ ಹುಟ್ಟು ಹಾಕಿದೆ. ಹಾಗೆಯೇ ಜೆಫ್ರಿ ಬಾಯ್ಕಾಟ್ ಅವರ ಹೇಳಿಕೆಯನ್ನು ಸಹ ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ತೋರುತ್ತಿರುವ ಅಧ್ಬುತ ಪ್ರದರ್ಶನ ಬಾಯ್ಕಾಟ್ ಅವರ ಹೇಳಿಕೆಗೆ ಪುಷ್ಠಿ ನೀಡುವಂತಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡ 2-0 ಯಿಂದ ಕ್ಲೀನ್ ಸ್ವೀಪ್ ಮಾಡಿತು. ಇದರಲ್ಲಿ ನಾಯಕ ಜೋ ರೂಟ್ ಒಟ್ಟು ನಾಲ್ಕು ಇನ್ನಿಂಗ್ಸ್ಗಳಲ್ಲಿ 106.50 ಸರಾಸರಿಯಲ್ಲಿ 426 ರನ್ ಗಳಿಸಿದರು. ಇದರ ಜೊತೆಗೆ ಎರಡು ಶತಕಗಳು ಒಳಗೊಂಡಂತೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿ ಜೀವನದ ಅತ್ಯಧಿಕ 228 ರನ್ ಬಾರಿಸಿದರು. ರೂಟ್ ಅವರ ಈ ಆಟ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲು ಪ್ರಮುಖ ಪಾತ್ರವಹಿಸಿತು. ಹೀಗಾಗಿ ರೂಟ್ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೆ ರೀತಿಯ ಆಟವನ್ನು ಮುಂದುವರಿಸಿದರೆ ಸಚಿನ್ ದಾಖಲೆಗಳು ಪುಡಿ ಪುಡಿಯಾಗಲಿವೆ ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್.. ಗಾಡ್ ಆಫ್ ಕ್ರಿಕೆಟ್ ಎಂದು ಪ್ರಸಿದ್ದರಾಗಿರುವ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾದ ಹೆಮ್ಮೆ ಎಂದರೆ ತಪ್ಪಾಗಲಾರದು. ಟೀಂ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸಿರುವ ಈ ಬ್ಯಾಟಿಂಗ್ ದೈತ್ಯ ಟೀಂ ಇಂಡಿಯಾಕ್ಕಾಗಿ ಟೆಸ್ಟ್ನಲ್ಲಿ 200 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 329 ಇನ್ನಿಂಗ್ಸ್ ಆಡಿರುವ ತೆಂಡೂಲ್ಕರ್ 53.79 ಸರಾಸರಿಯಲ್ಲಿ 15921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳಿದ್ದರೆ, 68 ಅರ್ಧ ಶತಕಗಳಿವೆ. ಅಲ್ಲದೆ ಸಚಿನ್ 6 ಬಾರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 248 ಸಚಿನ್ ಅವರು ಟೆಸ್ಟ್‌ವೊಂದರಲ್ಲಿ ಸಿಡಿಸಿರುವ ಅತ್ಯಧಿಕ ರನ್ ಆಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್.. ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಜೋ ರೂಟ್ ಇದುವರೆಗೆ 99 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 181 ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿರುವ ರೂಟ್ 49.1 ರ ಸರಾಸರಿಯಲ್ಲಿ 8249 ರನ್ ಬಾರಿಸಿದ್ದಾರೆ. ಇದರಲ್ಲಿ 19 ಶತಕ ಹಾಗೂ 49 ಅರ್ಧಶತಕ ಸೇರಿವೆ. ಜೊತೆಗೆ 4 ದ್ವಿಶತಕವನ್ನು ರೂಟ್ ಬಾರಿಸಿದ್ದಾರೆ. 254 ರೂಟ್ ಸಿಡಿಸಿರುವ ಅತ್ಯಧಿಕ ರನ್ ಆಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್, ಸಚಿನ್ ದಾಖಲೆ ಮುರಿಯಬಲ್ಲರಾ? ಜೋ ರೂಟ್ ಅವರ ಸದ್ಯದ ಆಟವನ್ನು ಗಮನಿಸಿದಾಗ, ಸಚಿನ್ ದಾಖಲೆಯನ್ನು ಮುರಿಯುವ ಎಲ್ಲಾ ಸಾದ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಆದರೆ ರೂಟ್ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿ ಈಗಾಗಲೇ 8 ವರ್ಷಗಳು ಬರ್ತಿಯಾಗಿವೆ. ಕ್ರಿಕೆಟ್ ಸಂಪೂರ್ಣವಾಗಿ ಫಿಟ್ನೆಸ್ ಮೇಲಿಯ ಕೇಂದ್ರಿಕೃತವಾಗಿದೆ. ಹೀಗಾಗಿ ರೂಟ್ ಎಲ್ಲಿಯವರೆಗೆ ತಮ್ಮ ಫಿಟ್ನೆಸನ್ನು ಹೀಗೆ ಉಳಿಸಿಕೊಳ್ಳಬಲ್ಲರು ಎಂಬುದು ಪ್ರಶ್ನೆಯಾಗಿದೆ. ಜೊತೆಗೆ ಜಂಟಲ್ಮ್ಯಾನ್ ಗೇಮಿನಲ್ಲಿ ಈಗಾಗಲೇ ಎಂಗ್ಸ್ಟಾರ್ಸ್ಗಳು ತಮ್ಮ ಅಧ್ಬುತ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆಯಲು ಹವಣಿಸುತ್ತಿದ್ದಾರೆ.
ಹೀಗಾಗಿ ಒಂದೊಮ್ಮೆ ರೂಟ್ ಕಳಪೆ ಪ್ರದರ್ಶನದಿಂದ ಅಥವಾ ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರ ನಡೆದರೆ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರು ಹರಿಸಬೇಕಾಗಿದೆ. ಜೋ ರೂಟ್ಗೆ ಹೋಲಿಸಿದರೆ ಸಚಿನ್ ಅತಿ ಕಡಿಮೆ ವಯಸ್ಸಿನಲ್ಲೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟವರು. ಸಚಿನ್ ದೀರ್ಘಾವಧಿಯವರೆಗೆ ಟೆಸ್ಟ್ ಕ್ರಿಕೆಟ್ ಆಡಿ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಜೋ ರೂಟ್, ಸಚಿನ್ ದಾಖಲೆಯನ್ನು ಮುರಿಯುವುದು ಕೊಂಚ ಕಷ್ಟವಾದರೂ, ಕ್ರಿಕೆಟ್‌ನಲ್ಲಿ ಯಾವುದು ಅಸಾಧ್ಯವಲ್ಲ.
ಇಂಗ್ಲೆಂಡ್ನ ಅತ್ಯಂತ ಯಶಸ್ವೀ ನಾಯಕ ಎನಿಸಿಕೊಳ್ಳುವತ್ತ ಜೋ ರೂಟ್ ದಾಪುಗಾಲು