‘ಗಂಗಾ ಕುಲಕರ್ಣಿ, ಶಿವಾನಂದ ವಾಲಿ ಪಕ್ಕಾ ಪ್ಲ್ಯಾನ್ ಮಾಡಿ ನಮ್ಮ ಬಾಳಿಗೆ ಹುಳಿ ಹಿಂಡಿದ್ದರು’
ಬೆಳಗಾವಿ: ಪ್ರೇಮಕವಿ ಹಾಗೂ ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ ವಿಚಾರವಾಗಿ ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ಪಕ್ಕಾ ಪ್ಲ್ಯಾನ್ ಮಾಡಿ ನಮ್ಮ ಬಾಳಿಗೆ ಹುಳಿ ಹಿಂಡಿದ್ದರು ಎಂದು ಕೆ.ಕಲ್ಯಾಣ್ ಹೇಳಿದ್ದಾರೆ. ಕಲ್ಯಾಣ ಇಬ್ಬರ ವಿರುದ್ಧ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಮತ್ತು ಆಸ್ತಿ ವರ್ಗಾವಣೆಯ ಆರೋಪ ಮಾಡಿದ್ದಾರೆ. ಶಿವಾನಂದ ವಾಲಿ 45 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ ಅನ್ನೋ ಮಾತು ಹೇಳಿದ್ದಾರೆ. ಇದಲ್ಲದೆ, ಜಿಲ್ಲೆಯ ಅನಂತಶಯನ ಗಲ್ಲಿಯಲ್ಲಿನ ಜಂಟಿ ಆಸ್ತಿಯನ್ನು ಸಹ ವರ್ಗಾವಣೆ […]
ಬೆಳಗಾವಿ: ಪ್ರೇಮಕವಿ ಹಾಗೂ ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ ವಿಚಾರವಾಗಿ ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ಪಕ್ಕಾ ಪ್ಲ್ಯಾನ್ ಮಾಡಿ ನಮ್ಮ ಬಾಳಿಗೆ ಹುಳಿ ಹಿಂಡಿದ್ದರು ಎಂದು ಕೆ.ಕಲ್ಯಾಣ್ ಹೇಳಿದ್ದಾರೆ. ಕಲ್ಯಾಣ ಇಬ್ಬರ ವಿರುದ್ಧ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಮತ್ತು ಆಸ್ತಿ ವರ್ಗಾವಣೆಯ ಆರೋಪ ಮಾಡಿದ್ದಾರೆ. ಶಿವಾನಂದ ವಾಲಿ 45 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ ಅನ್ನೋ ಮಾತು ಹೇಳಿದ್ದಾರೆ. ಇದಲ್ಲದೆ, ಜಿಲ್ಲೆಯ ಅನಂತಶಯನ ಗಲ್ಲಿಯಲ್ಲಿನ ಜಂಟಿ ಆಸ್ತಿಯನ್ನು ಸಹ ವರ್ಗಾವಣೆ ಮಾಡಿದ್ದಾರೆ ಎಂದು ಕಲ್ಯಾಣ್ ಹೇಳಿದ್ದಾರೆ. 1096/Aನ ಶೇಷಾಚಲ ಬಿಲ್ಡಿಂಗ್‌ನ ಸ್ತಿಯನ್ನು ಜೂನ್ 6ರಂದು ತನ್ನ ಹೆಸರಿಗೆ ಖರೀದಿ ಮಾಡಿಕೊಂಡಿದ್ದ. ಅದೇ ದಿನ ನನ್ನ ಪತ್ನಿ ಆಶ್ವಿನಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಕಲ್ಯಾಣ್ ಹೇಳಿದ್ದಾರೆ.
ಸದ್ಯ ಆರೋಪಿ ಶಿವಾನಂದ ವಾಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ನಾಳೆ ಆತನನ್ನು ಮತ್ತೆ ವಶಕ್ಕೆ ಪಡೆದು ಮಾಳಮಾರುತಿ ಠಾಣೆ ಪೊಲೀಸರಿಂದ ವಿಚಾರಣೆ ನಡೆಸಲಾಗುವುದು ಎಂಬ ಮಾಹಿತಿ ದೊರೆತಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಗಂಗಾ ಕುಲಕರ್ಣಿ ತಲೆಮರೆಸಿಕೊಂಡಿದ್ದು ಆಕೆಗಾಗಿ ಶೋಧ ನಡೆಸಲಾಗುತ್ತಿದೆ.
Published On - 6:50 pm, Tue, 6 October 20