ತಿಂಗಳ ಹಿಂದೆ ಅಡ್ಮಿಟ್ ಆದವನಿಗೆ ಸತ್ತ ಮೇಲೆ ಕೊರೊನಾ ಅಂತೆ, 18 ಲಕ್ಷ ಬಿಲ್ ಅಂತೆ! ಆಸ್ಪತ್ರೆ ಡ್ರಾಮ
ಬೆಂಗಳೂರು: ಮೃತ ದೇಹ ನೀಡಲು ಆಸ್ಪತ್ರೆ ಸಿಬ್ಬಂದಿ ಹೈ ಡ್ರಾಮ ಮಾಡುತ್ತಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ. ಕೊರೊನಾ ಹೊಡೆತಕ್ಕೆ ಪೆಟ್ಟು ತಿಂದ ಖಾಸಗಿ ಆಸ್ಪತ್ರೆಗಳು ಸಿಕ್ಕ ಸಿಕ್ಕ ರೋಗಿಗಳನ್ನು ಕೊರೊನಾ ಸೋಂಕಿತರೆಂದು ಹಣ ಕೀಳಲು ಶುರು ಮಾಡಿವೆ. ಇದರಿಂದ ಬಡವರು ರಕ್ತ ಕಣ್ಣೀರು ಸುರಿಸುವಂತಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಡ್ಮಿಟ್ ಆಗಿದ್ದು ತಿಂಗಳ ಹಿಂದೆ ಆದ್ರೆ ಸತ್ತ ಮೇಲೆ ಹೇಳಿದ್ರು […]

ಬೆಂಗಳೂರು: ಮೃತ ದೇಹ ನೀಡಲು ಆಸ್ಪತ್ರೆ ಸಿಬ್ಬಂದಿ ಹೈ ಡ್ರಾಮ ಮಾಡುತ್ತಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿವೆ. ಕೊರೊನಾ ಹೊಡೆತಕ್ಕೆ ಪೆಟ್ಟು ತಿಂದ ಖಾಸಗಿ ಆಸ್ಪತ್ರೆಗಳು ಸಿಕ್ಕ ಸಿಕ್ಕ ರೋಗಿಗಳನ್ನು ಕೊರೊನಾ ಸೋಂಕಿತರೆಂದು ಹಣ ಕೀಳಲು ಶುರು ಮಾಡಿವೆ. ಇದರಿಂದ ಬಡವರು ರಕ್ತ ಕಣ್ಣೀರು ಸುರಿಸುವಂತಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಡ್ಮಿಟ್ ಆಗಿದ್ದು ತಿಂಗಳ ಹಿಂದೆ ಆದ್ರೆ ಸತ್ತ ಮೇಲೆ ಹೇಳಿದ್ರು ಕೊರೊನಾ ಅಂತ:
ಕಮ್ಮನಹಳ್ಳಿ ಸ್ಪೆಷಲಿಸ್ಟ್ ಹಾಸ್ಪಿಟಲ್ ವಿರುದ್ಧ ಈಗ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಸುಮಾರು ಒಂದು ತಿಂಗಳ ಹಿಂದೆ ಆಕ್ಸಿಡೆಂಟ್ನಲ್ಲಿ ಯುವಕನಿಗೆ ತಲೆಗೆ ಗಾಯ ಆಗಿ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಿದ್ರು. ಒಂದು ತಿಂಗಳ ಬಳಿಕ ಇಂದು ಯುವಕ ಮೃತಪಟ್ಟಿರುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಯುವಕನ ಚಿಕಿತ್ಸೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಿದ್ದಾರೆ. ಆದರೆ ಈಗ ಬಿಲ್ ಕಟ್ಟುವವರೆಗೆ ದೇಹ ಕೊಡಲ್ಲ ಅಂತಿದ್ದಾರಂತೆ.
ಈಗಾಗಲೇ ಕುಟುಂಬಸ್ಥರು 7,5 ಲಕ್ಷ ಮತ್ತು ಮೆಡಿಕಲ್ ಬಿಲ್ 5 ಲಕ್ಷ ನೀಡಿದ್ದಾರೆ. ಒಟ್ಟು ಹನ್ನೆರಡುವರೆ ಲಕ್ಷ ಬಿಲ್ ಪಾವತಿಸಿದ್ದಾರೆ. ಉಳಿದ ಹಣ ಪಾವತಿಸಿ ಬಾಡಿ ಪಡೆಯಲು ಹಾಸ್ಪಿಟಲ್ ಸಿಬ್ಬಂದಿ ಡಿಮಾಂಡ್ ಮಾಡಿದ್ದಾರೆ. ಸತ್ತ ಮೇಲೆ ಕೊರೊನ ಪಾಸಿಟಿವ್ ಬಂದಿದೆ ಎಂದು ಹಾಸ್ಪಿಟಲ್ನವರು ತಿಳಿಸಿದ್ದಾರೆ. ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಬಾಡಿಯನ್ನು ನೀಡಲು ಆಗುವುದಿಲ್ಲ. ಬಿಲ್ ಕಟ್ಟಿ ದೇಹ ತೆಗೆದುಕೊಂಡು ಹೋಗಿ ಅಂದಿದ್ದಾರೆ.
ಹೀಗಾಗಿ ಸಂಬಂಧಿಕರು ಆಸ್ಪತ್ರೆ ಮುಂದೆ ಗಲಾಟೆ ಶುರು ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಟಿವಿ9 ಕ್ಯಾಮೆರ ನೋಡಿದ ಬಳಿಕ ಆಸ್ಪತ್ರೆ ಸಿಬ್ಬಂದಿ ದೇಹ ಕೊಟ್ಟು ಕಳಿಸಿದ್ದಾರೆ. ಇದು ಕೇವಲ ಒಂದು ಕುಟುಂಬದ ಸಮಸ್ಯೆ ಅಲ್ಲ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚು. ಈಗಲಾದ್ರೂ ಸರ್ಕಾರ ಈ ಬಗ್ಗೆ ಚಿಂತಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.





