ಕನಕಪುರ ಚಲೋ: ಯೇಸು ಪ್ರತಿಮೆ ನಿರ್ಮಾಣದ ವಿರುದ್ಧ ಸಿಡಿದೇಳಲು ಕೇಸರಿ ಸೈನ್ಯ ಸಜ್ಜು

|

Updated on: Jan 13, 2020 | 2:35 PM

ರಾಮನಗರ: ಕಪಾಲ ಬೆಟ್ಟದಲ್ಲಿ ತಲೆ ಎತ್ತೋಕೆ ಹೊರಟಿರೋ ಯೇಸು ಪ್ರತಿಮೆಗಾಗಿ ಕನಕಪುರದ ಬಂಡೆ ಡಿಕೆಶಿ ಹಾಗೂ ಬಿಜೆಪಿ ಸರ್ಕಾರ ನಡುವೆ ಸಮರವೇ ನಡೀತಿದೆ. ಇಷ್ಟುದಿನ ಮಾತಿನ ಮೂಲಕ ನಡೀತಿದ್ದ ಯುದ್ಧ ಇಂದು ಮತ್ತೊಂದು ರೂಪ ಪಡೆಯುತ್ತಿದೆ. ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ಕನಕಪುರ ಚಲೋ ಯೆಸ್, ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆಗೆ ಅವಕಾಶ ಇಲ್ಲ ಅಂತ ಕೇಸರಿ ನಾಯಕರು ಗುಡುಗ್ತಿದ್ದರೆ.. ಇತ್ತ ಬೆಟ್ಟದಲ್ಲಿ ಪುತ್ಥಳಿ ನಿರ್ಮಿಸಿಯೇ ಸಿದ್ಧ ಅಂತ ಕನಕಪುರದ ಬಂಡೆ ಶಪಥ ಮಾಡಿದ್ದಾರೆ. ಇದೇ ವಿಚಾರ ಇಟ್ಕೊಂಡು […]

ಕನಕಪುರ ಚಲೋ: ಯೇಸು ಪ್ರತಿಮೆ ನಿರ್ಮಾಣದ ವಿರುದ್ಧ ಸಿಡಿದೇಳಲು ಕೇಸರಿ ಸೈನ್ಯ ಸಜ್ಜು
Follow us on

ರಾಮನಗರ: ಕಪಾಲ ಬೆಟ್ಟದಲ್ಲಿ ತಲೆ ಎತ್ತೋಕೆ ಹೊರಟಿರೋ ಯೇಸು ಪ್ರತಿಮೆಗಾಗಿ ಕನಕಪುರದ ಬಂಡೆ ಡಿಕೆಶಿ ಹಾಗೂ ಬಿಜೆಪಿ ಸರ್ಕಾರ ನಡುವೆ ಸಮರವೇ ನಡೀತಿದೆ. ಇಷ್ಟುದಿನ ಮಾತಿನ ಮೂಲಕ ನಡೀತಿದ್ದ ಯುದ್ಧ ಇಂದು ಮತ್ತೊಂದು ರೂಪ ಪಡೆಯುತ್ತಿದೆ.

ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ಕನಕಪುರ ಚಲೋ
ಯೆಸ್, ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆಗೆ ಅವಕಾಶ ಇಲ್ಲ ಅಂತ ಕೇಸರಿ ನಾಯಕರು ಗುಡುಗ್ತಿದ್ದರೆ.. ಇತ್ತ ಬೆಟ್ಟದಲ್ಲಿ ಪುತ್ಥಳಿ ನಿರ್ಮಿಸಿಯೇ ಸಿದ್ಧ ಅಂತ ಕನಕಪುರದ ಬಂಡೆ ಶಪಥ ಮಾಡಿದ್ದಾರೆ. ಇದೇ ವಿಚಾರ ಇಟ್ಕೊಂಡು ಇಂದು ಕನಕಪುರ ಕೋಟೆಗೆ ಬಿಜೆಪಿ, ಆರ್​ಎಸ್​​ಎಸ್, ಹಿಂದೂ ಜಾಗರಣ ವೇದಿಕೆ ಹಾಗೂ ಸ್ವಾಮೀಜಿಗಳ ನಿಯೋಗ ಲಗ್ಗೆ ಇಡಲಿದೆ. ಯೇಸು ಪ್ರತಿಮೆ ವಿರುದ್ಧ ಕನಕಪುರ ಚಲೋ ಕರೆ ನೀಡಿರೋ ಕಮಲ ಪಡೆ, ಬಂಡೆ ವಿರುದ್ಧ ಬಂಡೇಳೋಕೆ ರಣತಂತ್ರ ರೂಪಿಸಿದೆ.

‘ಕೇಸರಿ’ ಕಲಿಗಳ ವಿರುದ್ಧ ರಣಬೇಟೆಗಾರ ಕೆಂಡಾಮಂಡಲ
ತನ್ನ ಕೋಟೆಯಲ್ಲಿ ಇಂದು ಬಿಜೆಪಿ ನಿಯೋಗ ಘೀಳಿಡೋಕೆ ಸಜ್ಜಾಗ್ತಿದ್ದಂತೇ, ಟ್ರಬಲ್ ಶೂಟರ್ ಕೆರಳಿ ಕೆಂಡವಾಗಿದ್ದಾರೆ. ಕನಕಪುರದಲ್ಲಿ ಅಶಾಂತಿ ಸೃಷ್ಟಿಸೋಕೆ ಬಿಜೆಪಿ ಯತ್ನಿಸ್ತಿದೆ ಅಂತ ವಿಡಿಯೋ ಮೂಲಕ ಬೆಂಕಿಯುಂಡೆಗಳನ್ನೇ ಉಗುಳಿದ್ದಾರೆ. ಇಷ್ಟೇ ಅಲ್ಲ, ಬಿಜೆಪಿ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಿರೋ ರಣಬೇಟೆಗಾರ ಡಿಕೆಶಿ, ವಿವಾದ ಮಾಡೋ ಉದ್ದೇಶಕ್ಕೆ ಕನಕಪುರಕ್ಕೆ ಬರ್ತಿದ್ದಾರೆ. ಯಾರೂ ಪ್ರಚೋದನೆಗೆ ಒಳಗಾಗ್ಬೇಡಿ ಅಂತ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಕನಕಪುರ ಚಲೋಗೆ ಕರೆ ನೀಡಿರೋದು ಪೋಲಿಸರ ನಿದ್ದೆಗೆಸಿದೆ. ಹೆಜ್ಜೆ ಹೆಜ್ಜೆಗೂ ಹದ್ದಿನ ಕಣ್ಣಿಡೋಕೆ ರೆಡಿಯಾಗಿರೋ ಖಾಕಿ ಪಡೆ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಶಾಂತಿಯುತ ಧರಣಿಗೆ ಅವಕಾಶ ನೀಡಿದೆ. 1000ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಿದ್ದು, ಪ್ರತಿಭಟನೆ ವೇಳೆ ಯಾವುದೇ ಗಲಾಟೆ, ಗಲಭೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.




Published On - 9:45 am, Mon, 13 January 20