ಕೆಲವೇ ಕ್ಷಣದಲ್ಲಿ ಅಭ್ಯರ್ಥಿಗಳ ಹಣೆಬರಹ ಬಯಲು, 15 ಕ್ಷೇತ್ರಗಳಲ್ಲೂ ಜಿದ್ದಾಜಿದ್ದಿ ಹೋರಾಟ ಇದೆ!

ಬೆಂಗಳೂರು: ಯಾರು ಗೆಲ್ತಾರೆ. ಯಾರು ಸೋಲ್ತಾರೆ ಇನ್ನೇನು ಗೊತ್ತಾಗುತ್ತೆ. ಆದ್ರೆ, ಅದಕ್ಕೂ ಮುನ್ನ ಮತಗಟ್ಟೆ ಸಮೀಕ್ಷೆ ಭವಿಷ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಹಾಗಿದ್ರೆ ಸಮೀಕ್ಷೆಗಳಲ್ಲಿ ಬಂದ ಅಂಕಿ ಅಂಶಗಳು ಏನು. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುವ ಸಾಧ್ಯತೆ ಇದೆ. ಯಾವ ಯಾವ ಕ್ಷೇತ್ರಗಳಲ್ಲಿ 50:50 ಫೈಟ್ ಇದೆ ಅನ್ನೊದನ್ನ ಇಲ್ಲಿ ಗಮನಿಸಿ. ಮತದಾನೋತ್ತರ ಸಮೀಕ್ಷೆ v/s ಫೈನಲ್ ಫಲಿತಾಂಶ ಕಳೆದೆರಡು ತಿಂಗಳಿಂದ ಎಲ್ಲರೂ ಎದುರು ನೋಡ್ತಿದ್ದ, ಬಹುನಿರೀಕ್ಷಿತ ಉಪ ಚುನಾವಣೆ ಫಲಿತಾಂಶದ ದಿನ ಬಂದೇಬಿಟ್ಟಿದೆ. ಆದರೆ 15 […]

ಕೆಲವೇ ಕ್ಷಣದಲ್ಲಿ ಅಭ್ಯರ್ಥಿಗಳ ಹಣೆಬರಹ ಬಯಲು, 15 ಕ್ಷೇತ್ರಗಳಲ್ಲೂ ಜಿದ್ದಾಜಿದ್ದಿ ಹೋರಾಟ ಇದೆ!
ಸಾಂಕೇತಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:Dec 09, 2019 | 7:56 AM

ಬೆಂಗಳೂರು: ಯಾರು ಗೆಲ್ತಾರೆ. ಯಾರು ಸೋಲ್ತಾರೆ ಇನ್ನೇನು ಗೊತ್ತಾಗುತ್ತೆ. ಆದ್ರೆ, ಅದಕ್ಕೂ ಮುನ್ನ ಮತಗಟ್ಟೆ ಸಮೀಕ್ಷೆ ಭವಿಷ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಹಾಗಿದ್ರೆ ಸಮೀಕ್ಷೆಗಳಲ್ಲಿ ಬಂದ ಅಂಕಿ ಅಂಶಗಳು ಏನು. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುವ ಸಾಧ್ಯತೆ ಇದೆ. ಯಾವ ಯಾವ ಕ್ಷೇತ್ರಗಳಲ್ಲಿ 50:50 ಫೈಟ್ ಇದೆ ಅನ್ನೊದನ್ನ ಇಲ್ಲಿ ಗಮನಿಸಿ.

ಮತದಾನೋತ್ತರ ಸಮೀಕ್ಷೆ v/s ಫೈನಲ್ ಫಲಿತಾಂಶ ಕಳೆದೆರಡು ತಿಂಗಳಿಂದ ಎಲ್ಲರೂ ಎದುರು ನೋಡ್ತಿದ್ದ, ಬಹುನಿರೀಕ್ಷಿತ ಉಪ ಚುನಾವಣೆ ಫಲಿತಾಂಶದ ದಿನ ಬಂದೇಬಿಟ್ಟಿದೆ. ಆದರೆ 15 ಕ್ಷೇತ್ರಗಳ ಫಲಿತಾಂಶದ ಬಗ್ಗೆ ಸಿ ವೋಟರ್ ನಡೆಸಿದ ಮತದಾನೋತ್ತರ ಸಮೀಕ್ಷೆಯತ್ತ ನಾವ್ ಕಣ್ಣು ಹಾಯಿಸಲೇ ಬೇಕು. ಸಿ-ವೋಟರ್ ಸಮೀಕ್ಷೆ ಪ್ರಕಾರ, ಯಡಿಯೂರಪ್ಪ ಸರ್ಕಾರ ಸೇಫ್ ಆಗುತ್ತೆ ಎನ್ನಲಾಗುತ್ತೆ. ಬೈಎಲೆಕ್ಷನ್ ನಡೆದ ಮತಗಟ್ಟೆ ಸಮೀಕ್ಷೆ ಬಿಜೆಪಿಗೆ ಬಹುಮತ ಸಿಗುತ್ತೆ ಅನ್ನೋ ಭವಿಷ್ಯ ನುಡಿದಿವೆ.

ಸಿವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 9 ರಿಂದ 12 ಸ್ಥಾನ ಗೆಲ್ಲಲಿದೆ ಅಂತಾ ಹೇಳಿದೆ. ಇನ್ನು ಕಾಂಗ್ರೆಸ್ 3 ರಿಂದ 6 ಸ್ಥಾನ ಗೆಲ್ಲುವ ಭವಿಷ್ಯ ನುಡಿದಿದೆ. 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಗೆದ್ರೆ 1ಸ್ಥಾನ, ಇಲ್ದೆ ಇದ್ರೆ ಒಂದೂ ಇಲ್ಲ ಎಂದಿದೆ. ಇನ್ನು ಪಕ್ಷೇತರ ಅಭ್ಯರ್ಥಿಗಳ್ಯಾರೂ ಗೆಲ್ಲೋದಿಲ್ಲ ಅಂತಾ ಸಮೀಕ್ಷೆ ಭವಿಷ್ಯ ನುಡಿದಿದೆ.

ಕ್ಷೇತ್ರ: ಗೋಕಾಕ್ ರಮೇಶ್ ಜಾರಕಿ V/S ಲಖನ್ ಜಾರಕಿಹೊಳಿ V/S ಅಶೋಕ್ ಪೂಜಾರಿ ಉಪಚುನಾವಣೆಯ ಅತ್ಯಂತ ಹೈಪ್ರೊಫೈಲ್ ಕ್ಷೇತ್ರ ಗೋಕಾಕ್​​ನಲ್ಲಿ ಕಾಂಗ್ರೆಸ್​ಗೆ ಸೆಡ್ಡು ಹೊಡೆದು ಬಿಜೆಪಿಯಿಂದ ಸ್ಪರ್ಧಿಸಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಗೆಲ್ಲುವ ಸಾಧ್ಯತೆ ಇದೆ ಅಂತಾ ಸಮೀಕ್ಷೆ ಹೇಳಿದೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿರೋ ಲಖನ್ ಜಾರಕಿಹೊಳಿ ಮತ್ತು ಜೆಡಿಎಸ್​ನ ಅಶೋಕ್​ ಪೂಜಾರಿ ಸೋಲುವ ಸಾಧ್ಯತೆ ಇದೆ ಅಂತಾ ಸಿವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.

ಕ್ಷೇತ್ರ: ಹುಣಸೂರು ಹೆಚ್​.ವಿಶ್ವನಾಥ್ V/S ಹೆಚ್​.ಪಿ.ಮಂಜುನಾಥ್ V/S ದೇವರಹಳ್ಳಿ ಸೋಮಶೇಖರ್ ಇನ್ನು ಮತ್ತೊಂದು ಹೈವೋಲ್ಟೇಜ್ ಅಖಾಡ ಹುಣಸೂರಿನಲ್ಲಿ ಸಮೀಕ್ಷೆ ಪ್ರಕಾರ ಬಿಜೆಪಿಗೆ ತೀವ್ರ ಮುಖಭಂಗವಾಗೊ ಸಾಧ್ಯತೆ ಇದೆ. ಬಿಜೆಪಿಯಿಂದ ಕಣಕ್ಕಿಳಿದಿರೋ ಅನರ್ಹ ಶಾಸಕ ಹೆಚ್​.ವಿಶ್ವನಾಥ್ ಮತ್ತು ಜೆಡಿಎಸ್​​ನ ದೇವರಹಳ್ಳಿ ಸೋಮಶೇಖರ್ ಸೋಲೋ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್​.ಪಿ.ಮಂಜುನಾಥ್ ಹುಣಸೂರಿನಲ್ಲಿ ಗೆದ್ದು ಬೀಗೋ ಸಾಧ್ಯತೆ ಇದೆ ಅಂತಾ ಸಮೀಕ್ಷೆ ಹೇಳಿದೆ.

ಕ್ಷೇತ್ರ: ವಿಜಯನಗರ ಆನಂದ್ ಸಿಂಗ್ V/S ವೆಂಕಟರಾವ್ ಘೋರ್ಪಡೆ V/S ಎನ್.ಎಂ.ನಬಿ ಇನ್ನು ಸಿವೋಟರ್ ಸಮೀಕ್ಷೆ ಪ್ರಕಾರ ವಿಜಯನಗರ ರಣಕಾಳಗದಲ್ಲಿ ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿ ಆನಸಿಂಗ್ ಸಿಂಗ್ ವಿಯಯ ಪತಾಕೆ ಹಾರಿಸೋ ಸಾಧ್ಯತೆ ಇದೆ. ಕಾಂಗ್ರೆಸ್​ನ ವೆಂಕಟರಾವ್ ಘೋರ್ಪಡೆ ಮತ್ತು ಜೆಡಿಎಸ್​ನ ಎನ್.ಎಂ.ನಬಿಗೆ ಸೋಲಾಗುವ ಸಾಧ್ಯತೆ ಇದೆ ಅಂತಾ ಸಮೀಕ್ಷೆ ಹೇಳಿದೆ.

ಕ್ಷೇತ್ರ: ಹಿರೇಕೆರೂರು ಬಿ.ಸಿ.ಪಾಟೀಲ್ V/S ಬಿ.ಹೆಚ್.ಬನ್ನಿಕೋಡ ಇನ್ನು ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ.ಸಿ.ಪಾಟೀಲ್​ಗೆ ಗೆಲುವಿನ ಲಕ್ಷ್ಮೀ ಒಲಿಯುವ ಸಾಧ್ಯತೆ ಇದೆ. ಕಾಂಗ್ರೆಸ್​ನ ಬಿ.ಹೆಚ್.ಬನ್ನಿಕೋಡರನ್ನ ಪಾಟೀಲ್ ಮಣಿಸೋ ಸಾಧ್ಯತೆ ಅಂತಾ ಸಮೀಕ್ಷಾ ವರದಿಯಿಂದ ಗೊತ್ತಾಗಿದೆ.

ಕ್ಷೇತ್ರ: ಅಥಣಿ ಮಹೇಶ್ ಕುಮಟಳ್ಳಿ V/S ಗಜಾನನ ಮಂಗಸೂಳಿ ಅಥಣಿ ಅಖಾಡದಲ್ಲಿ ಕಾಂಗ್ರೆಸ್​ನ ಗಜಾನನ ಮಂಗಸೂಳಿ ವಿರುದ್ಧ ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಗೆಲುವಿನ ಕೇಕೆ ಹಾಕೋ ಸಾಧ್ಯತೆ ಇದೆ ಅಂತಾ ಸಿವೋಟರ್ ಸಮೀಕ್ಷೆ ಹೇಳಿದೆ.

ಕ್ಷೇತ್ರ: ಕಾಗವಾಡ ಶ್ರೀಮಂತ ಪಾಟೀಲ್ V/S ರಾಜುಕಾಗೆ V/S ಶ್ರೀಶೈಲ ತುಗಶೆಟ್ಟಿ ಇನ್ನು ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ್ ಮತ್ತು ಜೆಡಿಎಸ್​ನ ಶ್ರೀಶೈಲ ತುಗಶೆಟ್ಟಿಯನ್ನ ಕಾಂಗ್ರೆಸ್ ಕದನಕಲಿ ರಾಜುಕಾಗೆ ಮಣಿಸೋ ಸಾಧ್ಯತೆ ಇದೆ ಅಂತಾ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.

ಕ್ಷೇತ್ರ: ಯಲ್ಲಾಪುರ ಶಿವರಾಮ್ ಹೆಬ್ಬಾರ್ V/S ಭೀಮಣ್ಣ ನಾಯ್ಕ V/S ಚೈತ್ರಾ ಗೌಡ ಯಲ್ಲಾಪುರದಲ್ಲಿ ಕಾಂಗ್ರೆಸ್​ನ ಭೀಮಣ್ಣ ನಾಯ್ಕ ಮತ್ತು ಜೆಡಿಎಸ್​​ನ ಚೈತ್ರಾ ಗೌಡರನ್ನ ಮಣಿಸಿ, ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಗೆಲ್ಲುವ ಸಾಧ್ಯತೆ ಇದೆ ಅಂತಾ ಸಿವೋಟರ್ ಸಮೀಕ್ಷಾ ವರದಿ ಹೇಳಿದೆ.

ಕ್ಷೇತ್ರ: ಮಹಾಲಕ್ಷ್ಮೀ ಲೇಔಟ್ ಕೆ.ಗೋಪಾಲಯ್ಯ Vs ಎಂ.ಶಿವರಾಜ್ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಎಂ.ಶಿವರಾಜ್ ವಿರುದ್ಧ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಗೆದ್ದು ಬೀಗೋ ಸಾಧ್ಯತೆ ಇದೆ ಅಂತಾ ಸೀವೋಟರ್ ಸಮೀಕ್ಷೆ ಹೇಳಿದೆ.

ಕ್ಷೇತ್ರ: ಯಶವಂತಪುರ ಎಸ್​.ಟಿ.ಸೋಮಶೇಖರ್ Vs ಜವರಾಯಿಗೌಡ ಇನ್ನು ಯಶವಂತಪುರ ಬೈಎಲೆಕ್ಷನ್ ಅಖಾಡದಲ್ಲಿ ಕಾಂಗ್ರೆಸ್​ನ ಜವರಾಯಿ ಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಎಸ್​.ಟಿ.ಸೋಮಶೇಖರ್ ಗೆಲ್ಲೋ ಸಾಧ್ಯತೆ ಇದೆ ಅಂತಾ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.

ಕ್ಷೇತ್ರ : ಕೆ.ಆರ್​.ಪುರಂ ಭೈರತಿ ಬಸವರಾಜ್ Vsನಾರಾಯಣಸ್ವಾಮಿ ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್​ನ ನಾರಾಯಣಸ್ವಾಮಿಯನ್ನ ಮಣಿಸಿ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಗೆಲುವಿನ ಕೇಕೆ ಹಾಕೋ ಸಾಧ್ಯತೆ ಇದೆ ಅಂತಾ ಮತದಾನೋತ್ತರ ಸಿವೋಟರ್ ಸಮೀಕ್ಷೆ ಹೇಳಿದೆ.

ಕ್ಷೇತ್ರ: ಹೊಸಕೋಟೆ ಎಂಟಿಬಿ ನಾಗರಾಜ್ V/S ಪದ್ಮಾವತಿ ಸುರೇಶ್ ಇನ್ನು ಹೊಸಕೋಟೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಸುರೇಶ್​ರನ್ನ ಭಾರಿ ಅಂತರದಲ್ಲಿ ಮಣಿಸಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆಲುವಿನ ಸ್ಟೆಪ್ ಹಾಕೋ ಸಾಧ್ಯತೆ ಇದೆ ಅಂತಾ ಸಿವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.

ಕ್ಷೇತ್ರ: ಚಿಕ್ಕಬಳ್ಳಾಪುರ – (50-50 ಫೈಟ್) ಡಾ.ಕೆ.ಸುಧಾಕರ್ V/S ಎಂ.ಆಂಜಿನಪ್ಪ ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ಆಂಜಿನಪ್ಪ ನಡುವೆ ಸಮಬಲದ ಹೋರಾಟ ನಡೆಯೋ ಸಾಧ್ಯತೆ ಇದೆ ಅಂತಾ ಸಮೀಕ್ಷಾ ವರದಿ ಹೇಳಿದೆ.

ಕ್ಷೇತ್ರ: ಶಿವಾಜಿನಗರ (50-50 ಫೈಟ್) ಎಂ.ಸರವಣ Vs ರಿಜ್ವಾನ್ ಅರ್ಷದ್ ಇನ್ನು ಸಿವೋಟರ್ ಸಮೀಕ್ಷೆ ಪ್ರಕಾರ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ, ಬಿಜೆಪಿಯ ಎಂ.ಸರವಣ ಮತ್ತು ಕಾಂಗ್ರೆಸ್​ನ ರಿಜ್ವಾನ್​ ಅರ್ಷದ್ ನಡುವೆ ಸಮಬಲದ ಹೋರಾಟ ನಡೆಯೋ ಸಾಧ್ಯತೆ ಇದೆ.

ಕ್ಷೇತ್ರ: ರಾಣೆಬೆನ್ನೂರು (50-50 ಫೈಟ್) ಕೆ.ಬಿ.ಕೋಳಿವಾಡ V/S ಅರುಣ್ ಕುಮಾರ್ ಪೂಜಾರ್ ತ್ರಿಕೋನ ಸಮರ ಏರ್ಪಟ್ಟಿರೋ ಕದನಕಣ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯೋ ಸಾಧ್ಯತೆ ಇದೆ ಅಂತಾ ಸಮೀಕ್ಷೆ ಭವಿಷ್ಯ ನುಡಿದಿದೆ. ಕಾಂಗ್ರೆಸ್​ನ ಕೆ.ಬಿ.ಕೋಳಿವಾಡ ಮತ್ತು ಬಿಜೆಪಿ ಅರುಣ್ ಕುಮಾರ್ ಪೂಜಾರ್ ಮಧ್ಯೆ 50-50 ಫೈಟ್ ಏರ್ಪಡಬಹುದು ಅಂತಾ ಸಮೀಕ್ಷೆ ಹೇಳಿದೆ.

ಕ್ಷೇತ್ರ: ಕೆ.ಆರ್.ಪೇಟೆ – (50-50 ಫೈಟ್) ಡಾ.ಕೆ.ಸಿ.ನಾರಾಯಣಗೌಡ V/S ಕೆ.ಬಿ.ಚಂದ್ರಶೇಖರ್ V/S ಬಿ.ಎಲ್.ದೇವರಾಜು ಇನ್ನು ತ್ರಿಕೋನ ಹಣಾಹಣಿ ಏರ್ಪಟ್ಟಿರೋ ಕೆ.ಆರ್​.ಪೇಟೆಯಲ್ಲಿ ಜಿದ್ದಾಜಿದ್ದಿನ ಸಮರ ಏರ್ಪಡೋ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿ ಡಾ.ಕೆ.ಸಿ.ನಾರಾಯಣಗೌಡ ಮತ್ತು ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ನಡುವೆ 50-50 ಫೈಟ್ ಏರ್ಪಟ್ಟಿದೆ ಅಂತಾ ಸಮೀಕ್ಷಾ ವರದಿ ಹೇಳಿದೆ.

ಒಟ್ನಲ್ಲಿ, ಸಿವೋಟರ್ ಸಮೀಕ್ಷೆ ಪ್ರಕಾರ ಉಪಚುನಾವಣೆಯಲ್ಲಿ ಬಿಜೆಪಿ ಮೆಲುಗೈ ಸಾಧಿಸಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಲಿರೋ ಅಸಲಿ ಫಲಿತಾಂಶದ ಮೇಲೆ ಜನತೆಯ ದೃಷ್ಟಿ ನೆಟ್ಟಿದೆ.

Published On - 6:35 am, Mon, 9 December 19

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ