ಹೌದು ಹುಲಿಯಾ! ಸೋಲಿನಲ್ಲೂ ಗೆಲುವು ಕಂಡರು ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ನ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವಿನ ಕೇಕೆ ಹಾಕಿದ್ದಾರೆ. ರಾಜ್ಯದ 15 ಉಪಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದ್ದು, ಯಾರಿಗೆಲ್ಲಾ ಗೆಲುವು ಎಂಬುದು ಬಹುತೇಕ ನಿಚ್ಚಳವಾಗಿದೆ. ಈ ಹಂತದಲ್ಲಿ ಕಾಂಗ್ರೆಸ್ನ ಪರ್ಫಾರ್ಮೆನ್ಸ್ ನೋಡಿದರೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ ಎಂದೇ ಹೇಳಬಹುದು. ಮುಖ್ಯವಾಗಿ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಗಳನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು ಅದರಂತೆ ಎರಡರಲ್ಲೂ ಅನರ್ಹ ಶಾಸಕರಿಗೆ ಭರಪೂರ್ ಮಣ್ಣುಮುಕ್ಕಿಸಿದ್ದಾರೆ. ಒಂದೆಡೆ, ಎದೆ ಬಗೆದು ತನ್ನನ್ನು ಶ್ರೀರಾಮನಂತೆ ಚಿತ್ರಿಸಿದ್ದ ಎಂಟಿಬಿ ನಾಗರಾಜ್ಗೆ ಸೋಲಿನ ರುಚಿ […]
ಬೆಂಗಳೂರು: ಕಾಂಗ್ರೆಸ್ನ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವಿನ ಕೇಕೆ ಹಾಕಿದ್ದಾರೆ. ರಾಜ್ಯದ 15 ಉಪಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿದ್ದು, ಯಾರಿಗೆಲ್ಲಾ ಗೆಲುವು ಎಂಬುದು ಬಹುತೇಕ ನಿಚ್ಚಳವಾಗಿದೆ. ಈ ಹಂತದಲ್ಲಿ ಕಾಂಗ್ರೆಸ್ನ ಪರ್ಫಾರ್ಮೆನ್ಸ್ ನೋಡಿದರೆ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ ಎಂದೇ ಹೇಳಬಹುದು.
ಮುಖ್ಯವಾಗಿ ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಗಳನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು ಅದರಂತೆ ಎರಡರಲ್ಲೂ ಅನರ್ಹ ಶಾಸಕರಿಗೆ ಭರಪೂರ್ ಮಣ್ಣುಮುಕ್ಕಿಸಿದ್ದಾರೆ. ಒಂದೆಡೆ, ಎದೆ ಬಗೆದು ತನ್ನನ್ನು ಶ್ರೀರಾಮನಂತೆ ಚಿತ್ರಿಸಿದ್ದ ಎಂಟಿಬಿ ನಾಗರಾಜ್ಗೆ ಸೋಲಿನ ರುಚಿ ತೋರಿಸಿದ್ದಾರೆ. ಮತ್ತೊಂದೆಡೆ ತಮ್ಮ ಅಧಿಪತ್ಯದ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹೆಚ್ ವಿಶ್ವನಾಥರನ್ನಷ್ಟೇ ಅಲ್ಲ, ಆಕಡೆ ತಮ್ಮ ಪುರಾತನ ಶತ್ರು ಎನ್ ಶ್ರೀನಿವಾಸ್ ಪ್ರಸಾದ್ ಬೆಂಬಲಿತ ಅಭ್ಯರ್ಥಿಯನ್ನಾಗಿಯೂ ವಿಶ್ವನಾಥರನ್ನು ಸೋಲಿಸಿದ್ದಾರೆ.
ಇನ್ನು ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿ ಮತ್ತೋರ್ವ ಅರ್ನಹ ಶಾಸಕ ಡಾ ಸುಧಾಕರ್ರನ್ನು ಸೋಲಿಸಲೇಬೇಕೆಂದು ಹೋರಾಡಿದ ಡಿಕೆಶಿವಕುಮಾರ್ ಗೆಲುವು ಸಾಧಿಸದೇ ಹೋಗಿದ್ದು, ಸಿದ್ದರಾಮಯ್ಯಗೆ ವರವಾಗಿದೆ. ತನ್ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ತಮ್ಮ ವಿರುದ್ಧ ಎದ್ದಿದ್ದ ಕೂಗನ್ನು ಹೊಸಕಿಹಾಕಿದ್ದಾರೆ.
Published On - 12:11 pm, Mon, 9 December 19