ಸಚಿವ ಸಂಪುಟ ವಿಸ್ತರಣೆ ವಿಚಾರ CM ಪರಮಾಧಿಕಾರ.. ಅತಿ ಶೀಘ್ರದಲ್ಲೇ ಆಗುತ್ತದೆ -ಅರುಣ್ ಸಿಂಗ್

ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಪರಮಾಧಿಕಾರ. ಅತಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ನಗರದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರ CM ಪರಮಾಧಿಕಾರ.. ಅತಿ ಶೀಘ್ರದಲ್ಲೇ ಆಗುತ್ತದೆ -ಅರುಣ್ ಸಿಂಗ್
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​
KUSHAL V

|

Jan 03, 2021 | 5:21 PM

ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಪರಮಾಧಿಕಾರ. ಅತಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ನಗರದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ ಹೇಳಿದ್ದಾರೆ.

ಜೊತೆಗೆ, ಯತ್ನಾಳ್​ ಹೇಳಿಕೆ ವಿಚಾರವಾಗಿ ನಾಯಕತ್ವ ಬದಲಾವಣೆ ಬಗ್ಗೆ ನಾವು ನಿರ್ಧಾರ ಮಾಡ್ತೇವೆ. ನಾಯಕತ್ವದ ಬಗ್ಗೆ ಹೇಳಲು ಶಾಸಕ ಯತ್ನಾಳ್ ಯಾರು? ಎಂದು ಅರುಣ್ ಸಿಂಗ್​​ ಖಾರವಾಗಿ ಪ್ರತಿಕ್ರಿಯಿಸಿದರು.

ಎಲ್ಲರೂ ಅವರವರ ಪರಿಮಿತಿಯಲ್ಲೇ ಕೆಲಸ ಮಾಡಬೇಕು. ಏನಾದರೂ ಸಮಸ್ಯೆ ಇದ್ದರೆ ಪಕ್ಷದಲ್ಲಿ ಚರ್ಚೆ ಮಾಡಬೇಕು. ನಾವು ಇಷ್ಟು ಬಾರಿ ಹೇಳಿದ್ದೇವೆ, ಮತ್ಯಾಕೆ ಈ ಚರ್ಚೆ ಬರುತ್ತೆ. BSY ನೇತೃತ್ವದ ಸರ್ಕಾರ ಅತ್ಯುತ್ತಮ ಕೆಲಸ ಮಾಡ್ತಿದೆ ಎಂದು ಅರುಣ್ ಸಿಂಗ್​​ ಹೇಳಿದರು.

‘ಕರ್ನಾಟಕದಲ್ಲಿ ನಮ್ಮ ಸರ್ಕಾರ ಅತ್ಯುತ್ತಮ ಕೆಲಸ ಮಾಡ್ತಿದೆ’ ಮುಂದೆ ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಬೂತ್‌ಮಟ್ಟದಿಂದಲೇ ಬಿಜೆಪಿಯನ್ನು ಬಲಪಡಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಉಸ್ತುವಾರಿ ಅರುಣ್‌ಸಿಂಗ್‌ ಕರೆ ನೀಡಿದರು. ಎಲ್ಲಾ ಬೂತ್‌ಗಳನ್ನು ಌಕ್ಟಿವ್‌ನಲ್ಲಿ ಇರುವಂತೆ ನೋಡಿಕೊಳ್ಳಿ. ಬಿಜೆಪಿ ಜಿಲ್ಲಾಧ್ಯಕ್ಷರು ಎಲ್ಲಾ ಬೂತ್‌ಗಳನ್ನು ಗ್ರೇಡಿಂಗ್‌ ಮಾಡಿ. ಕಡಿಮೆ ಗ್ರೇಡ್ ಇರುವ ಬೂತ್‌ಗಳಲ್ಲಿ ಹೆಚ್ಚು ಕೆಲಸ ಮಾಡಿ. ಪ್ರಧಾನಿ, BSY ಸರ್ಕಾರದ ಕೆಲಸಗಳನ್ನ ಪ್ರಚಾರ ಮಾಡಿ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಅತ್ಯುತ್ತಮ ಕೆಲಸ ಮಾಡ್ತಿದೆ. BSY ನೇತೃತ್ವದಲ್ಲಿ ಗೋ ‌ಹತ್ಯೆ ನಿಷೇಧ ಕಾಯ್ದೆ ತಂದಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ಮಾಡಿದವು. ಆದರೂ ಯಡಿಯೂರಪ್ಪ ನೇತೃತ್ವದಲ್ಲಿ ಕಾಯ್ದೆ ತಂದಿದೆ. ಎಲ್ಲರೂ ಚಪ್ಪಾಳೆ ಮೂಲಕ ಬಿಎಸ್‌ವೈಗೆ ಅಭಿನಂದನೆ ಸಲ್ಲಿಸಿ ಎಂದು ಅರುಣ್​ ಸಿಂಗ್​ ಹೇಳಿದರು.

ಗ್ರಾ.ಪಂ ಚುನಾವಣೆಯಲ್ಲಿ ಸಹ ಬಿಜೆಪಿ ಸಾಧನೆ ಮಾಡಿದೆ. ಆದರೆ, ವಿಪಕ್ಷಗಳು ನೆಗೆಟಿವ್ ಪಾಲಿಟಿಕ್ಸ್ ಮಾಡುತ್ತಿವೆ. ಮೋದಿಗೆ 14 ವರ್ಷ ಗುಜರಾತ್ ಸಿಎಂ ಆಗಿ ಅನುಭವವಿದೆ. ರಾಹುಲ್ ಬಾಬಾಗೆ ಏನು ಅನುಭವ ಇದೆ ಎಂದು ಅರುಣ್‌ಸಿಂಗ್‌ ಪ್ರಶ್ನಿಸಿದರು.

‘ರಾಜ್ಯದಲ್ಲಿ ಬಿಜೆಪಿ ಗ್ರಾಫ್ ಏರುತ್ತಿದೆ, JDS ಗ್ರಾಫ್​ ಬೀಳ್ತಿದೆ’ ರಾಹುಲ್​ಗೆ ಸ್ಕ್ರಿಪ್ಟ್ ಕೊಟ್ರೆ ಮಾಧ್ಯಮದ ಮುಂದೆ ಓದುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್​ಗೆ ಡಿಕೆಶಿ, ಸಿದ್ದರಾಮಯ್ಯರಂಥ ನಾಯಕರು. ಗರ್ವದಿಂದ ಹೇಳಿಕೊಳ್ಳುವಂತಹ ಒಬ್ಬ ನಾಯಕರೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ಗ್ರಾಫ್ ಏರುತ್ತಿದೆ, JDS ಗ್ರಾಫ್​ ಬೀಳ್ತಿದೆ. ಅದಕ್ಕಾಗಿ ಅವರು ಮೈತ್ರಿ ಮಾತುಗಳನ್ನು ತೇಲಿ ಬಿಡ್ತಿದ್ದಾರೆ ಎಂದು ಅರುಣ್‌ಸಿಂಗ್‌ ಟಾಂಗ್ ಕೊಟ್ಟರು. ಜೊತೆಗೆ, ಕರ್ನಾಟಕದಲ್ಲಿ ಪೂರ್ಣ ಬಲದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ನಗರದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಹೇಳಿದರು.

ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿದ್ದೇವೆ ಯಕಃಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ: HDK

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada