ಬಿ.ಎಸ್.​ ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ, ಇಡೀ ದಿನ ಕುಟುಂಬಸ್ಥರೊಂದಿಗೆ ದಿನಕಳೆಯುವ ಸಾಧ್ಯತೆ

ಬಿ.ಎಸ್.​ ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ, ಇಡೀ ದಿನ ಕುಟುಂಬಸ್ಥರೊಂದಿಗೆ ದಿನಕಳೆಯುವ ಸಾಧ್ಯತೆ
ಅರುಣಾದೇವಿ ಮತ್ತು ಮುಖ್ಯಮಂತ್ರಿ B.S.ಯಡಿಯೂರಪ್ಪ

ಸಿಎಂ ಪುತ್ರಿ ಅರುಣಾದೇವಿಯ ಪುತ್ರಿ ಮಾಧುರ್ಯ ವಿವಾಹ ನಿಶ್ಚಯವಾಗಿದ್ದು ಇಂದು(ಫೆ.24) ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಹಾಗೂ ನಾಳೆ ಮುಹೂರ್ತ ನೆರವೇರಲಿದೆ. ನಿಖಿಲ್ ಜೊತೆ ಅರುಣಾದೇವಿ ಪುತ್ರಿ ಮಾಧುರ್ಯ ಹಸೆ ಮಣೆ ಏರಲಿದ್ದಾರೆ.

Ayesha Banu

|

Feb 24, 2021 | 12:56 PM


ಬೆಂಗಳೂರು: ರಾಜಕೀಯ ಬೆಳವಣಿಗೆಗಳ ನಡುವೆ ಕೆಲ ದಿನಗಳಿಂದ ಕೆಲ ರಾಜಕಾರಣಿಗಳ ಮನೆಗಳಲ್ಲಿ ಮದುವೆ ಸಂಭ್ರಮಗಳು ಜೋರಾಗಿವೆ. ಇತ್ತೀಚೆಗಷ್ಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿ ಸಂಭ್ರಮಿಸಿದ್ದರು. ಇದಕ್ಕೆ ರಾಜಕೀಯ ಗಣ್ಯರು ಪಕ್ಷ ಭೇದವಿಲ್ಲದೆ ವಧು-ವರರನ್ನು ಹಾರೈಸಿದ್ದರು. ಇದರ ಬೆನ್ನಲ್ಲೇ ಈಗ ರಾಜ್ಯದ ಮುಖ್ಯಮಂತ್ರಿ B.S. ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.

ಸಿಎಂ ಪುತ್ರಿ ಅರುಣಾದೇವಿಯ ಪುತ್ರಿ ಮಾಧುರ್ಯ ವಿವಾಹ ನಿಶ್ಚಯವಾಗಿದ್ದು ಇಂದು (ಫೆ. 24) ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಹಾಗೂ ನಾಳೆ ಮುಹೂರ್ತ ನೆರವೇರಲಿದೆ. ನಿಖಿಲ್ ಜೊತೆ ಅರುಣಾದೇವಿ ಪುತ್ರಿ ಮಾಧುರ್ಯ ಹಸೆಮಣೆ ಏರಲಿದ್ದಾರೆ. ಸದ್ಯ ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಇಡೀ ದಿನ ಕುಟುಂಬಸ್ಥರೊಂದಿಗೆ ಸಮಯ ಕಳೆಯಲಿದ್ದಾರೆ. ಇನ್ನು ಬಿಎಸ್​ವೈ ಮೊಮ್ಮಗಳ ಮದುವೆ ಹಿನ್ನೆಲೆಯಲ್ಲಿ ಕೆಲ ಸ್ವಾಮೀಜಿಗಳು ನಿನ್ನೆಯಿಂದ ಸಿಎಂ ಮನೆಗೆ ಭೇಟಿ ಕೊಟ್ಟು ಮಾಧುರ್ಯಗೆ ಹಾರೈಸಿದ್ದಾರೆ.

ಮಗಳ ಮದುವೆ ನೆರವೇರಿಸಿದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಮೊಮ್ಮಗ, ಕಾಫಿ ಢೇ ಮಾಲಿಕ ದಿ.ಸಿದ್ದಾರ್ಥ್ ಮಗ ಅಮರ್ತ್ಯ ಹೆಗ್ಡೆ ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೈಟ್​ ಫೀಲ್ಡ್ ಬಳಿಯ ಶೆರಟಾನ್​ನಲ್ಲಿ ಮದುವೆ ನಡೆದಿದ್ದು, ಪ್ರೇಮಿಗಳ ದಿನದಂದು ಹಸೆಮಣೆ ಏರಿದ್ದರು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ದಂಪತಿ, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಕೆ.ಸುಧಾಕರ್, ಡಾ.ಜಿ.ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್, ವಿ.ಸೋಮಣ್ಣ, ಅಖಂಡ ಶ್ರೀನಿವಾಸಮೂರ್ತಿ, ಆರ್.ವಿ.ದೇಶಪಾಂಡೆ, ಕೆ.ಎಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ರಕ್ಷಾ ರಾಮಯ್ಯ, ಶಾಮನೂರು ಶಿವಶಂಕರಪ್ಪ, ಎನ್.ಚಲುವರಾಯಸ್ವಾಮಿ, ಟಿ.ಎ.ನಾರಾಯಣಗೌಡ, ಪ್ರಭಾಕರ ಕೋರೆ, ಮುನಿರತ್ನ, ಕುಮಾರ ಬಂಗಾರಪ್ಪ, ಸಂಪತ್ ರಾಜ್, ಅಶೋಕ್ ಖೇಣಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿನಯ್ ಗುರೂಜಿ ಮತ್ತು ನೊಣವಿನಕೆರೆ ಸ್ವಾಮೀಜಿ ನವದಂಪತಿಗೆ ಶುಭ ಹಾರೈಸಿದ್ದರು. ಸದ್ಯ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೊಮ್ಮಗಳ ಮದುವೆ ನೆರವೇರಲಿದೆ.

ಇದನ್ನೂ ಓದಿ: DK Shivakumar: ಮುಖ್ಯಮಂತ್ರಿ ಯಡಿಯೂರಪ್ಪಗೆ ಮಗಳ ಮದುವೆಯ ಆಹ್ವಾನ ನೀಡಿದ ಡಿ.ಕೆ. ಶಿವಕುಮಾರ್


Follow us on

Related Stories

Most Read Stories

Click on your DTH Provider to Add TV9 Kannada