ರಾಜ್ಯದ ದೇವಾಲಯಗಳ ಎಲ್ಲಾ ಮಾಹಿತಿಗೆ ಶೀಘ್ರದಲ್ಲೇ ಸರ್ಕಾರದಿಂದ ಕಾಲ್​ ಸೆಂಟರ್​ ಆರಂಭ

ಕೇಂದ್ರೀಕೃತ ಕಾಲ್​ ಸೆಂಟರ್​ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇಂದ್ರೀಕೃತ ಕಾಲ್​ ಸೆಂಟರ್​​ಗಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲಾಗುತ್ತಿದೆ. 45 ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಕಾಲ್ ಸೆಂಟರ್ ಆರಂಭಿಸಲಾಗುವುದು ಎಂದು ಮುಜರಾಯಿ ಇಲಾಖೆ ಆಯುಕ್ತ ಎಚ್.ಬಸವರಾಜೇಂದ್ರ ಹೇಳಿದರು.

ರಾಜ್ಯದ ದೇವಾಲಯಗಳ ಎಲ್ಲಾ ಮಾಹಿತಿಗೆ ಶೀಘ್ರದಲ್ಲೇ ಸರ್ಕಾರದಿಂದ ಕಾಲ್​ ಸೆಂಟರ್​ ಆರಂಭ
ಚಾಮುಂಡೇಶ್ವರಿ ದೇವಸ್ಥಾನ
Follow us
ವಿವೇಕ ಬಿರಾದಾರ
|

Updated on:Oct 17, 2023 | 8:48 AM

ಬೆಂಗಳೂರು ಅ.17: ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ 34,000 ದೇವಾಲಯಗಳನ್ನು ಮೇಲ್ವಿಚಾರಣೆ ಮಾಡುವ ಮುಜರಾಯಿ ಇಲಾಖೆ ವಿಷನ್ ಗ್ರೂಪ್ (Vishan Group) ಅನ್ನು ಸ್ಥಾಪಿಸಲು ಮತ್ತು ಕೇಂದ್ರೀಕೃತ ಕಾಲ್ ಸೆಂಟರ್ (Call Center) ಅನ್ನು ಪ್ರಾರಂಭಿಸಲು ಯೋಜಿಸಿದೆ. ಕಾಲ್ ಸೆಂಟರ್ ದೇವಾಲಯಗಳ ವಿವರಗಳನ್ನು ಭಕ್ತರಿಗೆ ಒದಗಿಸುತ್ತದೆ. ಇನ್ನು ವಿಷನ್ ಗ್ರೂಪ್ ದೇವಾಲಯಗಳ ಅಭಿವೃದ್ಧಿ ಮತ್ತು ದೇವಾಲಯಗಳ ಇತ್ಯಾದಿ ಕಾರ್ಯಗಳ ಮೇಲೆ ಗಮನಹರಿಸುತ್ತದೆ.

ರಾಜ್ಯ ಐಟಿ ಏಜೆನ್ಸಿಯಾದ ಕಿಯೋನಿಕ್ಸ್‌ನಿಂದ ಹೊರಗುತ್ತಿಗೆ ಆಧಾರದ ಮೇಲೆ 10 ಜನರು ಕಾಲ್ ಸೆಂಟರ್​ನಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಕೇಂದ್ರೀಕೃತ ಕಾಲ್​ ಸೆಂಟರ್​ ಎರಡು ಅಂಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದಾಗಿ, ದೇವಾಲಯದ ಎಲ್ಲ ವಿವರಗಳನ್ನು ಒದಗಿಸುತ್ತದೆ. ಆಚರಣೆಗಳು ಮತ್ತು ಹುಣ್ಣಿಮೆ, ಅಮವಾಸ್ಯೆ ದಿನದ ವಿಶೇಷ ಪೂಜೆ ಮತ್ತು ದೇವಸ್ಥಾನ ಬಾಗಿಲು ತೆರೆಯುವ ಮತ್ತು ಮುಚ್ಚುವ ಸಮಯ, ದಿನ ಮತ್ತು ದಿನಾಂಕ ಹೀಗೆ ಇತ್ಯಾದಿಗಳ ಬಗ್ಗೆ ಭಕ್ತರಿಗೆ ಮಾಹಿತಿ ನೀಡುತ್ತದೆ. ಎರಡನೆಯದಾಗಿ, ದೇವಸ್ಥಾನದಲ್ಲಿ ನಡೆಯುವ ವಿಶೇಷ ಆಚರಣೆ, ಕಾಲ್ ಸೆಂಟರ್ ಮೂಲಕ ದೇವಾಯದ ಬಗ್ಗೆ ಮಾಹಿತಿ, ದೇವಾಲಯಕ್ಕೆ ಬರಲು ಇರುವ ಮಾರ್ಗಗಳ ಬಗ್ಗೆ ಹಾಗೂ ನಕ್ಷೆ, ಹತ್ತಿರದ ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವಾ ವಿಮಾನ ನಿಲ್ದಾಣ ಇತ್ಯಾದಿಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ನಮ್ಮ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೇ ಪ್ರತಿ ದೇವಸ್ಥಾನದಿಂದ ವಿವರಗಳನ್ನು ಸಂಗ್ರಹಿಸಿ ಕೇಂದ್ರ ಕಚೇರಿಗೆ ಕಳುಹಿಸಿದ್ದಾರೆ. ಕೇಂದ್ರೀಕೃತ ಕಾಲ್​ ಸೆಂಟರ್​​ಗಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲಾಗುತ್ತಿದೆ. 45 ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಕಾಲ್ ಸೆಂಟರ್ ಆರಂಭಿಸಲಾಗುವುದು ಎಂದು ಮುಜರಾಯಿ ಇಲಾಖೆ ಆಯುಕ್ತ ಎಚ್.ಬಸವರಾಜೇಂದ್ರ ಹೇಳಿದರು.

ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ಅರ್ಚಕರಿಗೆ ಗುಡ್ ನ್ಯೂಸ್, ತಸ್ತಿಕ್​​ ಹಣ ರಿಲೀಸ್​

ರಾಜ್ಯದಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಲು 10 ಅಥವಾ 12 ಜನರ ವಿಷನ್​ ಗ್ರೂಪ್​​​ ರಚಿಸಲಾಗುವುದು. ದೇವಾಲಯಗಳ ದುರಸ್ತಿ, ಜೀರ್ಣೋದ್ಧಾರಗಳ ಸಮಯದಲ್ಲಿ ಆಗಬಹುದಾದ ಸಂಭವನೀಯ ಬದಲಾವಣೆಗಳು ಅಥವಾ ಪಾರಂಪರಿಕ ರಕ್ಷಣೆಗಳ ಬಗ್ಗೆ ಶಿಫಾರಸು ಮಾಡುವ ಯಾವುದೇ ಸರ್ಕಾರಿ ಆದೇಶವನ್ನು ಈ ವಿಷನ್ ಗ್ರೂಪ್ ನೋಡಿಕೊಳ್ಳುತ್ತದೆ.

ಅಗತ್ಯವಿದ್ದರೆ, . ರಾಜ್ಯದ 34,000 ದೇವಾಲಯಗಳ ಮುಂದಿನ ಅಭಿವೃದ್ಧಿಗಾಗಿ ಕ್ರಮಗಳನ್ನು ಸುಗಮಗೊಳಿಸಲು ವಿಷನ್ ಗ್ರೂಪ್ ನಮಗೆ ಸಹಾಯ ಮಾಡುತ್ತದೆ ಎಂದು ಮುಜರಾಯಿ ಆಯುಕ್ತರು ಹೇಳಿದರು. ದೇವಾಲಯಗಳ ಅಭಿವೃದ್ಧಿಗೆ ಬರುವ ಸಿಎಸ್​ಆರ್​ ನಿಧಿ ಮೇಲೆ ಹದ್ದಿನ ಕಣ್ಣಿಡಲು ಈ ವಿಷನ್ ಗ್ರೂಪ್ ಅನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀ ರವಿಶಂಕರ್ ಗುರೂಜಿ, ರಾಜ್ಯಸಭಾ ಸಂಸದ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಕ್ಯಾಪ್ಟನ್ ಗೋಪಿನಾಥ್ ಮತ್ತು ಸುಧಾ ಮೂರ್ತಿ ಸೇರಿದಂತೆ ಪ್ರಮುಖ ವ್ಯಕ್ತಿಗಳನ್ನು ವಿಷನ್​ ಗ್ರೂಪ್​​ ಸದಸ್ಯರನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:47 am, Tue, 17 October 23