ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್ಫ್ರಮ್ ಹೋಮ್ ವಾರ್ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್ ಸಿಟಿಯಲ್ಲಿದ್ದ ಸಾಫ್ಟ್ವೇರ್, ಹಾರ್ಡ್ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು.
ಮಾಲ್, ಫ್ರೆಂಡ್ಸ್.. ಪಬ್ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್ಡೌನ್ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್ಫ್ರಮ್ ಹೋಮ್ ಟೆನ್ಷನ್ಗೆ ಸಿಲುಕಿದ್ದೋರಿಗೆ ರಾಜ್ಯ ಸರ್ಕಾರ ಗಿಫ್ಟ್ ನೀಡಿದೆ. ಏಪ್ರಿಲ್ 20ರ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಶೇಕಡ 33ರಷ್ಟು ಐಟಿ-ಬಿಟಿ ಕಂಪನಿಗಳಲ್ಲಿ ಕೆಲ್ಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಆದ್ರೀಗ, ಊರು ಸೇರಿದ್ದ ಉದ್ಯೋಗಿಗಳು ಬೆಂಗಳೂರಿಗೆ ಮರಳಬೇಕು. ಬಸ್ ಬೇರೆ ಇಲ್ಲ, ಕಾರು ಬೈಕ್ಗಳನ್ನ ತಂದ್ರೆ ಪೊಲೀಸ್ರು ಕಾಟ. ಬೆಂಗಳೂರಿಗೆ ಹೇಗಪ್ಪ ಬರೋದು ಎಂಬ ತಲೆನೋವಲ್ಲಿದ್ದಾರೆ.
ಬೆಂಗಳೂರಿಗೆ ವಾಪಸ್ ಆಗೋರಿಗೆ ಒನ್ ವೇ ಪಾಸ್!
ಐಟಿ ಕಂಪನಿಯಲ್ಲಿ ಕೆಲಸ ಮಾಡೋರು ಒಂದ್ಕಡೆ ಖುಷಿ ಜೊತೆ ಟೆನ್ಷನ್ನಲ್ಲಿದ್ರೂ ಇದಕ್ಕೂ ಸರ್ಕಾರ ಸೆಲ್ಯೂಷನ್ ನೀಡಿದೆ. ಐಟಿ ನೌಕಕರು ಬೆಂಗಳೂರಿಗೆ ವಾಪಸ್ ಆಗೋಕೆ ಒನ್ ಸೈಡ್ ಪಾಸ್ ವಿತರಿಸೋಕೆ ಪ್ಲ್ಯಾನ್ ಮಾಡಿದೆ. ಹಾಗಿದ್ರೆ, ಒನ್ ಸೈಡ್ ಪಾಸ್ ಅಂದ್ರೇನು? ಇದು ಎಲ್ಲಿ ಸಿಗುತ್ತೆ? ಏನೇನ್ ರೂಲ್ಸ್ ಇರುತ್ತೆ ಅನ್ನೋದನ್ನ ನೋಡೋದಾದ್ರೆ.
ಏನಿದು ಒನ್ ಸೈಡ್ ಪಾಸ್?
ಐಟಿ-ಬಿಟಿ ಕಪನಿಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಪಾಸ್ ವಿತರಿಸಲಾಗುತ್ತೆ. ಅಂತರ್ ಜಿಲ್ಲಾ ಪ್ರಯಾಣ ನಿಷೇಧದ ಹಿನ್ನೆಲೆಯಲ್ಲಿ ಪಾಸ್ ವಿತರಣೆ ಮಾಡಲಾಗುತ್ತದೆ. ಐಟಿ ನೌಕರರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾಸ್ ಪಡೀಬೋದಾಗಿದೆ. ಅದ್ರಲ್ಲೂ ಕೇವಲ 1 ಬಾರಿ ಮಾತ್ರ ಬೆಂಗಳೂರಿಗೆ ವಾಪಸ್ ಆಗಲು ಪಾಸ್ ಬಳಕೆ ಮಾಡ್ಬೋದಾಗಿದೆ. ಈ ಪಾಸ್ ಮೂಲಕ ಬೆಂಗಳೂರಿನಿಂದ ಬೇರೆಡೆ ಅಥವಾ ಅಂತರ್ ರಾಜ್ಯ ಜಿಲ್ಲೆಗಳಿಗೆ ವಾಪಸ್ ಹೋಗೋಕೆ ಆಗಲ್ಲ. ಪಾಸ್ ಪಡೆದವರು ತಮ್ಮ ಸ್ವಂತ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದ್ದು, ಈ ಮೂಲಕ ಬೆಂಗಳೂರಿಗೆ ಬರ್ಬೋದಾಗಿದೆ.
ಒಟ್ನಲ್ಲಿ ರಾಜ್ಯದಲ್ಲಿ ಕೊರೊನಾ ಕ್ರೌರ್ಯ ಹೆಚ್ಚಾಗ್ತನೇ ಇದೆ.. ಆದ್ರೆ ಏಪ್ರಿಲ್ 20ರ ಬಳಿಕ ಐಟಿ-ಬಿಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿರೋದು ಎಲ್ಲರ ನಿದ್ದೆಗೆಡಿಸಿದೆ. ಹಳ್ಳಿ ಹಳ್ಳಿಯಿಂದ ಪಾಸ್ ಪಡೆದು ಬೆಂಗಳೂರಿಗೆ ಸಾವಿರಾರು ವಾಹನಗಳು ಬಂದ್ರೆ ಸಂಚಾರ ದಟ್ಟಣೆ ಆಗೋದು ಫಿಕ್ಸ್.. ಬೇಕಾಬಿಟ್ಟಿ ಓಡಾಡೋರನ್ನೇ ಕಂಟ್ರೋಲ್ ಮಾಡೋಕೆ ಪೊಲೀಸ್ರು ಒದ್ದಾಡ್ತಿದ್ದಾರೆ. ಆದ್ರೀಗ ಮುಂದೇನ್ ಅನಾಹುತವಾಗುತ್ತೋ ಅನ್ನೋದು ಎಲ್ರಿಗೂ ಟೆನ್ಷನ್ ಶುರುವಾಗಿದೆ. ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕೊಟ್ಟು ಯೂಟರ್ನ್ ಹೊಡೆದಿರೋ ಸರ್ಕಾರ ಈ ಒನ್ ವೇ ಪಾಸ್ ವಿಚಾರದಲ್ಲಿ ಏನ್ ಮಾಡುತ್ತೆ ಕಾದು ನೋಡ್ಬೇಕು.