ಬೆಂಗಳೂರು: ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆರೆಗಳ ಸರ್ವೆಗೆ ಹೈಕೋರ್ಟ್ ಆದೇಶ ನೀಡಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ 205 ಕೆರೆಗಳಲ್ಲಿ 160 ಕೆರೆಗಳ ಸರ್ವೆ ಕಾರ್ಯ ಮುಗಿದಿದ್ದು, ಅದರಲ್ಲಿ 148 ಕೆರೆಗಳ ಒತ್ತುವರಿಯಾಗಿರುವುದು ಪತ್ತೆಯಾಗಿದೆ. ಹಾಗಾಗಿ ಇನ್ನು 2 ತಿಂಗಳಲ್ಲಿ ಉಳಿದ 45 ಕೆರೆಗಳ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಆರ್ಟಿಸಿ ರೆವಿನ್ಯೂ ದಾಖಲೆ ಆಧರಿಸಿ ಕೆರೆಗಳ ಸರ್ವೆ ನಡೆಸಬೇಕು. ಜಿಲ್ಲಾವಾರು ಕೆರೆಗಳ ಸಂರಕ್ಷಣಾ ಸಮಿತಿ ರಚಿಸಬೇಕು. ಅಲ್ಲದೆ, ಸರ್ವೆ ನಡೆಸಿ ಕೆರೆಯ ಗಡಿ ನಿಗದಿಪಡಿಸಬೇಕು. ಕೆರೆ ದಂಡೆಯಿಂದ 30 ಮೀಟರ್ ಬಫರ್ ಝೋನ್ನ ಅನಧಿಕೃತ ಕಟ್ಟಡ ತೆರವುಗೊಳಿಸಬೇಕು ಎಂದು ಇದೇ ವೇಳೆ ಹೈಕೋರ್ಟ್ ಆದೇಶಿಸಿದೆ.
2012ರ ಆದೇಶ ಪಾಲಿಸದಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸುವ ಎಚ್ಚರಿಕೆ ನೀಡಿದೆ. ಅಲ್ಲದೆ, ಸರ್ಕಾರ ಕೆರೆಗಳನ್ನು ಖಾಸಗಿಯವರಿಗೆ ನೀಡುತ್ತಿದೆ. ತಿಳಿವಳಿಕೆ ಒಪ್ಪಂದದ ಕಾನೂನು ಬದ್ಧತೆ ಪರಿಶೀಲಿಸಬೇಕಿದೆ. ಅಲ್ಲಿಯವರೆಗೆ ಖಾಸಗಿಯವರ ಜತೆ ತಿಳಿವಳಿಕೆ ಒಪ್ಪಂದವಿಲ್ಲ. ಆದರೆ ಕೆರೆಗಳ ಅಭಿವೃದ್ಧಿಗೆ ಹಣ ಪಡೆಯಲು ಅಡ್ಡಿಯಿಲ್ಲ. ಏ.20ರೊಳಗೆ ಕೈಗೊಂಡ ಕ್ರಮಗಳ ಮಾಹಿತಿ ನೀಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Published On - 5:33 pm, Wed, 4 March 20