ಭಾರತದಲ್ಲಿ ಟ್ವಿಟರ್ಗೆ ಬದಲಿಯಾಗಿ ಕೂ ಆ್ಯಪ್ ಬಳಕೆ ಆರಂಭವಾಗಿದೆ. ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಣ ಸಂಘರ್ಷದಿಂದ ಕೂ ಆ್ಯಪ್ನ ಜನಪ್ರಿಯತೆ ಹೆಚ್ಚಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವೇ ಕೂಗೆ ಆದ್ಯತೆ ನೀಡುತ್ತಿದೆ. ಈ ಮಧ್ಯೆ, ಕೂ ಆ್ಯಪ್ನಲ್ಲಿರುವ ಮಾಹಿತಿಯನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹ್ಯಾಕರ್ಸ್ಗಳು ಹೇಳಿದ್ದಾರೆ. ಇದಕ್ಕೆ ಕೂ ಆ್ಯಪ್ನವರು ಸರಿಯಾದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
ಮಾನಿಕರ್ ಎಲಿಯಟ್ ಆಲ್ಡರ್ಸನ್ ಎಂದು ಕರೆಯಲ್ಪಡುವ ಫ್ರೆಂಚ್ ಸೈಬರ್ ಭದ್ರತಾ ಸಂಶೋಧಕರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಕೂ ಬಳಕೆದಾರರ, ಇ-ಮೇಲ್ ಐಡಿ, ಲಿಂಗ, ಜನ್ಮದಿನಾಂಕ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು. ಕೂ ಆ್ಯಪ್ನಿಂದ ಈ ಮಾಹಿತಿ ಕದಿಯಲು ತೆಗೆದುಕೊಂಡಿದ್ದು ಕೇವಲ 30 ನಿಮಿಷ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕದ್ದ ಮಾಹಿತಿಯ ಸ್ಕ್ರೀನ್ಶಾಟ್ ಕೂಡ ಹಾಕಿದ್ದಾರೆ.
ಇದಕ್ಕೆ ಕೂ ಸಹ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಉತ್ತರಿಸಿದ್ದಾರೆ. ಇವರು ಕದ್ದಿದ್ದೇನೆ ಎಂದು ಹೇಳಿಕೊಂಡಿರುವ ಮಾಹಿತಿ ಕೂ ಪ್ರೊಫೈಲ್ನಲ್ಲೇ ಕಾಣುತ್ತದೆ. ಬಳಕೆದಾರರು ಸಾರ್ವಜನಿಕವಾಗಿಯೇ ಈ ಮಾಹಿತಿ ಹಂಚಿಕೊಂಡಿರುತ್ತಾರೆ. ಹೀಗಿರುವಾಗ ಇದನ್ನು ಮಾಹಿತಿ ಸೋರಿಕೆ ಎಂದು ಕರೆಯೋಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
You asked so I did it. I spent 30 min on this new Koo app. The app is leaking of the personal data of his users: email, dob, name, marital status, gender, … https://t.co/87Et18MrOg pic.twitter.com/qzrXeFBW0L
— Elliot Alderson (@fs0c131y) February 10, 2021
ಕೂ ಆ್ಯಪ್ ಮೊಟ್ಟ ಮೊದಲ ಬಾರಿಗೆ ಲಾಂಚ್ ಆಗಿದ್ದು 2020 ಮಾರ್ಚ್ ತಿಂಗಳಲ್ಲಿ. ಇದು ಬೆಂಗಳೂರು ಮೂಲದ ಸ್ಟಾರ್ಟ್-ಅಪ್. ಭಾರತದಲ್ಲಿ ಟ್ವಿಟರ್ಗೆ ಬದಲಿ ತಾಣ ಕೂ ಆಗಲಿದೆ ಎನ್ನುವುದು ಅನೇಕರ ಅಭಿಪ್ರಾಯ. ಆತ್ಮನಿರ್ಭರ ಆ್ಯಪ್ ಚಾಲೆಂಜ್ ಅನ್ನು ಕೂ ಗೆದ್ದಿದೆ. ಹೀಗಾಗಿ ಸರ್ಕಾರದಿಂದ ಈ ಆ್ಯಪ್ಗೆ ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇದೆ. ಇಂಗ್ಲಿಷ್ ಮಾತ್ರ ಅಲ್ಲದೆ, ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಇದನ್ನು ಬಳಸಬಹುದು.
ಇದನ್ನೂ ಓದಿ: ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್ಗೆ ಮಹತ್ವ ಕೊಡ್ತಿರೋದೇಕೆ?