ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ದರೋಡೆ ಯತ್ನ ನಡೆದಿದೆ. ದರೋಡೆಕೋರರು ಸುಮಾರು 1 ಕೋಟಿಗೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾಸ್ ಕಟರ್ನಿಂದ ಬ್ಯಾಂಕ್ನ ಶಟರ್ ಕಟ್ ಮಾಡಿ ಒಳಹೊಕ್ಕ ಖದೀಮರು ಬ್ಯಾಂಕ್ನಲ್ಲಿದ್ದ ಹಣ, ಬಂಗಾರ ಮತ್ತು ಬೆಳ್ಳಿ ಸೇರಿ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ. ಇದಲ್ಲದೆ, ಬ್ಯಾಂಕ್ನಲ್ಲಿದ್ದ ಸಿ.ಸಿ ಕ್ಯಾಮರಾದ ಹಾರ್ಡ್ ಡಿಸ್ಕ್ ಸಹ ಎತ್ತುಕೊಂಡು ಹೋಗಿದ್ದಾರಂತೆ.
ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಇದೇ ಅತಿದೊಡ್ಡ ಕಳ್ಳತನವಾಗಿದ್ದು ಸ್ಥಳಕ್ಕೆ ಕೊಪ್ಪಳ SP ಜಿ. ಸಂಗೀತಾ ಭೇಟಿಕೊಟ್ಟು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
Published On - 12:18 pm, Thu, 24 September 20