AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷದ ದೀಪಾವಳಿಗೆ ಗಾಳಿ ಶುದ್ಧಿ ಮಾಡುವ ನಾಟಿ ಹಸುಗಳ ಸಗಣಿಯಿಂದ ದೀಪಗಳ ನಿರ್ಮಾಣ!

ದೇವನಹಳ್ಳಿ: ಇಟ್ಟರೆ ಸಗಣಿಯಾದೆ.. ತಟ್ಟಿದರೆ ಕುರುಳಾದೆ.. ಸುಟ್ಟರೇ ನೊಸಲಿಗೆ ವಿಭೂತಿಯಾದೆ.. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ.. ಅನ್ನೂ ಪದ್ಯಕ್ಕೆ ಇದೀಗ ದೀಪಾವಳಿಗೆ ದೀಪವಾದೆ ಅನ್ನೂ ಸಾಲು ಸೇರ್ಪಡೆಯಾಗಿದೆ. ಇದಕ್ಕೆ ಕಾರಣ ಈ ಬಾರಿಯ ದೀಪಾವಳಿಗೆ ಸಗಣಿಯಿಂದ ತಯಾರಾದ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿರೋದು. ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು ಈ‌ ಬಾರಿಯ ದೀಪಾವಳಿಗೆ ಸಗಣಿ ದೀಪಗಳನ್ನ ಗೋಶಾಲೆಯ ಸಿಬ್ಬಂದಿ ನಿರ್ಮಾಣ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬಳಿಯ ರಾಷ್ಟ್ರೋತ್ಥಾನ ಗೋಶಾಲೆಯ ವತಿಯಿಂದ ಈ‌ ಬಾರಿಯ […]

ಈ ವರ್ಷದ ದೀಪಾವಳಿಗೆ ಗಾಳಿ ಶುದ್ಧಿ ಮಾಡುವ ನಾಟಿ ಹಸುಗಳ ಸಗಣಿಯಿಂದ ದೀಪಗಳ ನಿರ್ಮಾಣ!
ಆಯೇಷಾ ಬಾನು
|

Updated on: Nov 12, 2020 | 1:52 PM

Share

ದೇವನಹಳ್ಳಿ: ಇಟ್ಟರೆ ಸಗಣಿಯಾದೆ.. ತಟ್ಟಿದರೆ ಕುರುಳಾದೆ.. ಸುಟ್ಟರೇ ನೊಸಲಿಗೆ ವಿಭೂತಿಯಾದೆ.. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ.. ಅನ್ನೂ ಪದ್ಯಕ್ಕೆ ಇದೀಗ ದೀಪಾವಳಿಗೆ ದೀಪವಾದೆ ಅನ್ನೂ ಸಾಲು ಸೇರ್ಪಡೆಯಾಗಿದೆ. ಇದಕ್ಕೆ ಕಾರಣ ಈ ಬಾರಿಯ ದೀಪಾವಳಿಗೆ ಸಗಣಿಯಿಂದ ತಯಾರಾದ ದೀಪಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿರೋದು.

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು ಈ‌ ಬಾರಿಯ ದೀಪಾವಳಿಗೆ ಸಗಣಿ ದೀಪಗಳನ್ನ ಗೋಶಾಲೆಯ ಸಿಬ್ಬಂದಿ ನಿರ್ಮಾಣ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬಳಿಯ ರಾಷ್ಟ್ರೋತ್ಥಾನ ಗೋಶಾಲೆಯ ವತಿಯಿಂದ ಈ‌ ಬಾರಿಯ ದೀಪಾವಳಿಗೆ ಸಗಣಿ ದೀಪಗಳನ್ನ ಸಿದ್ದಮಾಡಲಾಗಿದೆ.‌

ಈಗಾಗಲೇ ಗೋಶಾಲೆಯ ಸಿಬ್ಬಂದಿಯಿಂದ 10 ಸಾವಿರ ದೀಪಗಳನ್ನ ತಯಾರಿಸಲಾಗಿದ್ದು ವಿವಿಧ ಜಿಲ್ಲೆಗಳಿಗೆ ದೀಪಗಳನ್ನ ರವಾನೆ ಮಾಡಲಾಗಿದೆ. ಇನ್ನೂ ಈ‌ ವರ್ಷ ದೀಪಾವಳಿಯಲ್ಲಿ ಸಗಣಿಯಿಂದ ನಿರ್ಮಾಣವಾದ ದೀಪಗಳನ್ನ ಹಚ್ಚಿದ್ರೆ ದೀಪದಲ್ಲಿನ ಎಣ್ಣೆ ಜೊತೆಗೆ ಸಂಪೂರ್ಣ ದೀಪ ಸುಟ್ಟು ಅಗ್ನಿಹೋತ್ರವಾಗಿ ಬೆಳಗಲಿದ್ದು ಮನೆಯಲ್ಲಿನ ಗಾಳಿಯನ್ನ ಶುದ್ಧ ಮಾಡುತ್ತಂತೆ.

ಸಗಣಿಯಿಂದ ದೀಪಗಳ ನಿರ್ಮಾಣ ಹೇಗೆ: ಗೋಶಾಲೆಯಲ್ಲಿರೂ ನಾಟಿ ಹಸುಗಳ ಸಗಣಿಯನ್ನ ಶೇಖರಿಸಿ ಸಂಪೂರ್ಣವಾಗಿ ಬಿಸಿಲಿನಲ್ಲಿ ಮೂರು ದಿನ ಒಣಗಿಸಿ ನಂತರ ಅದನ್ನ ಪೌಡರ್ ಆಗಿ ತಯಾರು ಮಾಡಿಕೊಳ್ತಾರೆ. ಜತೆಗೆ ಪೌಡರ್ ಸಗಣಿಗೆ ಗೋವರ್ಧನ ಪುಡಿ ಮತ್ತು ಗೌರ್ಗಂ ಜತೆಗೆ ನೀರು ಹಾಕಿ ಮಿಶ್ರಣ ಮಾಡ್ತಾರೆ. ನಂತರ ಉಂಡೆಗಳಾಗಿ ಮಾಡಿಕೊಂಡು ಅಚ್ಚಿನ ಮುಖಾಂತರವೇ ದೀಪಗಳ‌ನ್ನ ತಯಾರಿಸಿ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸುತ್ತಾರೆ.

ವರದಿ: ನವೀನ್, ದೇವನಹಳ್ಳಿ

ಮಾರುಕಟ್ಟೆಯಲ್ಲಿ ಸಗಣಿ ದೀಪಕ್ಕೆ ಹೆಚ್ಚಿದ ಬೇಡಿಕೆ: ಶುದ್ಧ ನಾಟಿ ಹಸುವಿನ ಸಗಣಿಯಿಂದ ತಯಾರಿಸಿದ ದೀಪಗಳಿಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಬೇಡಿಕೆ ಬರ್ತಿದ್ದು, ಈಗಾಗಲೆ 10 ಸಾವಿರ ದೀಪಗಳ‌ನ್ನ ತಯಾರಿಸಿರೂ ಸಿಬ್ಬಂದಿ ಇನ್ನೂ 20 ಸಾವಿರ ದೀಪಗಳನ್ನ ತಯಾರಿಸಲಿದ್ದಾರೆ.

ನಾಟಿ ಹಸುವಿನ ಸಗಣಿಯಲ್ಲಿದೆ ಔಷಧೀಯ ಗುಣ: ನಾಟಿ ಹಸುವಿನ ಸಗಣಿಯಲ್ಲಿ ರೋಗ ನಿರೋಧಕ ಶಕ್ತಿ ಸೇರಿದಂತೆ ಔಷಧೀಯ ಗುಣಗಳಿವೆಯಂತೆ. ಹೀಗಾಗಿ ಹಬ್ಬದ ದಿನ ಸಗಣಿ ದೀಪ ಹಚ್ಚಿ ಅದನ್ನ ಸುಟ್ಟರೆ ಅದು ಅಗ್ನಿಹೋತ್ರವಾಗಿ ಸಗಣಿಯಲ್ಲಿನ ಔಷಧೀಯ ಗುಣಗಳು ಗಾಳಿಯ ಮುಖಾಂತರ ಜನರಲ್ಲಿ ರೋಗ ನಿರೋದಕ ಶಕ್ತಿ ಹೆಚ್ಚಿಸಲಿದೆಯ‌ಂತೆ.