ಮತ್ತೊಂದು ಗುಡ್ಡ ಕುಸಿತ, ಚಾರ್ಮಾಡಿ ಘಾಟ್‌ ರಸ್ತೆ ಸಂಚಾರ‌ ಬಂದ್‌

ಚಿಕ್ಕಮಗಳೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತೇ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ. ಪರಿಣಾಮ ಈ ಭಾಗದ ಸಂಚಾರ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಮತ್ತೇ ಭೂಕುಸಿತವುಂಟಾಗಿದೆ. ಘಾಟ್‌ನ ಅಲೇಖಾನ್ ಸಮೀಪ ಗುಡ್ಡ ಕುಸಿದು ಭಾರೀ ಪ್ರಮಾಣದ ಮಣ್ಣು, ಮರ ಬಂಡೆಗಳು ಬಿದ್ದಿವೆ. ಹೀಗಾಗಿ ಗುಡ್ಡ ಕುಸಿದ ಸ್ಥಳಗದಲ್ಲಿ ಜೆಸಿಬಿ ಗಳನ್ನು ಉಪಯೋಗಿಸಿ ತೆರವು ಕಾರ್ಯಚಾರಣೆ ಆರಂಭಿಸಲಾಗಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣು, ಮರ ಮತ್ತು ಬಂಡೆಗಳನ್ನು ಈಗ ತೆರವು ಮಾಡಲಾಗುತ್ತಿದೆ. ಭೂಕುಸಿತದ ಜೊತೆಗೆ […]

ಮತ್ತೊಂದು ಗುಡ್ಡ ಕುಸಿತ, ಚಾರ್ಮಾಡಿ ಘಾಟ್‌ ರಸ್ತೆ ಸಂಚಾರ‌ ಬಂದ್‌
Guru Edited By: ಸಾಧು ಶ್ರೀನಾಥ್​

Updated on: Aug 08, 2020 | 1:26 PM

ಚಿಕ್ಕಮಗಳೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತೇ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗಿದೆ. ಪರಿಣಾಮ ಈ ಭಾಗದ ಸಂಚಾರ ಅಸ್ತವ್ಯಸ್ತವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಮತ್ತೇ ಭೂಕುಸಿತವುಂಟಾಗಿದೆ. ಘಾಟ್‌ನ ಅಲೇಖಾನ್ ಸಮೀಪ ಗುಡ್ಡ ಕುಸಿದು ಭಾರೀ ಪ್ರಮಾಣದ ಮಣ್ಣು, ಮರ ಬಂಡೆಗಳು ಬಿದ್ದಿವೆ. ಹೀಗಾಗಿ ಗುಡ್ಡ ಕುಸಿದ ಸ್ಥಳಗದಲ್ಲಿ ಜೆಸಿಬಿ ಗಳನ್ನು ಉಪಯೋಗಿಸಿ ತೆರವು ಕಾರ್ಯಚಾರಣೆ ಆರಂಭಿಸಲಾಗಿದೆ.

ರಸ್ತೆ ಮೇಲೆ ಬಿದ್ದಿರುವ ಮಣ್ಣು, ಮರ ಮತ್ತು ಬಂಡೆಗಳನ್ನು ಈಗ ತೆರವು ಮಾಡಲಾಗುತ್ತಿದೆ. ಭೂಕುಸಿತದ ಜೊತೆಗೆ ರಸ್ತೆಯಲ್ಲಿ ಬಿರುಕು ಕೂಡಾ ಬಿಟ್ಟಿದೆ. ಹೀಗಾಗಿ ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಸಂಚಾರವನ್ನು ಆಗಸ್ಟ್‌ 11ರವರೆಗೆ ಬಂದ್ ಮಾಡಿ ಚಿಕ್ಕಮಗಳೂರು ಡಿಸಿ ಬಿ ಗೌತಮ್‌ ಆದೇಶ ಹೊರಡಿಸಿದ್ದಾರೆ.

Loading...
Unable to load recommendations.
Follow Us