ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಸಿಪಿಐ ವಿರುದ್ಧ ವಕೀಲರ ಪ್ರತಿಭಟನೆ
ವಕೀಲನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಮಾಳಮಾರುತಿ ಠಾಣೆಯ ಸಿಪಿಐ ವಿರುದ್ಧ ವಕೀಲರು ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ವಕೀಲರಿಂದ ಪ್ರತಿಭಟನೆ
ಬೆಳಗಾವಿ: ವಕೀಲನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಮಾಳಮಾರುತಿ ಠಾಣೆಯ ಸಿಪಿಐ ವಿರುದ್ಧ ವಕೀಲರು ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪೊಲೀಸ್ ಠಾಣೆಗೆ ಹೋದ ವಕೀಲನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಮಾಳಮಾರುತಿ ಸಿಪಿಐ ಸುನಿಲ್ ಕುಮಾರ್ ಪಾಟೀಲ್ ವಿರುದ್ಧ ಕೇಳಿಬಂದಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಸುನಿಲ್ ಪಾಟೀಲ್ ಆಗಮಿಸಿ ಕ್ಷಮೆ ಕೋರಬೇಕೆಂದು ವಕೀಲರು ಪಟ್ಟು ಹಿಡಿದರು. ಕಳೆದ ಎರಡು ಗಂಟೆಯಿಂದ ಗೋವಾ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ವಕೀಲರ ಮನವೊಲಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಡಿಸಿಪಿ ವಿಕ್ರಂ ಆಮಟೆ ಭೇಟಿ ನೀಡಿದ್ದರು.




