ಅದು ನಾಯಿಯಲ್ಲ ಚಿರತೆಯೇ.. ಕಾಂಕ್ರೀಟ್ ಕಾಡಿನ ಅಪಾರ್ಟ್ಮೆಂಟ್ನಲ್ಲಿ ಚಿರತೆ ಪ್ರತ್ಯಕ್ಷ.. ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ
ಚಿರತೆ ಅಪಾರ್ಟ್ಮೆಂಟ್ನಲ್ಲಿ ಇರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಆಪರೇಷನ್ ಚೀತಾಗೆ ಮುಂದಾಗಿದೆ. ಚಿರತೆ ಅಪಾರ್ಟ್ಮೆಂಟ್ ಒಳಗೆ ಬರುವ ಮಾರ್ಗದಲ್ಲಿ ಬೋನ್ ಅಳವಡಿಕೆ ಮಾಡಲಾಗಿದೆ. ಜೊತೆಗೆ ಚಿರತೆಯನ್ನ ಸೆಳೆಯಲು ಬೋನ್ ಒಳಗೆ ಕುರಿ ಮರಿಯನ್ನು ಕಟ್ಟಲಾಗಿದೆ. ಹಾಗೂ ಬೋನ್ ಸುತ್ತಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಬೆಂಗಳೂರು: ಕಾಂಕ್ರೀಟ್ ಕಾಡಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವನ್ಯಮೃಗಗಳು ನುಸುಳುವುದು ಹೊಸದೇನೂ ಅಲ್ಲ. ಆಗಾಗ ಕಾಡಿನಲ್ಲಿರಬೇಕಾದ ಪ್ರಾಣಿಗಳು ರಾಜಧಾನಿಗೆ ವಿಸಿಟ್ ಹಾಕುತ್ತಿರುತ್ತವೆ. ಕಳೆದ ನಾಲ್ಕಾರು ದಿನಗಳ ಹಿಂದೆಯೂ ಹೀಗೇ ಆಗಿದೆ. ಚಿರತೆಯೊಂದು ಬೆಂಗಳೂರು ದಕ್ಷಿಣ ಭಾಗದ ಅಪಾರ್ಟ್ಮೆಂಟ್ನೊಳಕ್ಕೆ ನುಸುಳಿದೆ. ಅದು ರಾತ್ರಿ ವೇಳೆ ನುಸುಳಿದ್ದರಿಂದ ಕತ್ತಲೆಯಲ್ಲಿ ಸಿಸಿಟಿವಿಯಲ್ಲಿ ಕಂಡುಬಂದ ಪ್ರಾಣಿ ಚಿರತೆಯಲ್ಲ; ನಾಯಿ ಎಂದು ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಯಾಮಾರಿದ್ದರು. ಆದರೆ ಈಗ ಅಪಾರ್ಟ್ಮೆಂಟ್ನೊಳಕ್ಕೆ ನುಸುಳಿರುವುದು ಚಿರತೆಯೇ ಸರಿ ಎಂಬುದು ಪಕ್ಕಾ ಆಗಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಚಿರತೆಯ ಹೆಸರು ಕೇಳಿದರೇನೆ ಜನರಲ್ಲಿ ನಡುಕು ಹುಟ್ಟುತ್ತೆ. ನಗರದ ಬೇಗೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ prestige apartment ಒಳಗೆ ಚಿರತೆ ಕಾಣಿಸಿಕೊಂಡಿದ್ದು ಜನರ ಜೀವ ಬಾಯಿಗೆ ಬಂದಂತಾಗಿದೆ. ಸದ್ಯ ಈಗ ಚಿರತೆಯನ್ನು ಸೆರೆ ಹಿಡಿಯಲು ನಾನಾ ಕಸರತ್ತುಗಳನ್ನು ಮಾಡಲಾಗುತ್ತಿದೆ.
ಆಪರೇಷನ್ ಚೀತಾ ಆರಂಭ, ಬೋನ್ ಒಳಗೆ ಕುರಿ ಮರಿ ಇಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಅಪಾರ್ಟ್ಮೆಂಟ್ನಲ್ಲಿ ಠಿಕಾಣಿ ಹೂಡಿರುವ ಬಗ್ಗೆ ಮಾಹಿತಿ ಖಚಿತಪಡುತ್ತಿದ್ದಂತೆ ಅರಣ್ಯ ಇಲಾಖೆ ಆಪರೇಷನ್ ಚೀತಾಗೆ Operation Cheetah ಮುಂದಾಗಿದೆ. ಚಿರತೆ ಅಪಾರ್ಟ್ಮೆಂಟ್ ಒಳಗೆ ಬರುವ ಮಾರ್ಗದಲ್ಲಿ ಬೋನ್ ಅಳವಡಿಸಲಾಗಿದೆ. ಜೊತೆಗೆ ಚಿರತೆಯನ್ನ ಸೆಳೆಯಲು ಬೋನ್ ಒಳಗೆ ಕುರಿ ಮರಿಯನ್ನು ಕಟ್ಟಲಾಗಿದೆ. ಹಾಗೂ ಬೋನ್ ಸುತ್ತಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕೆಲ ದಿನಗಳ ಹಿಂದೆಯೇ ಚಿರತೆ ಇರುವಿಕೆಯು ಕಂಡುಬಂದಿತ್ತು. ಆದ್ರೆ ಸಿಸಿಟಿವಿಯಲ್ಲಿ ಚಿರತೆ ನೋಡಿದ ಕೆಲ ಜನ ಅದು ನಾಯಿ ಎಂದು ನಿರ್ಲಕ್ಷ್ಯ ಮಾಡಿದ್ರು. ಇನ್ನು ಕೆಲ ಮಂದಿ ಆತಂಕದಲ್ಲೇ ದಿನ ಕಳೆಯುತ್ತಿದ್ದರು. ಸದ್ಯ ಈಗ ಮತ್ತೆ ಚಿರತೆಯೊಂದು ತಾನಿರುವ ಸುಳಿವನ್ನು ಕೊಟ್ಟಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಬನ್ನೇರುಘಟ್ಟ ಅಭಯಾರಣ್ಯದಿಂದ ಚಿರತೆ ಬಂದಿರಬಹುದು ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಬಳಿ ಚಿರತೆ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ರಾತ್ರಿ ವೇಳೆ ಅಪಾರ್ಟ್ಮೆಂಟ್ ಸುತ್ತಾಮುತ್ತಾ ಏರಿಯಾದಲ್ಲಿ ಚಿರತೆಯ ಓಡಾಟ ಹೆಚ್ಚಾಗಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದು ಫ್ಲ್ಯಾಟ್‌ಗಳಿಂದ ಹೊರಬರುವುದಕ್ಕೂ ಸಹ ಹೆದರುತಿದ್ದರು.
ಬನ್ನೇರುಘಟ್ಟ ಅಭಯಾರಣ್ಯದಿಂದ ಈ ಚಿರತೆ ಬಂದಿರಬಹುದು ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಚಿರತೆಯನ್ನು ಯಶಸ್ವಿಯಾಗಿ ಸೆರ ಹಿಡಿದು ಜನರ ಆತಂಕವನ್ನು ದೂರ ಮಾಡಬೇಕಿದೆ.
ಬೆಂಗಳೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಬಳಿ ಚಿರತೆ ಮತ್ತೆ ಪ್ರತ್ಯಕ್ಷ!
Published On - 12:30 pm, Wed, 27 January 21