ಐಪಿಪಿಬಿ- ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಹಯೋಗ; ಶೇ 6.66ರ ಬಡ್ಡಿ ದರದ ಗೃಹ ಸಾಲ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಗ್ರಾಹಕರಿಗೆ ಇದು ಶುಭ ಸುದ್ದಿ. ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಹಯೋಗದಿಂದ ಗೃಹ ಸಾಲ ದೊರೆಯಲಿದೆ,
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಸೆಪ್ಟೆಂಬರ್ 8ರಂದು ಹೇಳಿರುವಂತೆ, ಎಲ್ಐಸಿ ಹೌಸಿಂಗ್ ಫೈನಾನ್ಸ್ನೊಂದಿಗೆ ಸಹಯೋಗ ವಹಿಸಿದ್ದು, 4.5 ಕೋಟಿ ಗ್ರಾಹಕರಿಗೆ ಹೌಸಿಂಗ್ ಫೈನಾನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಈ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳಿದೆ. ಬ್ಯಾಂಕ್ ತನ್ನ 650 ಶಾಖೆಗಳು ಮತ್ತು 1,36,000ಕ್ಕಿಂತ ಹೆಚ್ಚು ಬ್ಯಾಂಕಿಂಗ್ ಸಂಪರ್ಕ ಕೇಂದ್ರಗಳ ಮೂಲಕ ತನ್ನ ದೃಢವಾದ ಮತ್ತು ವ್ಯಾಪಕವಾದ ನೆಟ್‌ವರ್ಕ್ ಇದ್ದು, ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LICHFL) ಗೃಹ ಸಾಲದ ಉತ್ಪನ್ನಗಳನ್ನು ತನ್ನ ಗ್ರಾಹಕರಿಗೆ ಅಖಿಲ ಭಾರತ ಮಟ್ಟದಲ್ಲಿ ಒದಗಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. LICHFL ಕ್ರೆಡಿಟ್ ಅಂಡರ್‌ರೈಟಿಂಗ್, ಪ್ರೊಸೆಸಿಂಗ್ ಮತ್ತು ಎಲ್ಲ ಗೃಹ ಸಾಲಗಳ ವಿತರಣೆಯನ್ನು ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನಿರ್ವಹಿಸುತ್ತದೆ, ಆದರೆ IPPBಯಿಂದ ಸಾಲಗಳನ್ನು ಸೋರ್ಸ್ ಮಾಡುತ್ತದೆ.
ಎಲ್‌ಐಸಿ ಹೌಸಿಂಗ್ ಫೈನಾನ್ಸ್ ವೇತನದಾರರಿಗೆ ಶೇ 6.66ರ ಬಡ್ಡಿದರದಿಂದ ಆರಂಭಗೊಂಡು ರೂ. 50 ಲಕ್ಷದವರೆಗಿನ ಗೃಹ ಸಾಲವನ್ನು ನೀಡುತ್ತದೆ.
ಐಪಿಪಿಬಿಯ ವ್ಯಾಪ್ತಿಯನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಪಾಲುದಾರಿಕೆ LICHFL ಜೊತೆಗಿನ ಪಾಲುದಾರಿಕೆಯೊಂದಿಗೆ ತನ್ನ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ವಿವಿಧ ಗ್ರಾಹಕರ, ಅದರಲ್ಲೂ ಬ್ಯಾಂಕ್ ವ್ಯವಸ್ಥೆ ಲಭ್ಯ ಆಗದಿರುವ ಹಾಗೂ ದಕ್ಕದಿರುವವರ ಪಾಲಿಗೆ ಹಣಕಾಸಿನ ಅಗತ್ಯಗಳನ್ನು ಪೂರೈಸುವುದು IPPB ತಂತ್ರದ ಭಾಗವಾಗಿದೆ. ವಿಮಾ ಕಂಪೆನಿಗಳ ಪಾಲುದಾರಿಕೆಯ ಮೂಲಕ IPPB ಈಗಾಗಲೇ ಸಾಮಾನ್ಯ ಮತ್ತು ಜೀವ ವಿಮಾ ಉತ್ಪನ್ನಗಳನ್ನು ವಿತರಿಸುತ್ತಿದೆ. ಸಾಲದ ಉತ್ಪನ್ನಗಳು ಕೊನೆಯ ಸಾಲಿನಲ್ಲೂ ಇರುವ ಗ್ರಾಹಕರಿಗೆ ಸಹಜವಾಗಿ ವಿಸ್ತರಣೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮನೆ ಬಾಗಿಲಿನ ಬ್ಯಾಂಕಿಂಗ್‌ಗಾಗಿ ಮೈಕ್ರೋ ಎಟಿಎಂ ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ಹೊಂದಿದ ಐಪಿಪಿಬಿಯು ಸುಮಾರು 2,00,000 ಅಂಚೆ ಉದ್ಯೋಗಿಗಳನ್ನು (ಪೋಸ್ಟ್‌ಮೆನ್ ಮತ್ತು ಗ್ರಾಮೀಣ ದಾಕ್ ಸೇವಕರು) ಹೊಂದಿದೆ. LICHFLನ ಗೃಹ ಸಾಲಗಳನ್ನು ನೀಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.
ಮನೆ ಖರೀದಿಗೆ ಸಾಲ ದೊರೆಯುವುದು ಎಲ್ಲವನ್ನೂ ಒಳಗೊಂಡಂಥ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಬಹಳ ಮುಖ್ಯವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. LICHFL ಜೊತೆಗಿನ ಪಾಲುದಾರಿಕೆಯು IPPBಯ ಪ್ರಯಾಣದಲ್ಲಿ ಮಹತ್ವದ ಹೊಂದಾಣಿಕೆ ಆಗಿದ್ದು, ವಿವಿಧ ಅಗತ್ಯಗಳನ್ನು ಪೂರೈಸಲು ನಮ್ಮ ಗ್ರಾಹಕರಿಂದ ಕ್ರೆಡಿಟ್ ಉತ್ಪನ್ನಗಳನ್ನು ಪಡೆಯುವ ಒಂದು ದೊಡ್ಡ ವೇದಿಕೆಯಾಗಿದೆ. ಐಪಿಪಿಬಿಯೊಂದಿಗಿನ ಕಾರ್ಯತಂತ್ರದ MOU ಕಂಪೆನಿಗೆ ಮಾರುಕಟ್ಟೆಯ ಒಳಹೊಕ್ಕು ಮತ್ತಷ್ಟು ವ್ಯಾಪಿಸಲು ಸಹಾಯ ಮಾಡುತ್ತದೆ ಎಂದು ಬ್ಯಾಂಕ್ ಹೇಳಿದೆ.
ಅಲ್ಲದೆ, ದೇಶಾದ್ಯಂತ LICHFLನ ಗೃಹ ಸಾಲ ಉತ್ಪನ್ನದ ವ್ಯಾಪ್ತಿಯನ್ನು ಹೆಚ್ಚಿಸಲು ಬ್ಯಾಂಕ್‌ಗೆ ಸಾಧ್ಯವಾಗುತ್ತದೆ. ಕಾರ್ಯತಂತ್ರದ ಪಾಲುದಾರಿಕೆಯು ಅಂಚೆ ಕಚೇರಿಗಳ ಸಾಟಿಯಿಲ್ಲದ ಉಪಸ್ಥಿತಿಯೊಂದಿಗೆ ಬ್ಯಾಂಕ್ನ ದೀರ್ಘಕಾಲೀನ ವ್ಯಾಪಾರ ಬೆಳವಣಿಗೆಯನ್ನು ಮತ್ತು ಮಾರುಕಟ್ಟೆ ಪಾಲನ್ನು ಸುಧಾರಿಸುತ್ತದೆ ಎಂದು IPPB ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: LIC Credit Card: ಎಲ್ಐಸಿ- ಐಡಿಬಿಐಯಿಂದ ಹೊಸದಾಗಿ ಎರಡು ಕ್ರೆಡಿಟ್ ಕಾರ್ಡ್ ಬಿಡುಗಡೆ; ಏನೆಲ್ಲ ಅನುಕೂಲ ಗೊತ್ತೆ?
(LIC Housing Finance Tie Up With India Post Payments Bank For Housing Loan Here Is The Details)
Published On - 11:25 pm, Wed, 8 September 21