ರಾತ್ರೋರಾತ್ರಿ ಆಗಸದಲ್ಲಿ ಬೆಳ್ಳನೆಬೆಳಕು! ಕೊರೊನಾ ಭೀತಿಯಲ್ಲಿ ಬೆಚ್ಚಿಬಿದ್ದ ಗ್ರಾಮಸ್ಥರು

| Updated By: ಆಯೇಷಾ ಬಾನು

Updated on: May 26, 2020 | 12:01 PM

ಮಂಡ್ಯ: ರಾತ್ರೋ ರಾತ್ರಿ ಆಗಸದಲ್ಲಿ ದಿಢೀರ್ ಬೆಳಕು ಮೂಡಿ ಅಚ್ಚರಿಗೊಳಿಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದೆ. ಸುಮಾರು ಸಂಜೆ 7.15ರ ಸಮಯದಲ್ಲಿ ಸುಮಾರು 5 ನಿಮಿಷಗಳ ಕಾಲ ಬೆಳಕು ಕಾಣಿಸಿಕೊಂಡಿದೆ. ಕತ್ತಲಲ್ಲಿ ದಿಢೀರ್ ಬೆಳಕು ನೋಡಿ ಬೆಳಗ್ಗೆಯಂತೆ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ. ಕತ್ತಲೆಯಾದ್ದರಿಂದ ಎಲ್ಲಾ ಗ್ರಾಮಸ್ಥರು ಮನೆಯೊಳಗೆ ಸೇರಿದ್ದರು. ದಿಢೀರ್ ಬೆಳಕು ಕಂಡು ನಿಬ್ಬೆರಗಾಗಿ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ. ಅಲ್ಲದೆ ನಾಲ್ಕೈದು ದಿನಗಳ ಹಿಂದೆ ಮಧ್ಯಾಹ್ನದ ವೇಳೆ ಭಾರೀ ಸದ್ದು ಕೇಳಿಸಿತ್ತು. ಇದು […]

ರಾತ್ರೋರಾತ್ರಿ ಆಗಸದಲ್ಲಿ ಬೆಳ್ಳನೆಬೆಳಕು! ಕೊರೊನಾ ಭೀತಿಯಲ್ಲಿ ಬೆಚ್ಚಿಬಿದ್ದ ಗ್ರಾಮಸ್ಥರು
Follow us on

ಮಂಡ್ಯ: ರಾತ್ರೋ ರಾತ್ರಿ ಆಗಸದಲ್ಲಿ ದಿಢೀರ್ ಬೆಳಕು ಮೂಡಿ ಅಚ್ಚರಿಗೊಳಿಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದೆ. ಸುಮಾರು ಸಂಜೆ 7.15ರ ಸಮಯದಲ್ಲಿ ಸುಮಾರು 5 ನಿಮಿಷಗಳ ಕಾಲ ಬೆಳಕು ಕಾಣಿಸಿಕೊಂಡಿದೆ. ಕತ್ತಲಲ್ಲಿ ದಿಢೀರ್ ಬೆಳಕು ನೋಡಿ ಬೆಳಗ್ಗೆಯಂತೆ ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.

ಕತ್ತಲೆಯಾದ್ದರಿಂದ ಎಲ್ಲಾ ಗ್ರಾಮಸ್ಥರು ಮನೆಯೊಳಗೆ ಸೇರಿದ್ದರು. ದಿಢೀರ್ ಬೆಳಕು ಕಂಡು ನಿಬ್ಬೆರಗಾಗಿ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ. ಅಲ್ಲದೆ ನಾಲ್ಕೈದು ದಿನಗಳ ಹಿಂದೆ ಮಧ್ಯಾಹ್ನದ ವೇಳೆ ಭಾರೀ ಸದ್ದು ಕೇಳಿಸಿತ್ತು. ಇದು ಮಂಡ್ಯ ಜಿಲ್ಲೆಯಲ್ಲಿ ವಾರದಲ್ಲೇ ಎರಡನೇ ಅಚ್ಚರಿಯಾಗಿದೆ.

Published On - 11:31 am, Tue, 26 May 20