ಶುರುವಾಗಿದೆ ಲಾಬಿ.. ಸಂಸದ ಸುರೇಶ್ ಅಂಗಡಿ ಕ್ಷೇತ್ರದ ಟಿಕೆಟ್‌ಗಾಗಿ!
ಬೆಳಗಾವಿ: ಕೊರೊನಾ ಮಹಾಮಾರಿಯಿಂದ ಅಕಾಲಿಕ ಸಾವು ಕಂಡ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅದಾಗಲೇ ರಾಜಕೀಯ ಗರಿಗೆದರಿದೆ. ಬೆಳಗಾವಿ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದ ಸುರೇಶ್ ಅಂಗಡಿ ಕ್ಷೇತ್ರದ ಟಿಕೆಟ್‌ಗೆ ಸೈಲೆಂಟ್ ಆಗಿ ಲಾಬಿ ಆರಂಭಗೊಂಡಿದೆ. ಅಂಗಡಿ ಪತ್ನಿ ಮಂಗಲಾ ಪರ ಕಾರ್ಯಕರ್ತರ ಒಲವು ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಗಲಾ ಪರ ಒಲವು ಹೆಚ್ಚಾಗಿದ್ದು, ಮತ್ತೊಂದೆಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದಲೂ ಲಾಬಿ ಶುರುವಾಗಿದೆ. ಆದ್ರೆ, RSS ಮುಖಂಡರು ಸಮ್ಮತಿಸಿದ […]
ಬೆಳಗಾವಿ: ಕೊರೊನಾ ಮಹಾಮಾರಿಯಿಂದ ಅಕಾಲಿಕ ಸಾವು ಕಂಡ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅದಾಗಲೇ ರಾಜಕೀಯ ಗರಿಗೆದರಿದೆ. ಬೆಳಗಾವಿ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದ ಸುರೇಶ್ ಅಂಗಡಿ ಕ್ಷೇತ್ರದ ಟಿಕೆಟ್‌ಗೆ ಸೈಲೆಂಟ್ ಆಗಿ ಲಾಬಿ ಆರಂಭಗೊಂಡಿದೆ. ಅಂಗಡಿ ಪತ್ನಿ ಮಂಗಲಾ ಪರ ಕಾರ್ಯಕರ್ತರ ಒಲವು ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಂಗಲಾ ಪರ ಒಲವು ಹೆಚ್ಚಾಗಿದ್ದು, ಮತ್ತೊಂದೆಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದಲೂ ಲಾಬಿ ಶುರುವಾಗಿದೆ. ಆದ್ರೆ, RSS ಮುಖಂಡರು ಸಮ್ಮತಿಸಿದ ಅಭ್ಯರ್ಥಿ ಹೆಸರೇ ಬಹುತೇಕ ಅಂತಿಮಗೊಳ್ಳಲಿದೆ ಎನ್ನಲಾಗಿದೆ.
ಹೊಸ ಮುಖವನ್ನು ಪರಿಚಯಿಸುವ ಬಗ್ಗೆ ನಾಯಕರ ಒಲವು ಹೆಚ್ಚಾಗಿದೆ. ಟಿಕೆಟ್ ರೇಸ್‌ನಲ್ಲಿ ಇಬ್ಬರು ಯುವ ಪದಾಧಿಕಾರಿಗಳ ಹೆಸರು ಚಾಲ್ತಿಯಲ್ಲಿದೆ. ಈ ಪೈಕಿ ಓರ್ವ ಆಟೋಮೊಬೈಲ್ ಉದ್ಯಮಿ ಆಗಿದ್ದಾರೆ.
ಇಂದು ಬೆಳಗಾವಿಗೆ ಆಗಮಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸುರೇಶ್ ಅಂಗಡಿ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಜಿಲ್ಲಾ ಮುಖಂಡರ ಜತೆ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಇತ್ತ ಕಾಂಗ್ರೆಸ್ ಪಕ್ಷದಿಂದ ಯಾರು ಅಭ್ಯರ್ಥಿಯಾಗ್ತಾರೆ ಎಂಬ ಬಗ್ಗೆಯೂ ಕುತೂಹಲ ಗರಿಗೆದರಿದೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ಸೇರಿದಂತೆ ಮೂರು ಜನ ಟಿಕೆಟ್ ರೇಸ್ ನಲ್ಲಿದ್ದಾರೆ. ಇನ್ನು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಒಟ್ಟಾರೆಯಾಗಿ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸೈಲೆಂಟ್ ಆಗಿಯೇ ಲಾಬಿ ಶುರುವಾಗಿದೆ.
Published On - 10:26 am, Tue, 29 September 20