ಶಿವನಿಗೆ ಬಿಲ್ವಪತ್ರೆ ಶ್ರೇಷ್ಠವೇಕೆ? ಈ ಮರ ಹುಟ್ಟಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

ಸ್ಕಂದ ಪುರಾಣದ ಪ್ರಕಾರ ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿದ್ದ ಮರವೇ ಬಿಲ್ಪ ಪತ್ರೆ. ಮಂದಾರ ಪರ್ವತದ ಮೇಲೆ ಹೋಗುವಾಗ ಪಾರ್ವತಿ ಬೆವರ ಹನಿಯೊಂದು ಬೀಳುತ್ತದೆ. ಇದರಿಂದ ಬಿಲ್ವ ಮರ ಹುಟ್ಟಿತ್ತಂತೆ.

ಶಿವನಿಗೆ ಬಿಲ್ವಪತ್ರೆ ಶ್ರೇಷ್ಠವೇಕೆ? ಈ ಮರ ಹುಟ್ಟಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ
Follow us
ರಾಜೇಶ್ ದುಗ್ಗುಮನೆ
|

Updated on:Feb 22, 2021 | 6:46 PM

ಸೋಮವಾರ ಶಿವನಿಗೆ ಶುಭ ದಿನ. ಆ ದಿನ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ಜನರ ನಂಬಿಕೆ. ಅತ್ಯಂತ ಶಕ್ತಿಯುತ ದೇವರಲ್ಲಿ ಶಿವ ಕೂಡ ಒಬ್ಬನು ಎನ್ನುವುದು ಪುರಾಣದಲ್ಲಿದೆ. ಹೀಗಾಗಿಯೇ, ಶಿವನಿಗೆ ಭೋಲೆನಾಥ್​ ಎಂದು ಕರೆಯಲಾಗುತ್ತದೆ. ಈಶ್ವರನಿಗೆ ಬಿಲ್ವಪತ್ರೆ ಪ್ರಿಯವಾದುದ್ದು. ಹೀಗಾಗಿ, ಭಕ್ತರು ಸೋಮವಾರ ಶಿವನ ದೇವಾಲಯಕ್ಕೆ ತೆರಳಿ, ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾರೆ. ಬಿಲ್ವಪತ್ರೆ ಏರಿಸುವುದಕ್ಕೂ ಮೊದಲು ನೀರಿನ ಅಭಿಷೇಕ ಮಾಡಿದರೆ ಶಿವ ಸಂತೋಷಗೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾದರೆ ಬಿಲ್ವಪತ್ರೆಯ ಮಹತ್ವ ಏನು? ಅದು ಶಿವನಿಗೆ ಏಕೆ ಇಷ್ಟ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಶಿವನಿಗೆ ಬಿಲ್ವಪತ್ರೆ ಏಕೆ ಪ್ರಿಯವಾದದ್ದು ಎನ್ನುವುದಕ್ಕೆ ಹಲವು ಕಥೆಗಳಿವೆ. ಪುರಾಣದ ಪ್ರಕಾರ, ದೇವತೆಗಳು ಹಾಗೂ ರಾಕ್ಷಸರು ಶೇಷನಾಗನ ಮೂಲಕ ಸಮುದ್ರ ಮಥನ ಮಾಡುತ್ತಾರೆ. ಈ ವೇಳೆ ಹೊರ ಬಂದ ವಿಷವನ್ನು ಶಿವ ಕುಡಿದಿದ್ದ. ಶಿವನ ತಲೆಯ ಮೇಲಿದ್ದ ಬಿಲ್ವಪತ್ರೆ ಈ ವಿಷದ ಅಂಶವನ್ನು ಕಡಿಮೆ ಮಾಡಿತ್ತು. ಇದನ್ನು ಮನಗಂಡ ದೇವತೆಗಳು ಶಿವನ ಮೇಲೆ ಬಿಲ್ವಪತ್ರೆ ಹಾಕಲು ಆರಂಭಿಸಿದ್ದರು. ಇದರಿಂದಾಗಿ ಶಿವನಲ್ಲಿದ್ದ ವಿಷದ ಪ್ರಮಾಣ ಸಂಪೂರ್ಣವಾಗಿ ಕಡಿಮೆ ಆಗಿತ್ತು. ಇದಾದ ನಂತರ ಶಿವನಿಗೆ ಬಿಲ್ವಪತ್ರೆ ಮೂಲಕ ಪೂಜಿಸುವ ಕ್ರಮವನ್ನು ಪ್ರಾರಂಭಿಸಲಾಯಿತು.

ಸ್ಕಂದ ಪುರಾಣದ ಪ್ರಕಾರ ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿದ್ದ ಮರವೇ ಬಿಲ್ಪಪತ್ರೆ. ಮಂದಾರ ಪರ್ವತದ ಮೇಲೆ ಹೋಗುವಾಗ ಪಾರ್ವತಿ ಬೆವರ ಹನಿಯೊಂದು ಬೀಳುತ್ತದೆ. ಇದರಿಂದ ಮಂದಾರ ಪರ್ವತದ ಮೇಲೆ ಬಿಲ್ವ ಮರ ಹುಟ್ಟಿತ್ತಂತೆ.

ಮೂರು ಎಲೆಯ ಬಿಲ್ವಪತ್ರೆಯ ಮಹತ್ವ ಮತ್ತು ಪ್ರತೀತಿ ಏನು? bilwa-patre-for-worshiping-mahewshwara 2 ಮೂರು ಎಲೆಯ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದು ಶ್ರೇಷ್ಠ ಎನ್ನುವುದು ಪುರಾಣದಲ್ಲಿದೆ. ಬಿಲ್ವಪತ್ರೆಯ ಮೂರು ದಳಗಳಲ್ಲಿ ಎಡಗಡೆಯಲ್ಲಿ ಬ್ರಹ್ಮ, ಬಲಗಡೆಯಲ್ಲಿ ವಿಷ್ಣು ಮತ್ತು ಮಧ್ಯದಲ್ಲಿ  ಸದಾಶಿವ ನೆಲೆಸಿರುತ್ತಾನೆಂದು ಪುರಾಣ ಹೇಳುತ್ತದೆ. ಶಿವನಿಗೆ ಸೋಮವಾರ ಶ್ರೇಷ್ಠ. ಇದರ ಜತೆಗೆ ಚತುರ್ಥಿ, ಅಷ್ಟಮಿ, ನವಮಿ ಸಮಯದಲ್ಲೂ ಪೂಜಿಸಬಹುದು. bilwa-patre-for-worshiping-mahewshwara 2 ಶಿವನಿಗೆ ಬಿಲ್ವಪತ್ರೆ ಎಷ್ಟು ಶ್ರೇಷ್ಠ ಎನ್ನುವುದಕ್ಕೆ ಬೇಡನ ಕಥೆ ಉತ್ತಮ ಉದಾಹರಣೆ. ಗುರುದ್ರುಹ ಹೆಸರಿನ ಬೇಡನೊಬ್ಬ ಶಿವರಾತ್ರಿಯಂದು ಬೇಟೆಗೆ ತೆರಳಿರುತ್ತಾನೆ. ಈ ವೇಳೆ ಆತ ಬಿಲ್ವಪತ್ರೆ ಮರವನ್ನು ಹತ್ತಿ ಕೂತಿರುತ್ತಾನೆ. ಅವನ ಬಳಿ ಇದ್ದ ಸೋರೆಕಾಯಿ ಬುರುಡೆಯಲ್ಲಿ ನೀರು ಇರುತ್ತದೆ. ಇದೇ ಸಂದರ್ಭದಲ್ಲಿ ಹೆಣ್ಣು ಜಿಂಕೆಯೊಂದು ಬರುತ್ತದೆ. ಜಿಂಕೆ ಹೊಡೆಯಲು ಮುಂದಾದಾಗ ಬಿಲ್ವ ಎಲೆ ಹಾಗೂ ನೀರು ಶಿವನ ಮೇಲೆ ಬೀಳುತ್ತದೆ. ಈ ಬೇಡನ ಪಾಪಗಳೆಲ್ಲ ಪರಿಹಾರವಾಗುತ್ತದೆ. ಶಿವ ಪ್ರತ್ಯಕ್ಷನಾಗಿ ಆತನಿಗೆ ಗುಹ ಎಂದು ಮರು ನಾಮಕರಣ ಮಾಡುತ್ತಾನೆ.

ಇದನ್ನೂ ಓದಿ: ಶಿವರಾತ್ರಿಯನ್ನು ಹೇಗೆ ಆಚರಿಸಬೇಕು..? ಏಕೆ ಆಚರಿಸಬೇಕು..?

Published On - 6:21 pm, Mon, 22 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ