ಹಾಸನ:ಯುವತಿಯನ್ನು ಆಕೆಯ ಪ್ರಿಯಕರ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಹೇಮಂತ್ ಎಂಬ ಆರೋಪಿ ಸಿದ್ದಾಪುರದಲ್ಲಿ ಸುಸ್ಮಿತಾ(20) ಎಂಬ ಯುವತಿಯನ್ನು ಹತ್ಯೆಗೈದಿದ್ದಾನೆ. ಕಳೆದ ಮೂರು ವರ್ಷಗಳಿಂದ ಆರೋಪಿಯು ಸುಸ್ಮಿತಾಳನ್ನು ಪ್ರೀತಿಸುತ್ತಿದ್ದರ ಬಗ್ಗೆ ಮಾಹಿತಿಯಿದೆ.
ಮದುವೆಗೆ ಒಪ್ಪದಿದ್ದಕ್ಕೆ ಸುಸ್ಮಿತಾಳನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಆರೋಪಿ ಹೇಮಂತ್ ಪ್ರೇಯಸಿಯನ್ನ ಕೊಲೆಗೈದು ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರ ಭೇಟಿ ನೀಡಿದ್ದಾರೆ.
‘ಪ್ರೀತಿ ಕೊಂದ ಪ್ರೇಯಸಿ’ಯನ್ನೇ ಹತ್ಯೆ ಮಾಡಿ, ಪೊಲೀಸರಿಗೆ ಶರಣಾದ ಪ್ರೇಮಿ!