LPG Gas Cylinder Price ಇಂದಿನಿಂದ ಅಡುಗೆ ಅನಿಲ ಸಿಲಿಂಡರ್ನಲ್ಲಿ ₹ 25 ಬೆಲೆ ಏರಿಕೆ
ಬೆಂಗಳೂರಿನಲ್ಲಿ ₹ 697 ಇದ್ದ 14 ಕೆಜಿ ಸಿಲಿಂಡರ್ ಬೆಲೆ ಇದೀಗ ₹ 722ಕ್ಕೆ ಮಾರಾಟವಾಗುತ್ತಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಮೊದಲು ₹ 707 ಇತ್ತು. ಇದೀಗ ₹ 732ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು LPG ದರವನ್ನು ಹೆಚ್ಚಿಸಿವೆ. ನಗರ ಸೇರಿದಂತೆ ದೇಶದ ವಿವಿಧೆಡೆ ಅಡುಗೆ ಅನಿಲ ಸಿಲಿಂಡರ್‌ಗಳು ಮತ್ತು ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಿವೆ. ಬೆಲೆ ಏರಿಕೆ ಇಂದಿನಿಂದಲೇ ಅನ್ವಯವಾಗುತ್ತಿದ್ದು, ಪ್ರತಿ ಸಿಲಿಂಡರ್ ಮೇಲಿನ ದರವು ₹ 25ರಷ್ಟು ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ₹ 697 ಇದ್ದ 14 ಕೆಜಿ ಸಿಲಿಂಡರ್ ಬೆಲೆ ಇದೀಗ ₹ 722ಕ್ಕೆ ಮಾರಾಟವಾಗುತ್ತಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಮೊದಲು ₹ 707 ಇತ್ತು. ಇದೀಗ ₹ 732ಕ್ಕೆ ಮಾರಾಟವಾಗುತ್ತಿದೆ. ಬಿಹಾರದ ಪಾಟ್ನಾದಲ್ಲಿ ₹ 25 ಹೆಚ್ಚಳದ ನಂತರ ₹ 817.50ಕ್ಕೆ ಸಿಲಿಂಡರ್ ಲಭ್ಯವಾಗುತ್ತಿದೆ. ಫೆ.1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹ 190ರಷ್ಟು ಹೆಚ್ಚಿಸಲಾಗಿತ್ತು.
ಡಿಸೆಂಬರ್‌ನಲ್ಲಿ ಅಡುಗೆ ಅನಿಲದ ಬೆಲೆ ಎರಡು ಬಾರಿ ಹೆಚ್ಚಾಗಿತ್ತು. ಕಳೆದ ಎರಡು ತಿಂಗಳುಗಳಲ್ಲಿ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹ 60ರಷ್ಟು ಹೆಚ್ಚಳ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ಪ್ರತಿ ಸಿಲಿಂಡರ್ ₹ 657ಕ್ಕೆ ಲಭ್ಯವಿತ್ತು. ಇದೀಗ ಈ ದರವು ₹ 722 ಮುಟ್ಟಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳು ₹ 1,198ಕ್ಕೆ ಲಭ್ಯವಿತ್ತು. ಡಿಸೆಂಬರ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ₹ 1365.50 ಮುಟ್ಟಿತ್ತು.
ಪೆಟ್ರೋಲಿಯಂ ಸಬ್ಸಿಡಿ ಕಡಿತವನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ನಲ್ಲಿ ಘೋಷಿಸಿದ ನಂತರ ಈ ಬೆಲೆ ಏರಿಕೆ ಕಂಡು ಬಂದಿದೆ. ಈ ವರ್ಷದ ಬಜೆಟ್ನಲ್ಲಿ ಪೆಟ್ರೊಲಿಯಂ ಸಬ್ಸಿಡಿಗೆ ₹ 12,995 ಕೋಟಿ ಮೀಸಲಿಡುವುದಾಗಿ ಘೋಷಿಸಲಾಗಿದೆ.
ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ?
Published On - 3:05 pm, Thu, 4 February 21