ತೆರಿಗೆ ವಂಚಿಸಲು ಈ ಐಷಾರಾಮಿ ಬಸ್​ ಮಾಲೀಕ ಮಾಡಿದ್ದೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Aug 27, 2020 | 10:01 AM

ಮೈಸೂರು: ಸಾರಿಗೆ ಇಲಾಖೆ, ತೆರಿಗೆ ಇಲಾಖೆ, ಪೊಲೀಸರಿಗೆ ಇಂತಹ ಪ್ರಕರಣಗಳು ಸಾಮಾನ್ಯವೇ.. ತೆರಿಗೆ ವಂಚಿಸಲು ಐಷಾರಾಮಿ ಬಸ್ ಮಾಲೀಕನಾಡಿದ ಕಳ್ಳಾಟ ಬಯಲಾಗುತ್ತಿದ್ದಂತೆ ನಂಜನಗೂಡು ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ. ತೆರಿಗೆ ವಂಚಿಸಲು ಕಾಮಧೇನು ಹೆಸರಿನ ಐಷಾರಾಮಿ ಬಸ್ ಮಾಲೀಕನೊಬ್ಬ ಕಿಲಾಡಿ ಐಡಿಯಾ ಮಾಡಿದ್ದ. ಕೆಎ11 ಬಿ 2969 ನೋಂದಣಿ ಸಂಖ್ಯೆಯನ್ನು ಹೊಂದಿರೂ ಎರಡು ಬಸ್​ಗಳನ್ನು ಇಟ್ಟುಕೊಂಡಿದ್ದ. ಸದ್ಯ ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್ಐ […]

ತೆರಿಗೆ ವಂಚಿಸಲು ಈ ಐಷಾರಾಮಿ ಬಸ್​ ಮಾಲೀಕ ಮಾಡಿದ್ದೇನು ಗೊತ್ತಾ?
Follow us on

ಮೈಸೂರು: ಸಾರಿಗೆ ಇಲಾಖೆ, ತೆರಿಗೆ ಇಲಾಖೆ, ಪೊಲೀಸರಿಗೆ ಇಂತಹ ಪ್ರಕರಣಗಳು ಸಾಮಾನ್ಯವೇ.. ತೆರಿಗೆ ವಂಚಿಸಲು ಐಷಾರಾಮಿ ಬಸ್ ಮಾಲೀಕನಾಡಿದ ಕಳ್ಳಾಟ ಬಯಲಾಗುತ್ತಿದ್ದಂತೆ ನಂಜನಗೂಡು ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ತೆರಿಗೆ ವಂಚಿಸಲು ಕಾಮಧೇನು ಹೆಸರಿನ ಐಷಾರಾಮಿ ಬಸ್ ಮಾಲೀಕನೊಬ್ಬ ಕಿಲಾಡಿ ಐಡಿಯಾ ಮಾಡಿದ್ದ. ಕೆಎ11 ಬಿ 2969 ನೋಂದಣಿ ಸಂಖ್ಯೆಯನ್ನು ಹೊಂದಿರೂ ಎರಡು ಬಸ್​ಗಳನ್ನು ಇಟ್ಟುಕೊಂಡಿದ್ದ. ಸದ್ಯ ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್ಐ ರವಿಕುಮಾರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಒಂದೇ ನೋಂದಣಿಯ ಎರಡೂ ಎರಡು ಐಷಾರಾಮಿ ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರು ಜೆ.ಎಲ್.ಬಿ ರಸ್ತೆಯ ಪೆಟ್ರೋಲ್ ಬಂಕ್​ನಲ್ಲಿ ನಿಲುಗಡೆಯಾಗಿದ್ದ ಒಂದು ಬಸ್ ಹಾಗೂ ನಂಜನಗೂಡು ಪಟ್ಟಣದ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿದ್ದ ಮತ್ತೊಂದು ಬಸ್​ ಅನ್ನು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಮೈಸೂರಿನ ಆರ್​ಟಿಓ ಕಚೇರಿಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ಪತ್ರ ಬರೆದಿದ್ದಾರೆ.