ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಸಲಾರ್’ ಚಿತ್ರಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕನ್ನಡದಲ್ಲಿ ಹಿಟ್ ಆದ ನಂತರ ಪ್ರಶಾಂತ್ ನೀಲ್ ಟಾಲಿವುಡ್ಗೆ ಹೊರಟೇ ಬಿಟ್ಟರು, ಕನ್ನಡಿಗರನ್ನು ಮರೆತರು ಎನ್ನುವ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿ ಪರ ವಿರೋಧ ಚರ್ಚೆಗಳು ಕೂಡ ನಡೆದಿದ್ದವು. ಈಗ ಸಲಾರ್ ಚಿತ್ರತಂಡದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ.
ಪ್ರಶಾಂತ್ ನಿಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಟಾಲಿವುಡ್ಗೆ ಹೋದರೂ ಕನ್ನಡ ಕಲಾವಿದರಿಗೆ ಆದ್ಯತೆ ನೀಡುವುದನ್ನು ಮರೆತಿಲ್ಲ. ಈಗ ‘ಸಲಾರ್‘ ಚಿತ್ರಕ್ಕೆ ಕನ್ನಡದ ಕಲಾವಿದನನ್ನು ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೊದಲು ಮಫ್ತಿ, ವಜ್ರಕಾಯದಂತ ಸಿನಿಮಾಗಳಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದ ಮಧು ಗುರುಸ್ವಾಮಿ ಈಗ ಸಲಾರ್ನಲ್ಲಿ ನಟಿಸಲಿದ್ದು, ಪ್ರಭಾಸ್ಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾದಲ್ಲಿ ಈ ಮೊದಲು ಕೆಲಸ ಮಾಡಿದ ತಾಂತ್ರಿಕ ವರ್ಗದ ಅನೇಕರು ಸಲಾರ್ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಹೋದರು ಕನ್ನಡಿಗರೆ ಆದ್ಯತೆ ನೀಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್ ಮುಂದುವರಿಸಿದೆ ಅನ್ನೋದು ವಿಶೇಷ.
ಸಲಾರ್ ಸಿನಿಮಾಗೆ ತಿಂಗಳ ಹಿಂದೆ ಮುಹೂರ್ತ ನೆರವೇರಿತ್ತು. ಕೆಜಿಎಫ್ ಸ್ಟಾರ್ ಯಶ್ ಸೇರಿ ಸಾಕಷ್ಟು ಮಂದಿ ಸಿನಿಮಾಗೆ ವಿಶ್ ಮಾಡಿದ್ದರು, ಈ ಚಿತ್ರ ಸಂಪೂರ್ಣವಾಗಿ ಆ್ಯಕ್ಷನಿಂದ ಕೂಡಿರಲಿದೆ ಎನ್ನುವುದು ಮೂಲಗಳ ಮಾತು.
ಪ್ರಭಾಸ್ ನಟನೆಯ ಸಲಾರ್ ಚಿತ್ರಕ್ಕೆ ಮುಹೂರ್ತ: ಹೈದರಾಬಾದ್ಗೆ ತೆರಳಿ ಶುಭ ಹಾರೈಸಿದ ಯಶ್!