ರೂಲ್ಸ್ ಬ್ರೇಕ್ ಮಾಡಿ, ಬಿಂದಾಸ್ ಆಗಿ ಓಡಾಡ್ತಿದ್ದ ಆಸಾಮಿಗೆ ಖಾಕಿ ಶಾಕ್: 77 ಕೇಸ್, 42,500 ರೂ. ದಂಡ!
ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಿದ್ದ ಆಸಾಮಿ ಪೋಲೀಸರ ಕೈಗೆ ಸಿಕ್ಕಿಬಿದ್ದು, 42,500 ರೂ ದಂಡದ ರಶೀದಿ ನೋಡಿ ಶಾಕ್ ಆಗಿದ್ದಾನೆ. ಬೈಕ್ ಸವಾರ ಅರುಣ್ ಕುಮಾರ್ ಎಂಬುವವರು ಬರೋಬ್ಬರಿ 77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಇಂದು ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಗ್ನಲ್ ಜಂಪ್, ವಿಥೌಟ್ ಹೆಲ್ಮೆಟ್ ಸೇರಿದಂತೆ ಸುಮಾರು 77 ಕೇಸ್ಗಳು ಅರುಣ್ ಕುಮಾರ್ ಬೈಕ್ ಮೇಲೆ ದಾಖಲಾಗಿದ್ದವು. ಆದರೆ ಆತ ಫೈನ್ ಕಟ್ಟದೆ ಅದೇ ತಪ್ಪನ್ನು […]

ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಿದ್ದ ಆಸಾಮಿ ಪೋಲೀಸರ ಕೈಗೆ ಸಿಕ್ಕಿಬಿದ್ದು, 42,500 ರೂ ದಂಡದ ರಶೀದಿ ನೋಡಿ ಶಾಕ್ ಆಗಿದ್ದಾನೆ. ಬೈಕ್ ಸವಾರ ಅರುಣ್ ಕುಮಾರ್ ಎಂಬುವವರು ಬರೋಬ್ಬರಿ 77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಇಂದು ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸಿಗ್ನಲ್ ಜಂಪ್, ವಿಥೌಟ್ ಹೆಲ್ಮೆಟ್ ಸೇರಿದಂತೆ ಸುಮಾರು 77 ಕೇಸ್ಗಳು ಅರುಣ್ ಕುಮಾರ್ ಬೈಕ್ ಮೇಲೆ ದಾಖಲಾಗಿದ್ದವು. ಆದರೆ ಆತ ಫೈನ್ ಕಟ್ಟದೆ ಅದೇ ತಪ್ಪನ್ನು ಮುಂದುವರೆಸಿದ್ದ ಸದ್ಯ ಮಡಿವಾಳ ಸಂಚಾರಿ ಪೊಲೀಸ್ ನವೀನ್ ಕುಮಾರ್ ಮತ್ತು ಪಿಎಸ್‌ಐ ಶಿವರಾಜ್ ಕುಮಾರ್ ಕಾರ್ಯಾಚರಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಇನ್ಸ್ಪೆಕ್ಟರ್ ನವೀನ್ ಕುಮಾರ್, ಅರುಣ್ ಕುಮಾರ್ಗೆ 42,500 ರೂ ದಂಡ ವಿಧಿಸಿದ್ದು, ಸವಾರನಿಗೆ ನೋಟಿಸ್ ನೀಡಿ ಬೈಕ್ ವಶಕ್ಕೆ ಪಡೆದಿದ್ದಾರೆ.




