Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿ ವಿವಾದ ಕೆದಕಿದ ಮಹಾರಾಷ್ಟ್ರ ಸರ್ಕಾರ; 50 ವರ್ಷದ ಹಿಂದಿನ ಸಾಕ್ಷ್ಯಚಿತ್ರ ವಿಡಿಯೋ ರೀ ರಿಲೀಸ್

ಸಿಎಂ ಉದ್ಧವ್ ಠಾಕ್ರೆ ಸೂಚನೆಯಂತೆ ಕುಮಾರಸೇನ್ ಸಮರ್ಥ್ ನಿರ್ದೇಶನದಲ್ಲಿ ಸಿದ್ಧಪಡಿಸಿರುವ 50 ವರ್ಷ ಹಿಂದಿನ 35 ನಿಮಿಷದ ‘ಎ ಕೇಸ್ ಫಾರ್ ಜಸ್ಟೀಸ್’ ಹೆಸರಿನ ಸಾಕ್ಷ್ಯಚಿತ್ರ ಯುಟ್ಯೂಬ್​​ಗೆ ಅಪ್ಲೋಡ್ ಆಗಿದೆ.

ಗಡಿ ವಿವಾದ ಕೆದಕಿದ ಮಹಾರಾಷ್ಟ್ರ ಸರ್ಕಾರ; 50 ವರ್ಷದ ಹಿಂದಿನ ಸಾಕ್ಷ್ಯಚಿತ್ರ ವಿಡಿಯೋ ರೀ ರಿಲೀಸ್
ವಿಡಿಯೋ ತುಣುಕು
Follow us
sandhya thejappa
| Updated By: ಸಾಧು ಶ್ರೀನಾಥ್​

Updated on:Jan 29, 2021 | 11:00 AM

ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಟ್ವೀಟ್​ಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೆ ಇದೀಗ ಮಹಾರಾಷ್ಟ್ರ ಸರ್ಕಾರ 50 ವರ್ಷದ ಹಿಂದಿನ ಸಾಕ್ಷ್ಯಚಿತ್ರದ ವಿಡಿಯೋವನ್ನು ಮರು ಬಿಡುಗಡೆ ಮಾಡುವ ಮೂಲಕ ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಬಿಂಬಿಸಲು ಯತ್ನ ನಡೆಸಿದೆ.

ಸಿಎಂ ಉದ್ಧವ್ ಠಾಕ್ರೆ ಸೂಚನೆಯಂತೆ ಕುಮಾರಸೇನ್ ಸಮರ್ಥ್ ನಿರ್ದೇಶನದಲ್ಲಿ ಸಿದ್ಧಪಡಿಸಿರುವ 50 ವರ್ಷ ಹಿಂದಿನ 35 ನಿಮಿಷದ ‘ಎ ಕೇಸ್ ಫಾರ್ ಜಸ್ಟೀಸ್’ (A case for Justice) ಹೆಸರಿನ ಸಾಕ್ಷ್ಯಚಿತ್ರ ಯುಟ್ಯೂಬ್​​ಗೆ ಅಪ್ಲೋಡ್ ಆಗಿದೆ.

ಸಾಕ್ಷ್ಯಚಿತ್ರದ ಮಾಹಿತಿ 50 ವರ್ಷದ ಹಿಂದಿನ ಗಡಿಯಲ್ಲಿನ ಪರಿಸ್ಥಿತಿ ಕುರಿತು ಜನಜೀವನ ಸ್ಥಿತಿಯ ಬಗ್ಗೆ ಇರುವ ವಿಡಿಯೋವನ್ನು ಬಿಡುಗಡೆಗೊಳಿಸಿದ್ದು, ಬೆಳಗಾವಿಯಲ್ಲಿ 1890ರಲ್ಲಿ ನಿರ್ಮಾಣವಾದ ಸೇತುವೆ ಮೇಲೆ ಮರಾಠಿ ನಾಮಫಲಕ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಕಾರವಾರದ ಶಾಲೆಯೊಂದರಲ್ಲಿ ಇಂಗ್ಲಿಷ್, ಕೊಂಕಣಿ, ಮರಾಠಿ ಭಾಷೆಯಲ್ಲಿ ಬೋಧನೆ ಮಾಡುವ ಮತ್ತು ಎನ್​ಸಿಸಿ ಬಟಾಲಿಯನ್ನಲ್ಲಿ ಮರಾಠಿ ಭಾಷೆಯ ಪೋಸ್ಟರ್ ಇರುವ ದೃಶ್ಯ ಸೆರೆಯಾಗಿದೆ. ಕರ್ನಾಟಕ ಗಡಿಯಲ್ಲಿ ಕನ್ನಡ ಇರಲಿಲ್ಲ. ಮರಾಠಿ ಭಾಷೆ ಬಳಕೆ ಮಾಡುತ್ತಿದ್ದನ್ನು ವಿಡಿಯೋದಲ್ಲಿ ಇರುವುದು ಕಂಡುಬಂದಿದೆ.

ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರ.. ಗಡಿ ವಿವಾದ ಕುರಿತು ಪುಸ್ತಕ ಬಿಡುಗಡೆ

Published On - 10:53 am, Fri, 29 January 21