ಮೈಸೂರಿನಲ್ಲಿ ವೈದ್ಯ ದಂಪತಿ ಮೇಲೆ ಅವರ ನಿವಾಸದಲ್ಲೇ ಹಲ್ಲೆ, ಕಾರಣವೇನು?
ಮೊದಲು ಮನೆಯಲ್ಲಿದ್ದ ಡಾ ಕೃಷ್ಣಕುಮಾರಿ ತಲೆಗೆ ಹೊಡೆದಿರುವ ಆತ ನಂತರ ಮನೆಗೆ ಬಂದ ಡಾ ಕೇಶವ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೈಸೂರು: ಸಾಂಸ್ಕೃತಿಕ ನಗರದಲ್ಲಿ ವೈದ್ಯ ದಂಪತಿಯ ಮೇಲೆ ಅವರ ನಿವಾಸದಲ್ಲೇ ಹಲ್ಲೆ ನಡೆದಿದೆ. ಡಾ. ಕೇಶವ ಮತ್ತು ಡಾ. ಕೃಷ್ಣಕುಮಾರಿ ಹಲ್ಲೆಗೊಳಗಾದ ವೈದ್ಯ ದಂಪತಿ. ಮೈಸೂರಿನ ವಿಜಯನಗರದಲ್ಲಿ ಘಟನೆ ನಡೆದಿದೆ.
ಕಳ್ಳತನ ಮಾಡಲು ಬಂದ ಕಳ್ಳ ಈ ಕುಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮೊದಲು ಮನೆಯಲ್ಲಿದ್ದ ಡಾ ಕೃಷ್ಣಕುಮಾರಿ ತಲೆಗೆ ಹೊಡೆದಿರುವ ಆತ ನಂತರ ಮನೆಗೆ ಬಂದ ಡಾ ಕೇಶವ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.
ವೈದ್ಯ ದಂಪತಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಡಿಸಿಪಿ ಡಾ ಎ ಎನ್ ಪ್ರಕಾಶ್ ಗೌಡ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.