ಪೀರನವಾಡಿ ರಾಯಣ್ಣ ಮೂರ್ತಿ ಪ್ರಕರಣ: ಉರಿಯೋ ಬೆಂಕಿಗೆ ತುಪ್ಪ ಸುರಿಯಲು ‘ಮಹಾ’ ಯತ್ನ
ಬೆಳಗಾವಿ: ಜಿಲ್ಲೆಯ ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿಯಲು ಮಹಾರಾಷ್ಟ್ರ ರಾಜಕಾರಣಿಗಳ ಯತ್ನಿಸುತ್ತಿದ್ದಾರೆ. ಸಮಸ್ಯೆಯನ್ನ ಸ್ಥಳೀಯರೇ ಬಗೆಹರಿಸಿಕೊಂಡ್ರೂ ಮಹಾರಾಷ್ಟ್ರ ನಾಯಕರ ರಾಜಕಾರಣ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಕನ್ನಡಿಗರು-ಮರಾಠಿಗರ ನಡುವೆ ಕಿಚ್ಚು ಹಚ್ಚುತ್ತಿರುವ ಮಹಾರಾಷ್ಟ್ರ ರಾಜಕಾರಣಿಗಳು ಪೀರನವಾಡಿಯ ಮರಾಠಿ ಭಾಷಿಕರಿಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಸಿಎಂ ಯಡಿಯೂರಪ್ಪರಿಗೆ ಮಹಾರಾಷ್ಟ್ರದ ಸಚಿವ ಏಕನಾಥ ಶಿಂಧೆ ಪತ್ರ ಸಹ ರವಾಸಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆ ನಡೆಸುತ್ತಿದ್ದ ಮರಾಠಿ ಭಾಷಿಕರ ಮೇಲೆ ಲಾಠಿ […]
ಬೆಳಗಾವಿ: ಜಿಲ್ಲೆಯ ಪೀರನವಾಡಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಇದೀಗ ಉರಿಯೋ ಬೆಂಕಿಗೆ ತುಪ್ಪ ಸುರಿಯಲು ಮಹಾರಾಷ್ಟ್ರ ರಾಜಕಾರಣಿಗಳ ಯತ್ನಿಸುತ್ತಿದ್ದಾರೆ. ಸಮಸ್ಯೆಯನ್ನ ಸ್ಥಳೀಯರೇ ಬಗೆಹರಿಸಿಕೊಂಡ್ರೂ ಮಹಾರಾಷ್ಟ್ರ ನಾಯಕರ ರಾಜಕಾರಣ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಕನ್ನಡಿಗರು-ಮರಾಠಿಗರ ನಡುವೆ ಕಿಚ್ಚು ಹಚ್ಚುತ್ತಿರುವ ಮಹಾರಾಷ್ಟ್ರ ರಾಜಕಾರಣಿಗಳು ಪೀರನವಾಡಿಯ ಮರಾಠಿ ಭಾಷಿಕರಿಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಸಿಎಂ ಯಡಿಯೂರಪ್ಪರಿಗೆ ಮಹಾರಾಷ್ಟ್ರದ ಸಚಿವ ಏಕನಾಥ ಶಿಂಧೆ ಪತ್ರ ಸಹ ರವಾಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಟನೆ ನಡೆಸುತ್ತಿದ್ದ ಮರಾಠಿ ಭಾಷಿಕರ ಮೇಲೆ ಲಾಠಿ ಚಾರ್ಜ್ ಆಗಿದೆ. ಹೀಗಾಗಿ, ಮರಾಠಿ ಭಾಷಿಕರ ಮೇಲೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಹಿಂದೆ ಮನಗುತ್ತಿಯಲ್ಲಿ ಶಿವಾಜಿ ಮೂರ್ತಿ ತೆರವು ಮಾಡಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಸೇರಿ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪೀರನವಾಡಿ, ಮನಗುತ್ತಿ ವಿವಾದ ಬಗೆಹರಿಸುವಂತೆ ತಮ್ಮ ಪತ್ರದಲ್ಲಿ ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಉಲ್ಲೇಖಿಸಿದ್ದಾರೆ.