ಬೆಂಗಳೂರಲ್ಲಿ ಮತ್ತೊಮ್ಮೆ ಲಾಕ್​ಡೌನ್ ಘೋಷಿಸಲು ಇವೇ ಮುಖ್ಯ ಕಾರಣಗಳು

| Updated By: KUSHAL V

Updated on: Jul 15, 2020 | 6:28 PM

ಬೆಂಗಳೂರು: ಕಳೆದ 15 ದಿನಗಳಿಂದ ನಗರದಲ್ಲಿ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳನ್ನು ಗಮನಿಸಿ ಸೋಂಕಿನ ಹರಡುವಿಕೆಯನ್ನ ಹತೋಟಿಗೆ ತರಲು ಲಾಕ್​ಡೌನ್​ ಉತ್ತಮ ಸೂತ್ರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ, ಅವರು ನೀಡಿದ ಸಲಹೆ ಮೇರೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಿಟಿಯಲ್ಲಿ ಲಾಕ್​ಡೌನ್ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗುತ್ತಿದೆ. ಲಾಕ್​ಡೌನ್ ಅವಧಿಯಲ್ಲಿ ನಗರದ ಆಸ್ಪತ್ರೆಗಳ ಚಿಕಿತ್ಸಾ ಸಾಮರ್ಥ್ಯವನ್ನ ವೃದ್ಧಿಸುವುದು ಇದರ ಮತ್ತೊಂದು ಮುಖ್ಯ ಉದ್ದೇಶ ಎಂದು ತಿಳಿದುಬಂದಿದೆ. ಈ ಲಾಕ್​ಡೌನ್ ಅಸ್ತ್ರವನ್ನ ಬೆಂಗಳೂರಿಗರು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೋ ಅಷ್ಟರ ಮಟ್ಟಿಗೆ ಸರ್ಕಾರದ […]

ಬೆಂಗಳೂರಲ್ಲಿ ಮತ್ತೊಮ್ಮೆ ಲಾಕ್​ಡೌನ್ ಘೋಷಿಸಲು ಇವೇ ಮುಖ್ಯ ಕಾರಣಗಳು
Follow us on

ಬೆಂಗಳೂರು: ಕಳೆದ 15 ದಿನಗಳಿಂದ ನಗರದಲ್ಲಿ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳನ್ನು ಗಮನಿಸಿ ಸೋಂಕಿನ ಹರಡುವಿಕೆಯನ್ನ ಹತೋಟಿಗೆ ತರಲು ಲಾಕ್​ಡೌನ್​ ಉತ್ತಮ ಸೂತ್ರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ, ಅವರು ನೀಡಿದ ಸಲಹೆ ಮೇರೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಿಟಿಯಲ್ಲಿ ಲಾಕ್​ಡೌನ್ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗುತ್ತಿದೆ.

ಲಾಕ್​ಡೌನ್ ಅವಧಿಯಲ್ಲಿ ನಗರದ ಆಸ್ಪತ್ರೆಗಳ ಚಿಕಿತ್ಸಾ ಸಾಮರ್ಥ್ಯವನ್ನ ವೃದ್ಧಿಸುವುದು ಇದರ ಮತ್ತೊಂದು ಮುಖ್ಯ ಉದ್ದೇಶ ಎಂದು ತಿಳಿದುಬಂದಿದೆ. ಈ ಲಾಕ್​ಡೌನ್ ಅಸ್ತ್ರವನ್ನ ಬೆಂಗಳೂರಿಗರು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೋ ಅಷ್ಟರ ಮಟ್ಟಿಗೆ ಸರ್ಕಾರದ ಪ್ರಯತ್ನ ಸಫಲವಾಗುತ್ತದೆ. ಇಲ್ಲದಿದ್ದರೆ ಇದೂ ಸಹ ನೀರಿನಲ್ಲಿ ಹೋಮ ಮಾಡಿದಂತ್ತಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಹೀಗಾಗಿ, ಜನ ಇದರ ಗಂಭೀರತೆಯನ್ನ ಅರಿತು ತಮ್ಮ ತಮ್ಮ ಮನೆಗಳಲ್ಲಿಯೇ ಉಳಿಯಬೇಕು. ಆಗ ಮಾತ್ರ ಸಿಲಿಕಾನ್​ ಸಿಟಿಯ ಕೊರಳು ಹಿಸುಕುತ್ತಿರುವ ಕೊರೊನಾ ಸರಪಳಿಯ ಕೊಂಡಿಯನ್ನ ಮುರಿಯಲು ಸಾಧ್ಯವಾಗೋದು. ಇಲ್ಲದಿದ್ದಲ್ಲಿ ಚೈನ್ ಬ್ರೇಕ್ ಮಾಡುವ ಪ್ಲಾನ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದು ತಜ್ಞರ ಅನಿಸಿಕೆ.

Published On - 6:27 pm, Wed, 15 July 20