ತಮಗೆ ಮತ ಹಾಕಲಿಲ್ಲ ಅಂತಾ ಗ್ರಾಮಸ್ಥನ ಮನೆಗೆ ನುಗ್ಗಿ.. ಮನಬಂದಂತೆ ಹಲ್ಲೆ ಮಾಡಿದ ಸಹೋದರರು, ಯಾವೂರಲ್ಲಿ?

| Updated By: KUSHAL V

Updated on: Dec 22, 2020 | 7:18 PM

ರಮೇಶ್ ದೊಡ್ಡಮನಿ, ಮುದಕಪ್ಪ ದೊಡ್ಡಮನಿ ಎಂಬುವವರು ಅದೇ ಗ್ರಾಮದ ಬಸವರಾಜ್ ಎಂಬ ವ್ಯಕ್ತಿ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ತಮಗೆ ಮತ ಹಾಕಲಿಲ್ಲ ಅಂತಾ ಗ್ರಾಮಸ್ಥನ ಮನೆಗೆ ನುಗ್ಗಿ.. ಮನಬಂದಂತೆ  ಹಲ್ಲೆ ಮಾಡಿದ ಸಹೋದರರು, ಯಾವೂರಲ್ಲಿ?
ಹಲ್ಲೆಗೊಳಗಾದ ಬಸವರಾಜ್
Follow us on

ಗದಗ: ನಮಗೆ ಮತ ಹಾಕಿಲ್ಲ ಅಂತಾ ಅಮಾಯಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೊಂಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಮೊದಲನೇ ಹಂತದ ಮತದಾನ ನಡೆದಿದ್ದು, ಸಾರ್ವಜನಿಕರು ಉತ್ಸುಕರಾಗಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಕೆಲವೆಡೆ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದು ಉಂಟು. ಇದರ ಜೊತೆಗೆ ನಮಗೆ ಮತ ಹಾಕಿಲ್ಲ ಅಂತಾ ಅಮಾಯಕನ ಮೇಲೆ ಹಲ್ಲೆ ಮಾಡಿರುವ ಘಟನೆ ಸಹ ನಡೆದಿದೆ.

ರಮೇಶ್ ದೊಡ್ಡಮನಿ, ಮುದಕಪ್ಪ ದೊಡ್ಡಮನಿ ಎಂಬುವವರು ಅದೇ ಗ್ರಾಮದ ಬಸವರಾಜ್ ಎಂಬುವವನ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬಸವರಾಜ್ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.