ಇದು ‘ಸಮಾಜ ಕಲ್ಯಾಣ’ ಇಲಾಖೆಯ ವರಸೆ: ವ್ಯಕ್ತಿ ಆತ್ಮಹತ್ಯೆಗೆ ಯತ್ನ, ಎಲ್ಲಿ?
ರಾಯಚೂರು: ರಾಜೀನಾಮೆ ಅಂಗೀಕರಿಸದ ಹಿನ್ನೆಲೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ನಡೆದಿದೆ. ಶರಣಪ್ಪ ಮೇಟಿ ಎಂಬುವವರಿಂದ ಯತ್ನ ನಡೆದಿದೆ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶರಣಪ್ಪ ಸರ್ಕಾರಿ ವಸತಿ ಶಾಲೆಯ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡ್ತಿದ್ದ. ಈ ನಡುವೆ ಶರಣಪ್ಪನಿಗೆ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಾತಿ ದೊರಕಿತು. ಇದು ‘ಸಮಾಜ ಕಲ್ಯಾಣ’ ಇಲಾಖೆಯ ವರಸೆ ಕಾವಲುಗಾರನ ಹುದ್ದೆಗೆ ಶರಣಪ್ಪ ಮೇಟಿ ರಾಜೀನಾಮೆ ನೀಡಿದ್ದ. ಆದರೆ, ಕಳೆದ […]
ರಾಯಚೂರು: ರಾಜೀನಾಮೆ ಅಂಗೀಕರಿಸದ ಹಿನ್ನೆಲೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ನಡೆದಿದೆ. ಶರಣಪ್ಪ ಮೇಟಿ ಎಂಬುವವರಿಂದ ಯತ್ನ ನಡೆದಿದೆ.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶರಣಪ್ಪ ಸರ್ಕಾರಿ ವಸತಿ ಶಾಲೆಯ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡ್ತಿದ್ದ. ಈ ನಡುವೆ ಶರಣಪ್ಪನಿಗೆ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಾತಿ ದೊರಕಿತು.
ಇದು ‘ಸಮಾಜ ಕಲ್ಯಾಣ’ ಇಲಾಖೆಯ ವರಸೆ ಕಾವಲುಗಾರನ ಹುದ್ದೆಗೆ ಶರಣಪ್ಪ ಮೇಟಿ ರಾಜೀನಾಮೆ ನೀಡಿದ್ದ. ಆದರೆ, ಕಳೆದ ಒಂದು ವರ್ಷದಿಂದ ಈತನ ರಾಜೀನಾಮೆಯನ್ನ ಅಧಿಕಾರಿಗಳು ಅಂಗೀಕರಿಸಿಲ್ಲ. ಜೊತೆಗೆ, ಕಳೆದ 1 ವರ್ಷದಿಂದ ಸಂಬಳ ಆಗಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಆತ್ಮಹತ್ಯೆ ಯತ್ನವನ್ನ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ತಡೆದಿದ್ದಾರೆ.