2ನೇ ಮದುವೆ ಪ್ರಶ್ನಿಸಿದ ಮೊದಲ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಪತಿ

|

Updated on: May 29, 2020 | 3:06 PM

ಬಾಗಲಕೋಟೆ: 2ನೇ ಮದುವೆ ಪ್ರಶ್ನಿಸಿದ ಮೊದಲ ಪತ್ನಿಗೆ ಪತಿಯಿಂದ ಹಲ್ಲೆ ನಡೆದಿರುವ ಘಟನೆ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟಿ ತಾಂಡಾದಲ್ಲಿ ನಡೆದಿದೆ. ಭಾರತಿ ಪಮ್ಮಾರ ಹಲ್ಲೆಗೆ ಒಳಗಾದ ಮಹಿಳೆ. ಕುರಿ ವ್ಯಾಪಾರಿಯಾಗಿರುವ ಶಂಕರ್ ಪಮ್ಮಾರ, ಮೂರು ತಿಂಗಳ ಹಿಂದೆ ಶಾರದಾ ಎಂಬುವಳ ಜೊತೆ ಮದುವೆಯಾಗಿದ್ದ. ಎರಡನೇ ಪತ್ನಿಯನ್ನು ಮನೆಗೆ ಕರೆತಂದಿದ್ದಾನೆ. ಈ ವೇಳೆ ಮೊದಲ ಪತ್ನಿ ಭಾರತಿ ಪಮ್ಮಾರ್, ಈ ಬಗ್ಗೆ ಪ್ರಶ್ನಿಸಿದಕ್ಕೆ ಕೂದಲು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆಗೈದಿದ್ದಾನೆ. ಅಲ್ಲದೆ 15 ವರ್ಷದ ಸುಪ್ರೀತಾ ಎಂಬ ಮಗಳ‌ […]

2ನೇ ಮದುವೆ ಪ್ರಶ್ನಿಸಿದ ಮೊದಲ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಪತಿ
Follow us on

ಬಾಗಲಕೋಟೆ: 2ನೇ ಮದುವೆ ಪ್ರಶ್ನಿಸಿದ ಮೊದಲ ಪತ್ನಿಗೆ ಪತಿಯಿಂದ ಹಲ್ಲೆ ನಡೆದಿರುವ ಘಟನೆ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟಿ ತಾಂಡಾದಲ್ಲಿ ನಡೆದಿದೆ. ಭಾರತಿ ಪಮ್ಮಾರ ಹಲ್ಲೆಗೆ ಒಳಗಾದ ಮಹಿಳೆ.

ಕುರಿ ವ್ಯಾಪಾರಿಯಾಗಿರುವ ಶಂಕರ್ ಪಮ್ಮಾರ, ಮೂರು ತಿಂಗಳ ಹಿಂದೆ ಶಾರದಾ ಎಂಬುವಳ ಜೊತೆ ಮದುವೆಯಾಗಿದ್ದ. ಎರಡನೇ ಪತ್ನಿಯನ್ನು ಮನೆಗೆ ಕರೆತಂದಿದ್ದಾನೆ. ಈ ವೇಳೆ ಮೊದಲ ಪತ್ನಿ ಭಾರತಿ ಪಮ್ಮಾರ್, ಈ ಬಗ್ಗೆ ಪ್ರಶ್ನಿಸಿದಕ್ಕೆ ಕೂದಲು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆಗೈದಿದ್ದಾನೆ. ಅಲ್ಲದೆ 15 ವರ್ಷದ ಸುಪ್ರೀತಾ ಎಂಬ ಮಗಳ‌ ಮೇಲೂ ಹಲ್ಲೆ ನಡೆಸಿದ್ದಾನೆ.

ಭಾರತಿ‌ ಮತ್ತು ಶಂಕರ್ ಮದುವೆಯಾಗಿ‌ 20 ವರ್ಷ ಆಗಿದೆ. ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ಇವರಿಬ್ಬರ ‌ಮಧ್ಯೆ ಜಗಳವಾಗಿತ್ತು. ಹೀಗಾಗಿ ಭಾರತಿ ತಾಂಡಾದಲ್ಲಿ ಬೇರೆ ಮನೆ ಮಾಡಿಕೊಂಡು ಮಕ್ಕಳ‌‌ ಜೊತೆಗಿದ್ದಳು.

ಎರಡನೇ ಮದುವೆಯಾಗಿ ಮನೆಗೆ ಬಂದ ಮೇಲೆ ಜಗಳವಾಗಿದೆ. ಭಾರತಿ ಕುತ್ತಿಗೆ, ಕೈಗೆ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 8:27 am, Fri, 29 May 20