AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಜೆಸ್ಟಿಕ್​ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ದಿಢೀರನೆ ಬಂದಿದ್ದೇಕೆ? ಏನಾಯ್ತಲ್ಲಿ?

ಬೆಂಗಳೂರು: ಮಹಾನಗರದ ಪ್ರತಿಷ್ಠಿತ ನಗರ ಸಂಚಾರಿ ಬಸ್ ನಿಲ್ದಾಣ ಹಿಂದೆಂದೂ ಇಂತಹ ಆತಂಕದ ವಾತಾವರಣಕ್ಕೆ ಸಾಕ್ಷಿಯಾಗಿರಲಿಲ್ಲ. ಆದ್ರೆ ಇಂದು ಬೆಳಗ್ಗೆ ಮಹಾಮಾರಿ ಕೊರೊನಾ ಭಾರೀ ಆತಂಕದ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿದೆ. ಬೆಂ.ಬ.ನಿ.ದಲ್ಲಿದ್ದ ಬೆರಳೆಣಿಕೆ ಜನ ಇದನ್ನು ಕಂಡು ಹೌಹಾರಿದ್ದಾರೆ. ಇನ್ನು ಪಹರೆಯಲ್ಲಿದ್ದ ಪೊಲೀಸರು ಮತ್ತು ಬಸ್ ಸಿಬ್ಬಂದಿಯೇ ಮುಂದೆ ಬಂದು ಏನಾಗಿದೆ ಎಂದು ನೋಡುವಷ್ಟರಲ್ಲಿ ವ್ಯಕ್ತಿಯೊಬ್ಬ ದಿಢೀರನೆ ಕುಸಿದುಬಿದ್ದಿದ್ದಾನೆ. ಮೆಜೆಸ್ಟಿಕ್​ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ದಿಢೀರನೆ ಕುಸಿದು ಬಿದ್ದಿದ್ದಾನೆ. ತೀವ್ರ ಜ್ವರದಿಂದ ಆತ ಬಳಲುತ್ತಿರುವ ಕಾರಣ […]

ಮೆಜೆಸ್ಟಿಕ್​ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ದಿಢೀರನೆ ಬಂದಿದ್ದೇಕೆ? ಏನಾಯ್ತಲ್ಲಿ?
ಸಾಧು ಶ್ರೀನಾಥ್​
| Updated By: |

Updated on:Jun 26, 2020 | 12:42 PM

Share

ಬೆಂಗಳೂರು: ಮಹಾನಗರದ ಪ್ರತಿಷ್ಠಿತ ನಗರ ಸಂಚಾರಿ ಬಸ್ ನಿಲ್ದಾಣ ಹಿಂದೆಂದೂ ಇಂತಹ ಆತಂಕದ ವಾತಾವರಣಕ್ಕೆ ಸಾಕ್ಷಿಯಾಗಿರಲಿಲ್ಲ. ಆದ್ರೆ ಇಂದು ಬೆಳಗ್ಗೆ ಮಹಾಮಾರಿ ಕೊರೊನಾ ಭಾರೀ ಆತಂಕದ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿದೆ. ಬೆಂ.ಬ.ನಿ.ದಲ್ಲಿದ್ದ ಬೆರಳೆಣಿಕೆ ಜನ ಇದನ್ನು ಕಂಡು ಹೌಹಾರಿದ್ದಾರೆ. ಇನ್ನು ಪಹರೆಯಲ್ಲಿದ್ದ ಪೊಲೀಸರು ಮತ್ತು ಬಸ್ ಸಿಬ್ಬಂದಿಯೇ ಮುಂದೆ ಬಂದು ಏನಾಗಿದೆ ಎಂದು ನೋಡುವಷ್ಟರಲ್ಲಿ ವ್ಯಕ್ತಿಯೊಬ್ಬ ದಿಢೀರನೆ ಕುಸಿದುಬಿದ್ದಿದ್ದಾನೆ.

ಮೆಜೆಸ್ಟಿಕ್​ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ದಿಢೀರನೆ ಕುಸಿದು ಬಿದ್ದಿದ್ದಾನೆ. ತೀವ್ರ ಜ್ವರದಿಂದ ಆತ ಬಳಲುತ್ತಿರುವ ಕಾರಣ ಆತನನ್ನು ಮುಟ್ಟಲು ಭಯಪಡುತ್ತಿದ್ದಾರೆ. ಸುಮಾರು 1 ಗಂಟೆಗಳ ಕಾಲ ಆತ ಮಲಗಿದ್ದಲ್ಲಿಯೇ ಇದ್ದ. ಕೊನೆಗೆ BMTC ಸಿಬ್ಬಂದಿ ನೀರು ಕುಡಿಸಲು ಪ್ರಯತ್ನ ಪಟ್ಟಿದ್ದಾರೆ.

ಆ್ಯಂಬುಲೆನ್ಸ್ ಬಂದರು ವ್ಯಕ್ತಿಯನ್ನು ಮುಟ್ಟಲು ಭಯ ಬೀಳುತ್ತಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Published On - 12:29 pm, Fri, 26 June 20