ವಿಡಿಯೋ ಮಾಡಿ ಅಣ್ಣನಿಗೆ ಶೇರ್ ಮಾಡ್ದ, ಕೊನೆಗೆ ಯಾಕಿಂಗ್ ಮಾಡ್ಕೊಂಡ?
ತುಮಕೂರು: ಯುವಕನೋರ್ವ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಗ್ರಾಮದ ಬಳಿ ನಡೆದಿದೆ. ಕೊಡ್ಲಹಳ್ಳಿ ಗ್ರಾಮದ ನಿವಾಸಿ 25 ವರ್ಷದ ಮಧು ಮೃತ ದುರ್ದೈವಿ. ಈತ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲ ಎಂದು ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ. ಸಾಯುವ ಮುನ್ನ ವಿಡಿಯೋ ಮಾಡಿದ್ದಾನೆ ಅದರಲ್ಲಿ 10 ನಿಮಿಷದಲ್ಲಿ ನಾನು ಸಾಯುತ್ತೇನೆ. ಬಾಯ್ ಮಚ್ಚ ಎಂದು ಅತ್ತಿದ್ದಾನೆ. ಸೆಲ್ಫಿ ವಿಡಿಯೋ ಅಣ್ಣನಿಗೆ ಕಳುಹಿಸಿ […]
ತುಮಕೂರು: ಯುವಕನೋರ್ವ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಗ್ರಾಮದ ಬಳಿ ನಡೆದಿದೆ. ಕೊಡ್ಲಹಳ್ಳಿ ಗ್ರಾಮದ ನಿವಾಸಿ 25 ವರ್ಷದ ಮಧು ಮೃತ ದುರ್ದೈವಿ.
ಈತ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲ ಎಂದು ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ. ಸಾಯುವ ಮುನ್ನ ವಿಡಿಯೋ ಮಾಡಿದ್ದಾನೆ ಅದರಲ್ಲಿ 10 ನಿಮಿಷದಲ್ಲಿ ನಾನು ಸಾಯುತ್ತೇನೆ. ಬಾಯ್ ಮಚ್ಚ ಎಂದು ಅತ್ತಿದ್ದಾನೆ. ಸೆಲ್ಫಿ ವಿಡಿಯೋ ಅಣ್ಣನಿಗೆ ಕಳುಹಿಸಿ ನಂತರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಣಕಾಸಿನ ಸಮಸ್ಯೆಯೇ ಸಾವಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಮಾಹಿತಿ ಸಿಕ್ಕಿಲ್ಲ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.