ಭಾರಿ ಮಳೆಗೆ ಕುಸಿದು ಬಿತ್ತು ಛಾವಣಿ.. ಏಕಾಂಗಿಯಾದ್ಳು ಅಜ್ಜಿ
ಚಿಕ್ಕಬಳ್ಳಾಪುರ: ಮಳೆಗೆ ಮನೆಯ ಮೇಲ್ಛಾವಣಿ ಕುಸಿದುಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ಜಾತವಾರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ(70) ಮೃತ ದುರ್ದೈವಿ. ಘಟನೆಯಲ್ಲಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಛಾವಣಿ ಕುಸಿದಿದೆ. ಈ ಪರಿಣಾಮ ಇಂತಹ ದುರಂತ ಘಟನೆಗೆ ಕಾರಣವಾಗಿದೆ. ಛಾವಣಿ ಕುಸಿದು ಆಶ್ರಯದಾತನಾಗಿ, ತನಗೆ ನೆರಳಾಗಿ ಜೊತೆ ಇದ್ದ ಗಂಡನನ್ನು ಪತ್ನಿ ಕಳೆದುಕೊಂಡಿದ್ದಾಳೆ. ಗಂಡನ ಶವದ ಮುಂದೆ ಅಜ್ಜಿಯ ಕಣ್ಣೀರು ವರ್ಷಧಾರೆಯನ್ನೇ ಶಪಿಸುವಂತಿದೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ: ಮಳೆಗೆ ಮನೆಯ ಮೇಲ್ಛಾವಣಿ ಕುಸಿದುಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ಜಾತವಾರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ(70) ಮೃತ ದುರ್ದೈವಿ. ಘಟನೆಯಲ್ಲಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಛಾವಣಿ ಕುಸಿದಿದೆ. ಈ ಪರಿಣಾಮ ಇಂತಹ ದುರಂತ ಘಟನೆಗೆ ಕಾರಣವಾಗಿದೆ. ಛಾವಣಿ ಕುಸಿದು ಆಶ್ರಯದಾತನಾಗಿ, ತನಗೆ ನೆರಳಾಗಿ ಜೊತೆ ಇದ್ದ ಗಂಡನನ್ನು ಪತ್ನಿ ಕಳೆದುಕೊಂಡಿದ್ದಾಳೆ. ಗಂಡನ ಶವದ ಮುಂದೆ ಅಜ್ಜಿಯ ಕಣ್ಣೀರು ವರ್ಷಧಾರೆಯನ್ನೇ ಶಪಿಸುವಂತಿದೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.