ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿ ಹಣ ಕೊಡದೆ ಎಸ್ಕೇಪ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡ ಕಾರು ಚಾಲಕನೊಬ್ಬ ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪುಂಡಾಟ ಮೆರೆದಿದ್ದಾನೆ. ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿಕೊಂಡು ಕಾಸು ಕೊಡದೇ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿಯ ಮುನ್ನೇಕೊಳಾಲಿನ ಎನ್.ಎನ್ ಆ್ಯಂಡ್ ಸನ್ಸ್ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ. ಕಾರ್ ಚಾಲಕ ಪರಾರಿ ದೃಶ್ಯ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗಸ್ಟ್ 13ರ ಬೆಳಗ್ಗಿನ ಜಾವ 2:45ರ ಸುಮಾರಿಗೆ ನೊಂದಣಿ ಸಹ ಆಗದ ಕಾರಿನಲ್ಲಿ‌ ಬಂದಿದ್ದ ಚಾಲಕ 4 ಸಾವಿರ ರೂ‌ಪಾಯಿಗೆ ಪೆಟ್ರೋಲ್ […]

ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿ ಹಣ ಕೊಡದೆ ಎಸ್ಕೇಪ್
ಆಯೇಷಾ ಬಾನು

Updated on: Aug 20, 2020 | 7:29 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡ ಕಾರು ಚಾಲಕನೊಬ್ಬ ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪುಂಡಾಟ ಮೆರೆದಿದ್ದಾನೆ. ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿಕೊಂಡು ಕಾಸು ಕೊಡದೇ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿಯ ಮುನ್ನೇಕೊಳಾಲಿನ ಎನ್.ಎನ್ ಆ್ಯಂಡ್ ಸನ್ಸ್ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ. ಕಾರ್ ಚಾಲಕ ಪರಾರಿ ದೃಶ್ಯ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಗಸ್ಟ್ 13ರ ಬೆಳಗ್ಗಿನ ಜಾವ 2:45ರ ಸುಮಾರಿಗೆ ನೊಂದಣಿ ಸಹ ಆಗದ ಕಾರಿನಲ್ಲಿ‌ ಬಂದಿದ್ದ ಚಾಲಕ 4 ಸಾವಿರ ರೂ‌ಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಕ್ ಮಾಲಿಕ ಕಿರಣ್ ನಾಗರಾಜ್ ಮಾರತ್ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us