Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಗೇಜ್ಮೆಂಟ್ ಮಾಡಿಕೊಂಡು ಗೋವಾ ಟ್ರಿಪ್ ಬಳಿಕ ಮದುವೆ ಬೇಡವೆಂದ ಯುವಕ.. ಕಾನೂನು ಹೋರಾಟಕ್ಕೆ ನಿಂತ ಯುವತಿ

ಗ್ರಾಂಡ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡು ಈಗ ಮದುವೆಯಾಗಲ್ಲ ಎಂದು ಹೇಳಿ ಈ ಪ್ರಾಫಿಟ್ ಸಂಸ್ಥೆ ಮಾಲೀಕ ಮೋಸ ಮಾಡ್ತಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಎಂಗೇಜ್ಮೆಂಟ್ ಆಗಿ ಮದುವೆ ನಿಶ್ಚಯವಾಗಿದ್ದ ಹುಡುಗಿ ಬೇಡಾ ಎಂದ ಹುಡುಗನಿಂದ ನ್ಯಾಯ ಕೊಡಿಸಿ ಎಂದು ಯುವತಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಎಂಗೇಜ್ಮೆಂಟ್ ಮಾಡಿಕೊಂಡು ಗೋವಾ ಟ್ರಿಪ್ ಬಳಿಕ ಮದುವೆ ಬೇಡವೆಂದ ಯುವಕ.. ಕಾನೂನು ಹೋರಾಟಕ್ಕೆ ನಿಂತ ಯುವತಿ
ಎಂಗೇಜ್ಮೆಂಟ್ ಮಾಡಿಕೊಂಡು ಮದುವೆ ನಿರಾಕರಿಸಿದ ನಿಶ್ಚಿತ್
Follow us
ಆಯೇಷಾ ಬಾನು
|

Updated on: Mar 12, 2021 | 9:22 AM

ಹಾಸನ: ಗೋವಾ ಪ್ರವಾಸದಲ್ಲಿ ತಾನು ಬಯಸಿದಂತೆ ಇರದ ಆರೋಪಕ್ಕೆ ನಿಶ್ಚಿತಾರ್ಥವಾಗಿದ್ದ ಯುವತಿಯ ಜತೆ ಯುವಕ ಮದುವೆ ನಿರಾಕರಿಸಿದ್ದು ಯುವಕನ ವಿರುದ್ಧ ಯುವತಿ ಪೋಷಕರು ಪೊಲೀಸ್ ಮೊರೆ ಹೋಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ಗ್ರಾಂಡ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡು ಈಗ ಮದುವೆಯಾಗಲ್ಲ ಎಂದು ಹೇಳಿ ಈ ಪ್ರಾಫಿಟ್ ಸಂಸ್ಥೆ ಮಾಲೀಕ ಮೋಸ ಮಾಡ್ತಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಎಂಗೇಜ್ಮೆಂಟ್ ಆಗಿ ಮದುವೆ ನಿಶ್ಚಯವಾಗಿದ್ದ ಹುಡುಗಿ ಬೇಡಾ ಎಂದ ಹುಡುಗನಿಂದ ನ್ಯಾಯ ಕೊಡಿಸಿ ಎಂದು ಯುವತಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇಂಜಿನಿಯರಿಂಗ್ ಮಾಡಿದ್ದ ಹುಡುಗಿಗೆ ಈ ಪ್ರಾಫಿಟ್ ಸಂಸ್ಥೆ ಮಾಲೀಕ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರ ಚಿನ್ನಿಗ ಗ್ರಾಮದ ನಿಶ್ಚಿತ್ ಎಂಬ ಯುವಕ ತಾನು ಬೆಂಗಳೂರಿನ ಕೋರಮಂಗಲದಲ್ಲಿ ಈ ಪ್ರಾಫಿಟ್ ಕಂಪನಿ ನಡೆಸುತ್ತಿರೋದಾಗಿ ಹೇಳಿಕೊಂಡಿದ್ದ. ಖಾಸಗಿ ಸಂಸ್ಥೆಯ ಮಾಲೀಕನೆಂದು ನಂಬಿ ಯುವತಿ ಪೋಷಕರು ಗ್ರಾಂಡಾಗಿ ಎಂಗೇಜ್ಮೆಂಟ್ ಮಾಡಿಕೊಟ್ಟಿದ್ದರು. ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಇವರಿಬ್ಬರ ಎಂಗೇಜ್ಮೆಂಟ್ ನೆರವೇರಿತ್ತು.

Hassan Engagement Cancel

ಎಂಗೇಜ್ಮೆಂಟ್ ವೇಳೆ ತೆಗೆಸಿದ ಫೋಟೋ 

ಮದುವೆ ಮಾತುಕತೆ ಬಳಿಕ ಇಬ್ಬರೂ ಗೋವಾ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ತಾನು ಹೇಳಿದಂತೆ ತನ್ನೊಟ್ಟಿಗೆ ಇರಲಿಲ್ಲ ಎನ್ನೋ ಕಾರಣಕ್ಕಾಗಿ ಹುಡುಗಿ ಜೊತೆ ಸಂಬಂಧ ಕಡಿದುಕೊಳ್ಳೋದಾಗಿ ಯುವತಿ ಪೋಕ್ಷಕರಿಗೆ ಯುವಕ ತಿಳಿಸಿದ್ದಾನೆ. ಅಲ್ಲದೆ ಇದೀಗ ಏಕಾಏಕಿ ಮದುವೆ ಬೇಡಾ ಎಂದು ಯುವಕನ ಪೋಷಕರು ಹೇಳಿದ್ದಾರೆ. ಹೀಗಾಗಿ ಯುವತಿ ಪೋಷಕರಲ್ಲಿ ಆತಂಕ ಶುರುವಾಗಿದೆ. ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಇನ್ನು ಭಾವಿ ಪತಿ ನಿಶ್ಚಿತ್ ಹೇಳಿದಂತೆ ಯುವತಿ ಸಹ ಕೆಲಸವನ್ನೂ ಬಿಟ್ಟು ಮದುವೆಗೆ ರೆಡಿಯಾಗಿದ್ದಳು. ಆದ್ರೆ ಗೋವಾ ಪ್ರವಾಸದ ಬಳಿಕ ನಿಶ್ಚಿತ್​ನ ನಿರ್ಧಾರ ಕೇಳಿ ಯುವತಿಕೆ ಶಾಕ್ ಆಗಿದೆ. ಮನನೊಂದು ವಿಷ ಸೇವಿಸಿದ್ದಾಳೆ. ಸದ್ಯ ಯುವತಿಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತಮಗೆ ನ್ಯಾಯ ಕೊಡಿಸುವಂತೆ ಬೇಲೂರು ಪೊಲೀಸ್ ಠಾಣೆಗೆ ಯುವತಿ ಪೋಷಕರು ದೂರು ನೀಡಿದ್ದಾರೆ.

ಮೇ 9 ಕ್ಕೆ ಮದುವೆ ನಿಶ್ಚಯ ಮಾಡಿ, ಮದುವೆ ಮಂಟಪವೂ ಬುಕ್ ಆಗಿದೆ. ಆದ್ರೆ ಈಗ ಮದುವೆಯಾಗ ಬೇಕಿದ್ದ ವರ, ಮದುವೆ ಬೇಡ ಎಂದು ಕೂತಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು, ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಲು ಸಿದ್ಧವಾಗಿದ್ದ ಯುವತಿ ಕೆಲಸವೂ ಇಲ್ಲದೆ, ಮದುವೆಯೂ ಇಲ್ಲದೆ ಅತಂತ್ರಳಾಗಿದ್ದಾಳೆ. ಇದೀಗ ಮದುವೆ ಕ್ಯಾನ್ಸಲ್ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನಿಂತಿದ್ದಾಳೆ.

Hassan Engagement Cancel

ಎಂಗೇಜ್ಮೆಂಟ್ ವೇಳೆ ತೆಗೆಸಿದ ಫೋಟೋ

Hassan Engagement Cancel

ಎಂಗೇಜ್ಮೆಂಟ್ ವೇಳೆ ತೆಗೆಸಿದ ಫೋಟೋ

ಇದನ್ನೂ ಓದಿ: ಮದುವೆ ನಿರಾಕರಿಸಿದಕ್ಕೆ 15 ವರ್ಷದ ಅಪ್ರಾಪ್ತೆಯನ್ನೇ ಕಿಡ್ನಾಪ್ ಮಾಡಿದ್ರಾ ಯುವಕನ ಪೋಷಕರು?

ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್